`ನಾಟು ನಾಟು’ ಗೆ  ಆಸ್ಕರ್ ಬರಲು ನಾನೇ ಕಾರಣ! –  ಅಜಯ್ ದೇವಗನ್ ಹೀಗ್ಯಾಕೆ ಹೇಳಿದ್ದು?

`ನಾಟು ನಾಟು’ ಗೆ  ಆಸ್ಕರ್ ಬರಲು ನಾನೇ ಕಾರಣ! –  ಅಜಯ್ ದೇವಗನ್ ಹೀಗ್ಯಾಕೆ ಹೇಳಿದ್ದು?

ರಾಜಮೌಳಿ ನಿರ್ದೇಶನದ ‘RRR’ ಸಿನಿಮಾದ ‘ನಾಟು ನಾಟು’ಹಾಡು ಆಸ್ಕರ್ ಪ್ರಶಸ್ತಿ ಗೆದ್ದಿದ್ದು, ಇಡೀ ದೇಶವೇ ಇದನ್ನ ಸಂಭ್ರಮಿಸುತ್ತಿದೆ. ನಾಟು ನಾಟು ಚಿತ್ರ ವಿಶ್ವದಾದ್ಯಂತ ಮನ್ನಣೆಗಳಿಸಲು ಇಡೀ ಚಿತ್ರತಂಡದ ಹಗಲಿರುಳು ಶ್ರಮವಹಿಸಿದ್ದಾರೆ. ಹೀಗಿರುವಾಗ ಬಾಲಿವುಡ್ ನಟ ಅಜಯ್ ದೇವಗನ್ ನಾಟು ನಾಟು ಗೆಲ್ಲಲು ನಾನೇ ಕಾರಣ ಅಂತಾ ಹೇಳಿದ್ದಾರೆ.

ಇದನ್ನೂ ಓದಿ:ಉಪ್ಪಿ, ಶಿವಣ್ಣ, ಕಿಚ್ಚನ ಕಾಂಬಿನೇಷನ್​ ಗೆ ಫ್ಯಾನ್ಸ್ ಫಿದಾ – ₹100 ಕೋಟಿ ಬಾಚಿಕೊಂಡ ‘ಕಬ್ಜ’! 

ಅಜಯ್ ದೇವಗನ್ ಈಗಾಗಲೇ ನಟಿಸಿ ನಿರ್ದೇಶಿಸಿರುವ ‘ಭೋಲಾ” ಚಿತ್ರ ಇದೇ ಮಾರ್ಚ್ 30 ರಂದು ರಿಲೀಸ್ ಆಗಲಿದೆ. ಹೀಗಾಗಿ ಅವರು ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಕಪಿಲ್ ಶರ್ಮಾ ನಡೆಸಿಕೊಡುವ ‘ಕಪಿಲ್ ಶರ್ಮಾ ಶೋ’ಗೆ ಅಜಯ್ ದೇವಗನ್, ಟಬು ಆಗಮಿಸಿದ್ದರು. ಈ ವೇಳೆ ನಾಟು ನಾಟು ಹಾಡಿನ ಬಗ್ಗೆ ಮಾತನಾಡಿದ್ದು, ಎಲ್ಲರನ್ನು ಹುಬ್ಬೇರುವಂತೆ ಮಾಡಿದೆ.

ಕಪಿಲ್ “ನೀವು ಆರ್‌ಆರ್‌ಆರ್ ಸಿನಿಮಾದ ಭಾಗವಾಗಿದ್ದೀರಿ. ಈ ಸಿನಿಮಾದ ನಾಟು ನಾಟು ಹಾಡು ಆಸ್ಕರ್ ಗೆದ್ದಿದ್ದಕ್ಕೆ ಶುಭಾಶಯಗಳು” ಎಂದು ಹೇಳಿದ್ದಾರೆ. ಆಗ ಅಜಯ್ ದೇವಗನ್, ನಾಟು ನಾಟು ಹಾಡು ನನ್ನಿಂದಲೇ ಗೆದ್ದಿರೋದು ಎಂದಿದ್ದಾರೆ. ಹೇಗೆ ಎಂದು ಕಪಿಲ್ ಕೇಳಿದಾಗ, ಯಾಕಂದ್ರೆ ಈ ಹಾಡಿನಲ್ಲಿ ನಾನು ಡ್ಯಾನ್ಸ್ ಮಾಡಿಲ್ಲವಲ್ಲ, ಒಂದು ವೇಳೆ ಆ ಹಾಡಿನಲ್ಲಿ ನಾನು ಕುಣಿದಿದ್ರೆ ಏನಾಗುತ್ತಿತ್ತು ಗೊತ್ತಲ್ವಾ?” ಎಂದು ಹೇಳಿದ್ದಾರೆ. ಈ ಮೂಲಕ ಅಜಯ್ ದೇವಗನ್ ಅವರು ತಮಗೆ ಡ್ಯಾನ್ಸ್ ಬರೋದಿಲ್ಲ ಎಂದು ಹೇಳಿದ್ದಾರೆ.

ಅಜಯ್ ತಮ್ಮ ಬಗ್ಗೆ ತಾವೇ ಕಾಮಿಡಿ ಮಾಡಿದ್ದು ನೋಡಿ ಅನೇಕರು ನಕ್ಕಿದ್ದಾರೆ. ಈ ಬಾರಿ ಅಜಯ್ ಕಾಮಿಡಿ ಎಲ್ಲರಿಗೂ ಇಷ್ಟವಾಗಿದೆ. ಇದೀಗ ಅಜಯ್ ದೇವಗನ್ ಅವರ ಜೋಕ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಮೊದಲ ಬಾರಿಗೆ ಅವರು ನಗೋದನ್ನ ನೋಡಿದೆವು ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.

suddiyaana