ಹೆಚ್‌ಡಿಕೆಗೆ ಹೈಕಮಾಂಡ್‌ನಿಂದ ಬುಲಾವ್‌ – ದೆಹಲಿಗೆ ಹೊರಟ ಮಾಜಿ ಸಿಎಂ

ಹೆಚ್‌ಡಿಕೆಗೆ ಹೈಕಮಾಂಡ್‌ನಿಂದ ಬುಲಾವ್‌ – ದೆಹಲಿಗೆ ಹೊರಟ ಮಾಜಿ ಸಿಎಂ

ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರು ಚುನಾವಣೆಯಲ್ಲಿ ಗೆದ್ದ ಬೆನ್ನಲ್ಲೇ ದೆಹಲಿಗೆ ತೆರಳಿದ್ದಾರೆ. ಎನ್‌ಡಿಎ ಮೈತ್ರಿಕೂಟ ಸಭೆಯಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ದೆಹಲಿಗೆ ಹೋಗಿದ್ದಾರೆ.

ಇದನ್ನೂ ಓದಿ: ಎಲೆಕ್ಷನ್‌ ರಿಸಲ್ಟ್‌ ಹೊರ ಬಿದ್ದ ಬೆನ್ನಲ್ಲೇ ಎನ್‌ಡಿಎ ಮಹತ್ವದ ಸಭೆ – ಮೋದಿ ಪ್ರಮಾಣ ವಚನ ಸ್ವೀಕಾರ ಯಾವಾಗ?

ಬುಧವಾರ ಸಂಜೆ ಖಾಸಗಿ ಹೋಟೆಲಿನಲ್ಲಿ ಎನ್‌ಡಿಎ ಮಿತ್ರಪಕ್ಷಗಳ ಸಭೆ ನಡೆಯಲಿದೆ. ನೂತನವಾಗಿ ಆಯ್ಕೆ ಆಗಿರುವ ಮಿತ್ರ ಪಕ್ಷಗಳ ನಾಯಕರು ದೆಹಲಿಗೆ ಬರುವಂತೆ ಅಮಿತ್‌ ಶಾ ಆಹ್ವಾನ ನೀಡಿದ್ದಾರೆ.  ಹೀಗಾಗಿ ಕುಮಾರಸ್ವಾಮಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಿದರು.

ಇದೇ ವೇಳೆ ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಸರ್ಕಾರ ರಚಿಸಲು ಕಸರತ್ತು ನಡೆಸಿರುವ ಬಗ್ಗೆ ಹೆಚ್‌ಡಿಕೆ ಪ್ರತಿಕ್ರಿಯಿಸಿದ್ದಾರೆ. ಅದು ಸಾಧ್ಯವಾಗಲ್ಲ, ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ಸರ್ಕಾರವೇ ರಚನೆಯಾಗೋದು ಅಂತ ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 293 ಸ್ಥಾನಗಳನ್ನು ಗೆದ್ದರೆ ಇಂಡಿಯಾ (INDIA) ಮೈತ್ರಿಕೂಟ 234 ಸ್ಥಾನಗಳನ್ನು ಗೆದ್ದುಕೊಂಡಿದೆ. ಸರ್ಕಾರ ರಚನೆಗೆ 272 ಸ್ಥಾನಗಳ ಅಗತ್ಯವಿದೆ.

Shwetha M