ರೂಲ್ಸ್‌ ಬ್ರೇಕ್‌ ಮಾಡೋದ್ರಲ್ಲಿ ಬಿಎಂಟಿಸಿಯೇ ನಂ.1 – ಬೆಂಗಳೂರಿನಲ್ಲಿ ಬಸ್ ಚಾಲಕರ ನಿರ್ಲಕ್ಷ್ಯದಿಂದ ಅಪಘಾತಗಳ ಸಂಖ್ಯೆ ಹೆಚ್ಚಳ!

ರೂಲ್ಸ್‌ ಬ್ರೇಕ್‌ ಮಾಡೋದ್ರಲ್ಲಿ ಬಿಎಂಟಿಸಿಯೇ ನಂ.1 – ಬೆಂಗಳೂರಿನಲ್ಲಿ ಬಸ್ ಚಾಲಕರ ನಿರ್ಲಕ್ಷ್ಯದಿಂದ ಅಪಘಾತಗಳ ಸಂಖ್ಯೆ ಹೆಚ್ಚಳ!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ ಚಾಲಕರು ನಿರ್ಲಕ್ಷ್ಯದಿಂದಾಗಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಲೇ ಇದೆ. ಕಳೆದ ಮೂರು ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಮತ್ತಷ್ಟೂ ಹೆಚ್ಚಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮಿಚಾಂಗ್‌ ಚಂಡಮಾರುತದ ರೌದ್ರಾವತಾರ – ಸಾವಿನ ಸಂಖ್ಯೆ 27 ಕ್ಕೆ ಏರಿಕೆ

ಹೌದು, ರಾಜ್ಯ ರಾಜಧಾನಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಳೆದ ಒಂದು ವರ್ಷದಲ್ಲಿ ಒಂದು ವರ್ಷದಲ್ಲಿ ಬಿಎಂಟಿಸಿ ಬಸ್ ಅಪಘಾತದಿಂದ 34 ಮಂದಿ ಮೃತಪಟ್ಟಿದ್ದಾರೆ. ಬರೋಬ್ಬರಿ 97 ಅಪಘಾತಗಳು ಸಂಭವಿಸಿದೆ. ಕೆಎಸ್‍ಆರ್‌ಟಿಸಿ ಅಪಘಾತದಿಂದ ಹತ್ತು ಮಂದಿ ಸಾವನ್ನಪ್ಪಿದ್ರೆ, 28 ಅಪಘಾತಗಳಾಗಿರೋ ವರದಿ ಆಗಿದೆ. ಸಂಚಾರಿ ನಿಯಮ ಉಲ್ಲಂಘಿಸುವುದರಲ್ಲಿಯೂ ಕೆಎಸ್‍ಆರ್ ಟಿಸಿಗಿಂತ ಬಿಎಂಟಿಸಿಯೇ ಹೆಚ್ಚಿದೆ. 13,917 ಬಾರಿ ಬಿಎಂಟಿಸಿ ಸಂಚಾರಿ ನಿಯಮ ಉಲ್ಲಂಘಿಸಿದ್ರೆ, ಕೆಎಸ್‍ಆರ್ ಟಿಸಿ 3,347 ಬಾರಿ ಬ್ರೇಕ್ ಮಾಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಂಚಾರಿ ನಿಯಮಗಳನ್ನ ಉಲ್ಲಂಘಿಸ್ತಿರೋ ಬಿಎಂಟಿಸಿ ಮತ್ತು ಕೆಎಸ್‍ಆರ್ ಟಿಸಿಗೆ ಸಂಚಾರಿ ಇಲಾಖೆ ಛಾಟಿ ಬೀಸಿದೆ. ಎರಡೂ ಸಾರಿಗೆ ಇಲಾಖೆಗೆ ದಂಡ ಕಟ್ಟಲು ಪತ್ರ ಬರೆದಿದ್ದ ಬೆನ್ನಲ್ಲೇ ಕೋಟ್ಯಂತರ ದಂಡ ಪಾವತಿಯಾಗಿದೆ. ಒಂದು ಕೋಟಿ ನಾಲ್ಕು ಲಕ್ಷದ ಹತ್ತು ಸಾವಿರ ದಂಡ ಬಿಎಂಟಿಸಿ ಪಾವತಿಸಿದೆ. 14 ಲಕ್ಷ ದಂಡವನ್ನು ಕೆಎಸ್‍ಆರ್ ಟಿಸಿ ಕಟ್ಟಿದೆ. ಇದೀಗ ಸಂಚಾರಿ ನಿಯಮಗಳನ್ನ ಉಲ್ಲಂಘಿಸಿ ಅಪಘಾತಗಳನ್ನ ಹೆಚ್ಚು ಮಾಡುವರ ವಿರುದ್ದ ಕ್ರಮಕ್ಕೆ ಸೂಚನೆ ಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Shwetha M