RCB ಆಟಗಾರರಿಗೆ BCCI ಅನ್ಯಾಯ!- ತುಳಿದ ಗಂಭೀರ್‌ಗೆ ಕುಲದೀಪ್ ಡಿಚ್ಚಿ
MI ಕ್ಯಾಪ್ಟನ್ ರೋಹಿತ್ ಶರ್ಮಾ?

RCB ಆಟಗಾರರಿಗೆ BCCI ಅನ್ಯಾಯ!- ತುಳಿದ ಗಂಭೀರ್‌ಗೆ ಕುಲದೀಪ್ ಡಿಚ್ಚಿMI ಕ್ಯಾಪ್ಟನ್ ರೋಹಿತ್ ಶರ್ಮಾ?

ಕ್ರಿಕೆಟ್‌ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು  

NEET ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಯುವರಾಜ್ ಸಿಂಗ್ ಪೋಸ್ಟ್ ಮಾಡಿ ಬೆಂಬಲ ಸೂಚಿಸಿದ್ದಾರೆ. ಪ್ರತಿಯೊಬ್ಬ ಮಗು, ವಿದ್ಯಾರ್ಥಿ, ಮಹಿಳೆ ಮತ್ತು ಪುರುಷ—ನೀವೆಲ್ಲರೂ ಶಾಂತಿಯುತವಾಗಿ ಕಲಿಯಲು ಅರ್ಹರು. ನಿಮ್ಮ ಯೋಗಕ್ಷೇಮವೇ ಉಜ್ವಲ ಭಾರತದ ಅಡಿಪಾಯ. ಬನ್ನಿ, ನಾವೆಲ್ಲರೂ ಒಟ್ಟಾಗಿ ಕಾಳಜಿ, ಅವಕಾಶ ಮತ್ತು ಭರವಸೆಯ ಸಮುದಾಯಗಳನ್ನು ನಿರ್ಮಿಸೋಣ. ಭಾರತದ ಭವಿಷ್ಯದ ಹಿತದೃಷ್ಟಿಯಿಂದ, ಸೌಹಾರ್ದಯುತ ಮಾತುಕತೆಯ ಮೂಲಕ ನಾವೊಂದು ಉತ್ತಮ ಪರಿಹಾರವನ್ನು ಕಂಡುಕೊಳ್ಳಬಹುದು ಎಂದಿದ್ದಾರೆ.

ಕೊಹ್ಲಿ ಟೆಸ್ಟ್ ತಂಡವನ್ನು ಮುನ್ನಡೆಸಲು ಇನ್ನೂ ಕನಿಷ್ಠ 2 ರಿಂದ 3 ವರ್ಷಗಳ ಕಾಲ ಸಮರ್ಥರಾಗಿದ್ದರು ಎಂದು  ಮಾಜಿ ಆಟಗಾರ ಮದನ್ ಲಾಲ್  ಹೇಳಿದ್ದಾರೆ. ಕೊಹ್ಲಿ ಟೆಸ್ಟ್ ತಂಡವನ್ನು ಮುನ್ನಡೆಸಲು ಇನ್ನೂ ಕನಿಷ್ಠ 2 ರಿಂದ 3 ವರ್ಷಗಳ ಕಾಲ ಸಮರ್ಥರಾಗಿದ್ದರು. ಹೀಗಾಗಿ ಅವರನ್ನೇ ನಾಯಕತ್ವದಲ್ಲೇ ಮುಂದುವರಿಯುವಂತೆ ಬಿಸಿಸಿಐ ಮನವೊಲಿಸಬೇಕಿತ್ತು. ಆದರೆ ಬಿಸಿಸಿಐ ಆಗಲಿ, ಆಯ್ಕೆ ಸಮಿತಿ ಆಗಲಿ ಅಂತಹ ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ಮದನ್ ಲಾಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  ಟಾಕ್ಸಿಕ್ ಸಿನಿಮಾ ವಯಸ್ಕರಿಗೆ ಮಾತ್ರ ಯಾಕೆ? – ಮಕ್ಕಳನ್ನು ಕರೆತರಲೇಬೇಡಿ ಎಂದಿದ್ಯಾಕೆ ನಿರ್ಮಾಪಕರು

ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಬದಲಾವಣೆಯಾಗುವ ಚರ್ಚೆಗಳು ಹೆಚ್ಚಾಗಿವೆ. ತಿಲಕ್ ವರ್ಮಾ  ಅಥವಾ ಜಸ್ಪ್ರೀತ್ ಬುಮ್ರಾ ಇಬ್ಬರಲ್ಲಿ ಒಬ್ಬರು ಆಗಬಹದು ಎನ್ನಲಾಗ್ತಿದೆ. ಇದರ ಮಧ್ಯೆ MI ಮಾಲೀಕರಾಗಿರುವ ನೀತಾ ಅಂಬಾನಿ ಜೊತೆ ರೋಹಿತ್ ಶರ್ಮಾ ಹಂಡ್ರೆಡ್​​ ಲೀಗ್ ವೇಳೆ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲು ಸಾಕಷ್ಟು ವೈರಲ್ ಆಗುತ್ತಿದೆ. ಹೀಗಾಗಿ ಮತ್ತೆ ರೋಹಿತ್ ನಾಯಕರಾಗಬಹುದಾ ಎನ್ನುವ ಊಹಾಪೋಹಗಳು ಕೇಳಿಬರುತ್ತಿವೆ.

ಭಾರತ ಮತ್ತು ಝಿಂಬಾಬ್ವೆ ನಡುವಣ ಟಿ20 ಸರಣಿ  ಶುರುವಾಗಿದ್ದು, ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ತಮ್ಮ ಯುವ ಪಡೆಗೆ ಬಲಿಷ್ಠ ಸಂದೇಶವೊಂದನ್ನು ನೀಡಿದ್ದಾರೆ. ಆಟಗಾರರು ತಮ್ಮ ಸಾಮರ್ಥ್ಯವನ್ನು ಪೂರ್ಣವಾಗಿ ಪ್ರದರ್ಶಿಸಬೇಕಾದರೆ ಮೊದಲು ಸೋಲಿನ ಭಯದಿಂದ ಹೊರಬರಬೇಕು ಎಂದು ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ.

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿರುವ ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಎಡಗೈ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ದಾಖಲೆಯೊಂದನ್ನು ಬರೆಯುವ ಸನಿಹದಲ್ಲಿದ್ದಾರೆ. ಅಭಿಷೇಕ್‌ ಶರ್ಮಾ 16 ರನ್ ಗಳಿಸಿದರೆ, ಟಿ20 ಕ್ರಿಕೆಟ್‌ನಲ್ಲಿ 6,000 ರನ್ ಪೂರ್ತಿಗೊಳಿಸುತ್ತಾರೆ. ಅಭಿಷೇಕ್ 203 ಟಿ20 ಪಂದ್ಯಗಳಲ್ಲಿ 199 ಇನ್ನಿಂಗ್ಸ್‌ಗಳಲ್ಲಿ 5,984 ರನ್ ಗಳಿಸಿದ್ದಾರೆ. 16 ರನ್‌ಗಳಿಸಿದ್ರೆ ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಲಿದ್ದಾರೆ.

ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ  ಆಯ್ಕೆ ಸಮಿತಿಯ ನಿರ್ಧಾರಗಳನ್ನು ಮಾಜಿ ಆಟಗಾರ ಸಡಗೋಪನ್ ರಮೇಶ್ ಪ್ರಶ್ನಿಸಿದ್ದಾರೆ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣಕ್ಕೆ ಶ್ರೇಯಸ್ ಅಯ್ಯರ್‌ಗೆ ತಂಡದ ನಾಯಕತ್ವ ಹಾಗೂ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಆದರೆ ಇದೇ ನಿಯಮ ಆರ್‌ಸಿಬಿ ಆಟಗಾರರಿಗೆ ಏಕೆ ಅನ್ವಯಿಸಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಒಬ್ಬರಿಗೆ ಒಂದು ನ್ಯಾಯ, ಮತ್ತೊಬ್ಬರಿಗೆ ಅನ್ಯಾಯ ಮಾಡಬಾರದು ಎಂದು ಸಡಗೋಪನ್ ರಮೇಶ್ ಹೇಳಿದ್ದಾರೆ.

ಮತ್ತೆ ನಮ್ಮ ಜೊತೆ ಕ್ರಿಕೆಟ್ ಆಡಿ ಎಂದು ಬಾಂಗ್ಲಾ ದೇಶ ಭಾರತವನ್ನ ಕೇಳಿಕೊಳ್ಳುತ್ತಿದೆ. ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ ನಿಂದ ಹೊರಹಾಕಿದ ಘಟನೆಗೆ ಪ್ರತೀಕಾರವಾಗಿ ಬಾಂಗ್ಲಾದೇಶವು ಭಾರತದೊಂದಿಗಿನ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧವನ್ನು ಕಡಿದುಕೊಂಡಿತ್ತು. ಆದ್ರೆ ಈಗ  ಕ್ರಿಕೆಟ್ ಸಂಬಂಧ ವೃದ್ಧಿಗಾಗಿ ಭಾರತ ರಾಯಭಾರ ಕಛೇರಿ ಜೊತೆ ಬಾಂಗ್ಲಾದೇಶದ  ಮಾತುಕತೆ ನಡೆಸಿದೆ. ಈ ಬಗ್ಗೆ ಬಾಂಗ್ಲಾ ಕ್ರೀಡಾ ಸಚಿವರು ಮಾಹಿತಿ  ಹಂಚಿಕೊಂಡಿದ್ದಾರೆ.

ಕುಲದೀಪ್ ಯಾದವ್ ಈಗ ಇಂಗ್ಲೆಂಡ್‌ನಲ್ಲೇ ಉಳಿದಿದ್ದು, ಕೌಂಟಿ ತಂಡ ಯಾರ್ಕ್‌ಷೈರ್ ಕ್ಲಬ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಒಪ್ಪಂದದ ಪ್ರಕಾರ, ಭಾರತೀಯ ಸ್ಪಿನ್ನರ್ ಕುಲದೀಪ್ 5 ODI ಪಂದ್ಯಗಳನ್ನು ಆಡುತ್ತಾರೆ ಮತ್ತು ನಂತರ ಸೆಪ್ಟೆಂಬರ್‌ನಲ್ಲಿ ಕೊನೆಯ ನಾಲ್ಕು ಕೌಂಟಿ ಚಾಂಪಿಯನ್‌ಶಿಪ್ ಪಂದ್ಯಗಳಲ್ಲಿ 3 ಪಂದ್ಯಗಳಿಗೆ ಆಡಲು ಸಹಿ ಮಾಡಿಕೊಂಡಿದ್ದಾರೆ. ಯಾರ್ಕ್‌ಷೈರ್‌ಗೆ ಸೇರ್ಪಡೆಗೊಂಡ ಬಗ್ಗೆ ಮಾತನಾಡಿದ ಯಾದವ್ ನಾನು ಯಾರ್ಕ್‌ಷೈರ್‌ಗೆ ಸೇರಲು ತುಂಬಾ ಖುಷಿಯಾಗಿದ್ದೇನೆ ಮತ್ತು ಅವಕಾಶಕ್ಕಾಗಿ ಕೃತಜ್ಞನಾಗಿದ್ದೇನೆ ಎಂದಿದ್ದಾರೆ.

ಅಫ್ಘಾನಿಸ್ತಾನ ಕ್ರಿಕೆಟ್‌ ತಂಡದಲ್ಲಿ  ಮಹತ್ವದ ಬದಲಾವಣೆಯಾಗಿದೆ. ಅಫ್ಘಾನಿಸ್ತಾನ ಟೆಸ್ಟ್‌ ಹಾಗೂ ಏಕದಿನ ತಂಡಕ್ಕೆ ನೂತನ ನಾಯಕನನ್ನಾಗಿ ರಹ್ಮತ್‌ ಶಾ ಅವರನ್ನು ಅಫ್ಘಾನಿಸ್ತಾನ ಕ್ರಿಕೆಟ್‌ ಮಂಡಳಿ ನೇಮಿಸಿದೆ. ರಹ್ಮತ್ ಶಾ ಅಫ್ಘಾನಿಸ್ತಾನದ ಈ ಅನುಭವಿ ಟಾಪ್ ಆರ್ಡರ್ ಬ್ಯಾಟರ್ ಆಗಿದ್ದು, ಇದುವರೆಗೆ 128 ಏಕದಿನ ಪಂದ್ಯಗಳು ಹಾಗೂ 12 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 5,000ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ

ಪ್ರವಾಸಿ ನ್ಯೂಜಿಲ್ಯಾಂಡ್ ಎದುರಿನ ಅಂತಿಮ ಏಕದಿನ ಪಂದ್ಯವನ್ನು 2 ವಿಕೆಟ್ ಅಂತರದಿಂದ ಗೆದ್ದ ವೆಸ್ಟ್ ಇಂಡೀಸ್, ತನ್ನ ಸರಣಿ ಸೋಲಿನ ಅಂತರವನ್ನು 2-3ಕ್ಕೆ ಇಳಿಸಿಕೊಂಡಿತು. ನ್ಯೂಜಿಲ್ಯಾಂಡ್ 9 ವಿಕೆಟಿಗೆ 268 ರನ್ ಗಳಿಸಿದರೆ, ವೆಸ್ಟ್ ಇಂಡೀಸ್ 47.3 ಓವರ್‌ಗಳಲ್ಲಿ 8 ವಿಕೆಟಿಗೆ 269 ರನ್ ಬಾರಿಸಿ ಜಯಗಳಿಸಿತು.  ಇದಕ್ಕೂ ಮುನ್ನ ವಿಂಡೀಸ್ ಸರಣಿಯ ಮೊದಲ ಪಂದ್ಯವನ್ನು ಜಯಿಸಿತ್ತು. ಮಧ್ಯದಲ್ಲಿ ಸತತ ಮೂರು ಪಂದ್ಯ ಸೋತ ವೆಸ್ಟ್ ಇಂಡೀಸ್ ಸರಣಿ ಕಳೆದುಕೊಂಡಿದೆ.

Kishor KV

Leave a Reply

Your email address will not be published. Required fields are marked *