ಬೆಂಗಳೂರಿನಲ್ಲಿ ಇವತ್ತು ನೀರಜ್ ಚೋಪ್ರಾ ಕ್ಲಾಸಿಕ್ – ಈ ರಸ್ತೆಗಳಲ್ಲಿ ವಾಹನ ಸಂಚಾರ ಬದಲಾವಣೆ, ಪಾರ್ಕಿಂಗ್ ನಿಷೇಧ

ಭಾರತದ ಮೊದಲ ಅಂತಾರಾಷ್ಟ್ರೀಯ ಜಾವೆಲಿನ್ ಥ್ರೋ ಸ್ಪರ್ಧೆ ಬೆಂಗಳೂರಿನಲ್ಲಿ ನಡೆಯಲಿದೆ. ಇಂದು ಸಂಜೆ ಕಂಠೀರವ ಕ್ರೀಡಾಂಗಣದಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆ ನಡೆಯಲಿದೆ. ಈ ಟೂರ್ನಿಗೆ ನೀರಜ್ ಚೋಪ್ರಾ ಕ್ಲಾಸಿಕ್ ಎಂಬ ಹೆಸರನ್ನು ಇಡಲಾಗಿದೆ. ಈ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಜಾವಲಿನ್ ಥ್ರೋ ಆಟಗಾರ ನೀರಜ್ ಚೋಪ್ರಾ ಹಾಗೂ ಇತರೆ ಅಂತರಾಷ್ಟ್ರೀಯ ಜಾವಲಿನ್ ಥ್ರೋ ಆಟಗಾರರು ಭಾಗಹಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಗಣ್ಯರು ಸೇರಿದಂತೆ ಸುಮಾರು 15 ರಿಂದ 16 ಸಾವಿರ ಮಂದಿ ಸಾರ್ವಜನಿಕರು ಭಾಗವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲ ರಸ್ತೆಗಳಲ್ಲಿ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ಇದನ್ನೂ ಓದಿ: ಡಿಯಾಗೋ ದುರಂತ ಅಂತ್ಯಕ್ಕೆ ಕಾರಣವಾಯ್ತಾ ಲ್ಯಾಂಬೋರ್ಗಿನಿ – ಸಾವಲ್ಲೂ ಒಂದಾದ ಅಣ್ಣ, ತಮ್ಮ!
ಕಂಠೀರವ ಕ್ರೀಡಾಂಗಣದಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆ ನಡೆಯಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಜೆ 4ರಿಂದ ರಾತ್ರಿ 10ರ ತನಕ ಬೆಂಗಳೂರು ಸಂಚಾರಿ ಪೊಲೀಸರು ಸಂಚಾರ ಮಾರ್ಪಾಡು ಮಾಡಿದ್ದಾರೆ. ಈ ವೇಳೆ ಕ್ರೀಡಾಂಗಣದ ಸುತ್ತ ರಸ್ತೆಯಲ್ಲಿ ಗೂಡ್ಸ್ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಸಾರ್ವಜನಿಕರು ಮೆಟ್ರೋ ಮತ್ತು ಇತರ ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಸೂಚಿಸಿದ್ದಾರೆ.
ವಾಹನಗಳಿಗೆ ಪಾರ್ಕಿಂಗ್ ಸ್ಥಳಗಳು
ಸೆಂಟ್ ಜೋಸೆಫ್ ಕಾಲೇಜ್ (ಕಾರ್ಯಕ್ರಮದ ವೀಕ್ಷಣೆಗೆ ಬರುವ ಮತ್ತು ಪಾಸ್ ಹೊಂದಿರುವ ವಾಹನಗಳಿಗೆ ಪಾರ್ಕಿಂಗ್, ಯುಬಿಸಿಟಿ ಮಾಲ್ ಪಾರ್ಕಿಂಗ್ (ಪೇ ಅಂಡ್ ಪಾರ್ಕಿಂಗ್), ಕಿಂಗ್ ವೇ/ ಲೇನ್ (ಪೇ ಅಂಡ್ ಪಾರ್ಕಿಂಗ್).
ಪಾರ್ಕಿಂಗ್ ನಿಷೇಧಿಸಿರುವ ರಸ್ತೆಗಳು
ಕೆಬಿ ರಸ್ತೆ, ವಿಠಲ್ ಮಲ್ಯ ರಸ್ತೆ, ಆರ್.ಆರ್.ಎಂ.ಆರ್ ರಸ್ತೆ, ಕೆಜಿ ರಸ್ತೆ, ದೇವಾಂಗ ರಸ್ತೆ, ಎನ್.ಆರ್. ರಸ್ತೆ, ನೃಪತುಂಗ ರಸ್ತೆ, ಶೇಷಾದ್ರಿ ರಸ್ತೆ, ಅಂಬೇಡ್ಕರ್ ವೀದಿ (ಎರಡು ಬದಿ), ಪರ್ಯಾಯ ಮಾರ್ಗ, ಹೆಚ್.ಎಲ್.ಡಿ ಜಂಕ್ಷನ್ ನಿಂದ ಕೆಬಿ ರಸ್ತೆಯ ಮುಖಾಂತರ ಕ್ರೀನ್ಸ್ ಜಂಕ್ಷನ್ ಮತ್ತಯ ಶಾಂತಿನಗರ ಕಡೆ ಸಂಚರಿಸುವ ಗೂಡ್ಸ್ ವಾಹನಗಳು ಹೆಚ್.ಎಲ್.ಡಿ ಜಂಕ್ಷನ್ ಬಳಿ ಬಲತಿರುವು ಪಡೆದು ಹಡ್ನನ್ ಜಂಕ್ಷನ್ ದೇವಾಂಗ್ ಜಂಕ್ಷನ್ ಎಡತಿರುವು ಮಿಷನ್ ರಸ್ತೆ-ಫೈ ಓವರ್-ರೆಸಿಡೆನ್ಸಿ ರಸ್ತೆ ಮೂಲಕ ಸಾಗುವುದು.
ರಿಚ್ಮಂಡ್ ಜಂಕ್ಷನ್ನಿಂದ ಮೈಸೂರು ಬ್ಯಾಂಕ್ ಕಡೆ ಸಂಚರಿಸುವ ಗೂಡ್ಸ್ ವಾಹನಗಳು ಶಾಂತಿನಗರ-ಮಿಷನ್ ಮಿಷನ್ ರಸ್ತೆ-ಸುಬ್ಬಯ್ಯ ಸರ್ಕಲ್-ಲಾಲ್‌ಬಾಗ್ ಪೂರ್ಣಿಮಾ ಜಂಕ್ಷನ್ನಲ್ಲಿ ಬಲತಿರುವು ಪಡೆದು ಶಿವಾಜಿ ಜಂಕ್ಷನ್-ಬಲತಿರುವು-ಪುರಭವನದ ಬಳಿ ಎಡ ತಿರುವು ಪಡೆದು ಮೈಸೂರು ರಸ್ತೆ ಅಥವಾ ಎನ್.ಆರ್ ಜಂಕ್ಷನ್-ಪೊಲೀಸ್ ಠಾಣೆ ಜಂಕ್ಷನ್-ಕೆಜಿ ರಸ್ತೆ ಮುಖಾಂತರ ಮೈಸೂರು ಬ್ಯಾಂಕ್ ತಲುಪಬಹು.

ನೋಡಿರಿ

