ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್ಗೆ ಬಲಿ – ನಕ್ಸಲ್ ನಿಗ್ರಹ ಪಡೆಯಿಂದ ನೇತ್ರಾವತಿ ದಳದ ನಾಯಕನ ಹತ್ಯೆ
ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂ ಗೌಡ ನಕ್ಸಲ್ ನಿಗ್ರಹ ಪಡೆಯಿಂದ ಎನ್ಕೌಂಟರ್ಗೆ ಬಲಿಯಾಗಿದ್ದಾನೆ. ಈ ಮೂಲಕ ಉಡುಪಿಯಲ್ಲಿ 13 ವರ್ಷದ ನಂತರ ನಕ್ಸಲ್ ವಿರುದ್ಧ ಎನ್ಕೌಂಟರ್ ನಡೆದಿದೆ. ಹೆಬ್ರಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ಈ ಎನ್ ಕೌಂಟರ್ ನಡೆದಿದೆ.
ಇದನ್ನೂ ಓದಿ:ಬಿಜೆಪಿಗೆ ನೀಡಿದ್ದ ಬೆಂಬಲ ವಾಪಸ್ – ಮಣಿಪುರ ಸರ್ಕಾರಕ್ಕೆ NPP ಬೆಂಕಿ!
ಅರಣ್ಯದಂಚಿನ ಗ್ರಾಮದಲ್ಲಿ ನಕ್ಸಲ್ ಚಟುವಟಿಕೆ ಇತ್ತೀಚೆಗೆ ಜಾಸ್ತಿಯಾಗಿತ್ತು. ಹೀಗಾಗಿಯೇ ನಕ್ಸಲ್ ನಿಗ್ರಹ ಕಾರ್ಯಚರಣೆಯನ್ನ ತೀವ್ರಗೊಳಿಸಲಾಗಿತ್ತು. ಸೋಮವಾರ ರಾತ್ರಿ 12:15 ಗಂಟೆ ಸುಮಾರಿಗೆ ಐವರು ನಕ್ಸಲರು ಗ್ರಾಮಕ್ಕೆ ದಿನಸಿ ತರಲು ಬಂದಿದ್ದರು. ಅಗ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ನಂತರ ಪೊಲೀಸರು ಕೂಡಾ ಪ್ರತಿದಾಳಿ ನಡೆಸಿದ್ದು, ವಿಕ್ರಂ ಗೌಡ ಮೃತನಾಗಿದ್ದಾನೆ. ಇನ್ನುಳಿದವರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ವಿಕ್ರಂ ಗೌಡ ನಕ್ಸಲ್ ರ ನೇತ್ರಾವತಿ ದಳದ ನಾಯಕನಾಗಿದ್ದನು. ಹಲವು ವರ್ಷಗಳಿಂದ ನಕ್ಸಲ್ ಗುಂಪಿನಲ್ಲಿದ್ದ ವಿಕ್ರಂ ಗೌಡ ನಕ್ಸಲ್ ಚಟುವಟಿಕೆ ಗಳಲ್ಲಿ ಭಾಗವಹಿಸಿದ್ದನು. ಕಳೆದ 20 ವರ್ಷದಿಂದ ನಕ್ಸಲ್ ಚಟುವಟಿಕೆಯಲ್ಲಿದ್ದ ವಿಕ್ರಂಗೌಡ ಕೊನೆಗೂ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.