NDA ಅಭ್ಯರ್ಥಿ ವಿರುದ್ಧ ಸ್ಪರ್ಧೆ – ಗಾಯಕ ಪವನ್ ಸಿಂಗ್‌ರನ್ನು ಉಚ್ಚಾಟಿಸಿದ ಬಿಜೆಪಿ

NDA ಅಭ್ಯರ್ಥಿ ವಿರುದ್ಧ ಸ್ಪರ್ಧೆ – ಗಾಯಕ ಪವನ್ ಸಿಂಗ್‌ರನ್ನು ಉಚ್ಚಾಟಿಸಿದ ಬಿಜೆಪಿ

ಲೋಕಸಭಾ ಚುನಾವಣೆಯಲ್ಲಿ ಎನ್​ಡಿಎ ಅಧಿಕೃತ ಅಭ್ಯರ್ಥಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಭೋಜ್‌ಪುರಿ ಗಾಯಕ ಹಾಘೂ ನಟ ಪವನ್​ ಸಿಂಗ್ ಗೆ ಬಿಜೆಪಿ ಬಿಗ್‌ ಶಾಕ್‌ ನೀಡಿದೆ. ಪವನ್‌ಸಿಂಗ್‌ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಿದೆ.

ಇದನ್ನೂ ಓದಿ:ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ ವಿಧಿವಶ 

ಬಿಜೆಪಿ ಮೊದಲು ಪವನ್​ ಸಿಂಗ್ ಅವರನ್ನು ಪಶ್ಚಿಮ ಬಂಗಾಳದ ಅಸನ್ಸೋಲ್​ನಿಂದ ಕಣಕ್ಕಿಳಿಸಿತ್ತು. ಆ ವೇಳೆ ಪವನ್​ ಸಿಂಗ್ ತುಂಬಾ ಸಂಭ್ರಮಿಸಿದ್ದರು. ಆದರೆ ಅವರ ಹಾಡುಗಳಿಗೆ ಸಂಬಂಧಿಸಿದಂತೆ ಬಂಗಾಳದಲ್ಲಿ ಪ್ರತಿಭಟನೆಗಳು ನಡೆದ ಬಳಿಕ ಹಿಂದೆ ಸರಿದರು. ಪಶ್ಚಿಮ ಬಂಗಾಳದ ಅಸನ್ಸೋಲ್​ನಿಂದ ಬಿಜೆಪಿ ಟಿಕೆಟ್ ತಿರಸ್ಕರಿಸಿ ಕಾರಕಟ್​ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ಸಿಂಗ್ ನಿರ್ಧರಿಸಿದ್ದರು.

ಹೀಗಾಗಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಕಾರಕಟ್​ ಲೋಕಸಭಾ ಕ್ಷೇತ್ರದಿಂದ ಎನ್​ಡಿಎ ಅಧಿಕೃತ ಅಭ್ಯರ್ಥಿ ಉಪೇಂದ್ರ ಕುಶ್ವಾಹ ವಿರುದ್ಧ ಪವನ್ ಸಿಂಗ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪವನ್‌ ಅವರನ್ನು ಬಿಜೆಪಿ ಉಚ್ಛಾಟನೆ ಮಾಡಿದೆ.

ಪವನ್​ಸಿಂಗ್ ತಾಯಿ ಪ್ರತಿಮಾ ದೇವಿ ಕಾರಕಟ್​ ಲೋಕಸಭಾ ಕ್ಷೇತ್ರದಿಂದ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ. ಆದರೆ ಬಿಜೆಪಿಯ ಒತ್ತಡದ ನಡುವೆಯೂ ಅವರ ಪುತ್ರ ಕ್ಷೇತ್ರದಲ್ಲಿ ನಿಂತಿದ್ದಾರೆ.

Shwetha M