ನವರಾತ್ರಿಯಲ್ಲಿ ಈ ವಸ್ತುಗಳನ್ನ ಮನೆಗೆ ತನ್ನಿ – ನಿಮ್ಮ ಲಕ್ ಫಟ್ ಅಂತ ಚೇಂಜ್ ಆಗುತ್ತೆ ಲಕ್

ಹಿಂದೂಗಳು ಆರಿಸುವಂತಹ ಪ್ರಮುಖ ಹಬ್ಬಗಳಲ್ಲಿ ನವರಾತ್ರಿ ಹಬ್ಬವು ತುಂಬಾನೇ ವಿಶೇಷವಾದ ಹಬ್ಬವಾಗಿದೆ. ನಾಳೆಯಿಂದ ( 22 ಸೋಮವಾರ ) ನವರಾತ್ರಿ ಹಬ್ಬವನ್ನು ನಾವು 9 ದಿನಗಳವರೆಗೆ ಆಚರಿಸುತ್ತೇವೆ. ನವರಾತ್ರಿ ಹಬ್ಬದ ಸಮಯದಲ್ಲಿ ದುರ್ಗಾ ದೇವಿಯ ಭಕ್ತರು ಉಪವಾಸ ವ್ರತವನ್ನು ಆಚರಿಸುತ್ತಾರೆ ಮತ್ತು ದುರ್ಗಾ ದೇವಿಯ ಪೂಜೆಯನ್ನು ಮಾಡುತ್ತಾರೆ. ನವರಾತ್ರಿ ಹಬ್ಬದ ಸಮಯದಲ್ಲಿ ನಾವು ಈ ವಸ್ತುಗಳನ್ನು ಖರೀದಿಸುವುದು ಅತ್ಯಂತ ಶುಭ.
ಕಾಮಧೇನು ವಿಗ್ರಹ ಅಥವಾ ಫೋಟೋ

ನವರಾತ್ರಿ ಹಬ್ಬದ ಸಮಯದಲ್ಲಿ ನಾವು ಮನೆಗೆ ಕಾಮಧೇನು ವಿಗ್ರಹ ಅಥವಾ ಫೋಟೋವನ್ನು ಮನೆಗೆ ತರಬೇಕು. ಕಾಮಧೇನುವಿನ ವಿಗ್ರಹವನ್ನು ಮನೆಗೆ ತರುವುದರಿಂದ ಅದು ಮನೆಯ ಸದಸ್ಯರಿಗೆ ಸಂಪತ್ತನ್ನು ಕರುಣಿಸುವುದರ ಜೊತೆಗೆ ಉತ್ತಮ ಆರೋಗ್ಯದ ವರವನ್ನು ಕೂಡ ಕರುಣಿಸುತ್ತದೆ. ಈ 9 ದಿನಗಳ ಅವಧಿಯಲ್ಲಿ ನಾವು ಮನೆಗೆ ಕಾಮಧೇನು ವಿಗ್ರಹ, ಫೋಟೋವನ್ನು ತಂದು ಅದನ್ನು ಪೂಜೆ ಮಾಡುವುದರಿಂದ ಎಲ್ಲಾ ರೀತಿಯ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುವುದು.
ಬೆಳ್ಳಿ ನಾಣ್ಯ

ನವರಾತ್ರಿ ಹಬ್ಬದ 9 ದಿನಗಳ ಅವಧಿಯಲ್ಲಿ ನಾವು ಮನೆಗೆ ಬೆಳ್ಳಿ ನಾಣ್ಯಗಳನ್ನು, ಶ್ರೀಯಂತ್ರವನ್ನು, ಶ್ರೀಗಂಧವನ್ನು ಅಥವಾ ಕಲಶವನ್ನು ಕೂಡ ಖರೀದಿಸಬೇಕು. ಇಂತಹ ಮಂಗಳಕರ ವಸ್ತುಗಳನ್ನು ನಾವು ನವರಾತ್ರಿಯಲ್ಲಿ ಖರೀದಿಸಿ ಮನೆಗೆ ತೆಗೆದುಕೊಂಡು ಬರುವುದರಿಂದ ಅದು ನಮಗೆ ದುರ್ಗಾ ದೇವಿಯ ಆಶೀರ್ವಾದವನ್ನು ತಂದುಕೊಡುತ್ತದೆ. ಇದು ದುರ್ಗಾ ದೇವಿಯ ಆಶೀರ್ವಾದದಿಂದ ಕಷ್ಟಗಳು ಪಾರಾಗುವಂತೆ ಮಾಡುತ್ತದೆ.
ಹೊಸ ಮನೆ, ಆಸ್ತಿ ಖರೀದಿ

ನವರಾತ್ರಿ ಹಬ್ಬದ ಸಮಯದಲ್ಲಿ ನಾವು ಸಾಧ್ಯವಾದರೆ ಹೊಸ ಮನೆಯನ್ನು ಖರೀದಿಸಬಹುದು ಅಥವಾ ಹೊಸ ವಾಹನ ಅಥವಾ ಆಸ್ತಿಯನ್ನು ಕೂಡ ಖರೀದಿಸಬಹುದು. ಧಾರ್ಮಿಕ ನಂಬಿಕೆಗಳ ಪ್ರಕಾರ, ನವರಾತ್ರಿ ಹಬ್ಬದ ಸಮಯದಲ್ಲಿ ನಾವು ಮನೆ ಅಥವಾ ಆಸ್ತಿಯನ್ನು ಖರೀದಿಸುವುದರಿಂದ ಶುಭ ಫಲಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ವಸ್ತುಗಳು ನಮ್ಮ ಜೀವನದಲ್ಲಿ ಸಮೃದ್ಧಿಯನ್ನು ಕರುಣಿಸುವುದು. ವಿಶೇಷವಾಗಿ ನೀವು ನವರಾತ್ರಿಯ ಸಮಯದಲ್ಲಿ ಶನಿವಾರ ವಾಹನವನ್ನು ಖರೀದಿಸಿದರೆ ಅದು ತುಂಬಾನೇ ಪ್ರಯೋಜನಕಾರಿಯಾಗಿದೆ.
ದೈವ ಶಕ್ತಿ ಇರೋ ಗಿಡ

ನವರಾತ್ರಿಯ ಸಮಯದಲ್ಲಿ ನೀವು ತುಳಸಿ, ಶಮಿ, ಮನಿ ಪ್ಲಾಂಟ್, ಬಾಳೆಗಿಡ ಮುಂತಾದ ದೇವರ ಆಶೀರ್ವಾದವನ್ನು ಹೊಂದಿರುವಂತಹ ಗಿಡಗಳನ್ನು ಮನೆಗೆ ತರಬೇಕು ಅಥವಾ ಖರೀದಿಸಬೇಕು. ನವರಾತ್ರಿಯ ಸಮಯದಲ್ಲಿ ನಿಮ್ಮ ಮನೆಯಲ್ಲಿ ಈ ಸಸ್ಯಗಳನ್ನು ನೆಡುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ನವರಾತ್ರಿಯ ಸಮಯದಲ್ಲಿ ಈ ಸಸ್ಯಗಳನ್ನು ನಿಮ್ಮ ಮನೆಯಲ್ಲಿ ನೆಡುವುದು ನಕಾರಾತ್ಮಕತೆಯನ್ನು ದೂರ ಮಾಡಲು ಸಹಾಯ ಮಾಡುತ್ತದೆ ಮತ್ತು ವಾಸ್ತು ದೋಷಗಳಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ.

ನೋಡಿರಿ

