ನೀನಾದೆ ನಾ ಆಕ್ಟರ್ಸ್ ಮಧ್ಯೆ Love!  – ದಿಲೀಪ್‌, ಖುಷಿ ಜನುಮದ ಜೋಡಿನಾ?
ಸೀರಿಯಲ್ ನಟನೆ, ರಿಯಲ್ ಮದುವೆ..?

ನೀನಾದೆ ನಾ ಆಕ್ಟರ್ಸ್ ಮಧ್ಯೆ Love!  – ದಿಲೀಪ್‌, ಖುಷಿ ಜನುಮದ ಜೋಡಿನಾ?ಸೀರಿಯಲ್ ನಟನೆ, ರಿಯಲ್ ಮದುವೆ..?

ಕನ್ನಡ ಕಿರುತೆರೆಯಲ್ಲಿ ನೀನಾದೆ ನಾ ಸೀರಿಯಲ್‌ನ ವೇದಾ, ವಿಕ್ರಮ್‌ ವೀಕ್ಷಕರ ಅಚ್ಚುಮೆಚ್ಚಿನ ಜೋಡಿಗಳಲ್ಲೊಂದು. ನೀನಾದೆ ನಾ ಸೀರಿಯಲ್‌ ನಲ್ಲಿ ವಿಕ್ರಮ್ ಪಾತ್ರದಲ್ಲಿ ದಿಲೀಪ್​ ಶೆಟ್ಟಿ ನಟಿಸಿದ್ರೆ, ವೇದಾ ಪಾತ್ರದಲ್ಲಿ ಖುಷಿ ಶಿವು ನಟಿಸಿದ್ರು. ಇದೀಗ ಇವರಿಬ್ರು ಗುಂಡ, ಬೇತಾಳ ಅಂತಾನೇ ಫೇಮಸ್‌ ಆಗಿದ್ದಾರೆ. ಈ ಜೋಡಿಗೆ ಅದೆಷ್ಟೋ ಫ್ಯಾನ್ಸ್‌ ಇದ್ದಾರೆ. ಸ್ಟಾರ್‌ ಸುವರ್ಣದಲ್ಲಿ ಸೀರಿಯಲ್‌ ಮುಗಿದು ಅದೆಷ್ಟೋ ಟೈಮ್‌ ಆಯ್ತು, ಆದ್ರೂ ಈ ವಿಕ್ರಮ್‌ ವೇದಾ ಹವಾ ಇನ್ನೂ ನಿಂತಿಲ್ಲ. ಇದೀಗ ಈ ಜೋಡಿ ಬಗ್ಗೆ ಹೊಸ ಸುದ್ದಿಯೊಂದು ಸದ್ದು ಮಾಡ್ತಿದೆ.

ಇದನ್ನೂ ಓದಿ: ರಾಣಾಗಾಗಿ ವರುಣ್ ಗೆ ಬೆಂಚ್ ಕಾಯಿಸಿದ್ರಾ ಗಂಭೀರ್ – ಓಮನ್ ವಿರುದ್ಧದ ಪಂದ್ಯ ಭಾರತಕ್ಕೆ ಸವಾಲಾಗಿದ್ದೆಲ್ಲಿ?

ಸ್ಟಾರ್‌ ಸುವರ್ಣದಲ್ಲಿ ಪ್ರಸಾರವಾಗ್ತಿದ್ದ ನೀನಾದೆ ನಾ ಸೀರಿಯಲ್‌ ಗೆ ಸೆಪರೇಟ್‌ ಫಾನ್ಸ್‌ ಇದ್ರು.. ಗುಂಡ ಬೇತಾಳ ಜೋಡಿ ನೋಡಲು ಸೀರಿಯಲ್‌ ನೋಡವವರೂ ಟಿವಿ ಮುಂದೆ ಕೂರ್ತಿದ್ರು. ಅಷ್ಟರ ಮಟ್ಟಿಗೆ ಈ ಸೀರಿಯಲ್‌ ಸದ್ದು ಮಾಡಿತ್ತು. ವಿಕ್ರಮ್‌, ವೇದಾ ಕ್ಯೂಟ್‌ ಲವ್‌ ಸ್ಟೋರಿ ವೀಕ್ಷಕರಿಗೆ ಸಖತ್‌ ಇಷ್ಟವಾಗಿತ್ತು. ನೀನಾದೆ ನಾ ಸೀರಿಯಲ್‌ ಮುಗಿತಾ ಇದ್ದಂತೆ ಸೀರಿಯಲ್‌ ಫ್ಯಾನ್ಸ್‌ ಬೇಜಾರು ಮಾಡ್ಕೊಂಡಿದ್ರು. ಗುಂಡ, ಬೇತಾಳ ಜೋಡಿನಾ ಮಿಸ್‌ ಮಾಡಿಕೊಳ್ತಿದ್ದೀವಿ. ಸೀರಿಯಲ್‌ ನ ಇಷ್ಟು ಬೇಗ ಎಂಡ್‌ ಮಾಡ್ಬಾರ್ದಿತ್ತು ಅಂತಾ ಬೇಸರ ಹೊರ ಹಾಕಿದ್ರು. ವೀಕ್ಷಕರ ಒತ್ತಾಯದ ಮೇಲೆ ನೀನಾದೆ ನಾ ಸೀರಿಯಲ್‌ ಎರಡನೇ ಭಾಗ ತರಲಾಗಿತ್ತು. ಆದ್ರೆ ಎರಡನೇ ಭಾಗವನ್ನ ಕೂಡ ಅಷ್ಟೇ ಬೇಗ ಎಂಡ್‌ ಮಾಡಲಾಯ್ತು. ಸೀರಿಯಲ್‌ ಮುಗಿದು ಇಷ್ಟು ಟೈಮ್‌ ಆಯ್ತು.. ಆದ್ರೂ ಈ ಸೀರಿಯಲ್‌ ನಟ, ನಟಿ ಮಾತ್ರ ಭಾರಿ ಸುದ್ದಿಯಲ್ಲಿದ್ದಾರೆ. ವಿಕ್ರಮ್‌ ವೇದಾ ಸೀರಿಯಲ್‌ ನಲ್ಲಿ ಮಾತ್ರವಲ್ಲ, ರಿಯಲ್‌ ಲೈಫ್‌ ನಲ್ಲೂ ಸಖತ್‌ ಕ್ಲೋಸ್..‌ ಇದೀಗ ಈ ಜೋಡಿ ಮಧ್ಯೆ ಸಂಥಿಂಗ್‌ ಸಂಥಿಂಗ್‌ ನಡಿತಾ ಇದೆ ಅನ್ನೋ ಸುದ್ದಿ ಜೋರಾಗಿ ಸದ್ದು ಮಾಡ್ತಿದೆ. ಇತ್ತೀಚೆಗೆ ವೇದಾ ಪಾತ್ರಧಾರಿ ಖುಷಿ ಶಿವು ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಈ ವೇಳೆ ದಿಲೀಪ್‌ ಶೆಟ್ಟಿ ಸ್ಪೆಷಲ್‌ ಆಗಿ ವಿಶ್‌ ಮಾಡಿದ್ದಾರೆ. ಜೀವನದ ವಿಶೇಷ ವ್ಯಕ್ತಿ ಎಂದು ಬರೆದು ಪೋಸ್ಟ್‌ ಮಾಡಿದ್ರು.

ಹೌದು, ನಟ ದಿಲೀಪ್‌ ಶೆಟ್ಟಿ ಹಾಗೂ ನಟ ಖುಷಿ ಶಿವು ಸೀರಿಯಲ್‌ ಮಾತ್ರವಲ್ಲದೇ ರಿಯಲ್‌ ಲೈಫ್‌ ನಲ್ಲೂ ತುಂಬಾ ಕ್ಲೋಸ್‌ ಆಗಿದ್ದಾರೆ. ಗೋವಾ ಟ್ರಿಪ್‌ ಹೋಗಿದ್ದಾಗಲೂ ಭಾರಿ ಸುದ್ದಿಯಾಗಿತ್ತು. ಅವ್ರ ಫ್ಯಾನ್ಸ್‌ ಕೂಡ ಏನ್‌ ಸಮಾಚಾರ? ಮದ್ವೆ ಊಟ ಯಾವಾಗ ಹಾಕಿಸ್ತೀರಾ ಅಂತಾ ಕೇಳಿದ್ರು. ಅದಾದ ಬಳಿಕ ತೆಲುಗು ಕಾರ್ಯಕ್ರಮವೊಂದ್ರಲ್ಲೂ ಕಾಣಿಸಿಕೊಂಡಿದ್ರು. ಆಗ ಇವರಿಬ್ಬರು ನಿಜ ಜೀವನದಲ್ಲೂ ಮದ್ವೆ ಆಗ್ತಾರೆ ಅಂತಾ ಹೇಳಲಾಗ್ತಿತ್ತು. ಆದ್ರೆ ಸಂದರ್ಶನವೊಂದ್ರಲ್ಲಿ ನಾವು ಕ್ಲೋಸ್‌ ಫ್ರೆಂಡ್ಸ್..‌ ಸ್ಪೆಷಲ್‌ ಫ್ರೆಂಡ್ಸ್‌ ಅಂತ ಎಲ್ಲೂ ಹೇಳಿಕೊಂಡಿಲ್ಲ.. ಮದ್ವೆ ಅದೆಲ್ಲಾ ವಿಧಿ. ಡೆಸ್ಟಿನಿಯಲ್ಲಿ ಏನು ಬರೆದಿರುತ್ತಾರೆ ಅದೇ ಆಗುವುದು. ನಾವು ಅದಕ್ಕೆ ಉತ್ತರಿಸಲು ಆಗುವುದಿಲ್ಲ. ನೋಡೋಣ ಡೆಸ್ಟಿನಿ ಏನು ಹೇಳುತ್ತದೆ ಅಂತಾ ಹೇಳಿದ್ರು.. ಈ ಮಾತು ಕೇಳಿ ಫ್ಯಾನ್ಸ್‌ ನೀವು ಒಬ್ರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೀರಾ.. ನಿಜ ಜೀವನದಲ್ಲೂ ಮದ್ವೆ ಬೆಸ್ಟ್‌ ಅಂತಾ ಹೇಳಿದ್ರು.. ಆದ್ರೀಗ ನಟ ದಿಲೀಪ್‌ ಶೆಟ್ಟಿ ಖುಷಿ ಶಿವು ಬರ್ತ್‌ಡೇಗೆ ಸ್ಪೆಷಲ್‌ ಆಗಿ ವಿಶ್‌ ಮಾಡಿದ್ದಾರೆ. ನೀನಾದೆನಾ ಧಾರಾವಾಹಿಯಿಂದ ನಮ್ಮ ಜರ್ನಿ ಶುರುವಾಯಿತು. ಅದ್ಭುತವಾದ ನಟಿ, ಒಳ್ಳೆಯ ವ್ಯಕ್ತಿ, ಅದೆಲ್ಲದ್ದಕ್ಕಿಮತ ಜಾಸ್ತಿ ನನ್ನ ಜೀವನದ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಿರೋದು ನಿಜಕ್ಕೂ ಪುಣ್ಯ. ನಿನ್ನನ್ನು ಈ ಪ್ರಪಂಚಕ್ಕೆ ಕರೆತಂದಿದ್ದಕ್ಕೆ ವಿಧಿಗೆ ಧನ್ಯವಾದಗಳು. ನಿನಗೆ, ಖುಷಿ, ಪ್ರೀತಿ, ಯಶಸ್ಸು ಸಿಗಲಿ ಎಂದು ಹಾರೈಸುವೆ. ನೀನು ಸ್ಟಾರ್‌ ನಟಿಯಾಗುವುದನ್ನ ನೋಡಲು ಕಾಯುತ್ತಿದ್ದೇನೆ, ಅದಕ್ಕೆ ನೀನು ಅರ್ಹಳಾಗಿದ್ದೀಯಾ ಎಂದು ನಟ ದಿಲೀಪ್‌ ಶೆಟ್ಟಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ರು. ಇದೀಗ ನಟ ಪೋಸ್ಟ್‌ ನೋಡಿ ಫ್ಯಾನ್ಸ್‌ ಖುಷಿಪಟ್ಟಿದ್ದಾರೆ. ಯಾರ್ ಕೆಟ್ಟ ಕಣ್ಣು ಬೀಳದೇ ಇರಲಿ ನಮ್ಮ ಮುದ್ದು ಜೋಡಿಗೆ. ಬೇಗ ಮದುವೆಯಾಗಿ ನೂರು ಕಾಲ ಸುಖವಾಗಿರಿ, ನಿಮ್ಮಿಬ್ಬರ ಜೋಡಿ ಸೂಪರ್‌ ಆಗಿದೆ. ಮದುವೆ ಯಾವಾಗ? ಅಂತೆಲ್ಲಾ ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.

ಅಂದ್ಹಾಗೆ ಸೀರಿಯಲ್‌, ಸಿನಿಮಾ ನಟ, ನಟಿಯರ ಬಗ್ಗೆ ಲವ್‌ ಡೇಟಿಂಗ್‌ ಗಾಸಿಪ್‌ ಹರಿದಾಡೋದು ಕಾಮನ್..‌ ಕೆಲವರು ನಿಜಕ್ಕೂ ಪ್ರೀತಿಯಲ್ಲಿ ಬಿದ್ದಿದ್ರೂ ಅದನ್ನ ಎಲ್ಲರ ಮುಂದೆ ಹೇಳಿಕೊಳ್ಳೋದಿಲ್ಲ. ಸೀಕ್ರೆಟ್‌ ಮೈಂಟೈನ್‌ ಮಾಡ್ತಾರೆ. ಇದೀಗ ನೀನಾದೆನಾ ಸೀರಿಯಲ್‌  ನಟ ದಿಲೀಪ್‌ ಶೆಟ್ಟಿ ಹಾಗೂ ಖುಷಿ ಶಿವು ಜಸ್ಟ್‌ ಫ್ರೆಂಡ್ಸ್‌ ಮಾತ್ರಾನಾ? ಅಥವಾ ಪ್ರೀತಿಯಲ್ಲಿ ಬಿದ್ದಿದ್ದಾರಾ ಅನ್ನೋ ಕ್ಯೂರಿಯಾಸಿಟಿ ಸೀರಿಯಲ್‌ ಪ್ರೇಮಿಗಳನ್ನ ಕಾಡ್ತಿದೆ. ಮುಂದಿನ ದಿನಗಳಲ್ಲಿ ಪ್ರೀತಿ, ಮದ್ವೆ ವಿಚಾರ ರಿವೀಲ್‌ ಮಾಡ್ತಾರಾ ಅಂತ ಕಾದುನೋಡ್ಬೇಕು.

Shwetha M