ಟೋಲ್ ಚಾರ್ಜ್‌ನಿಂದ ಕಂಗೆಟ್ಟ ವಾಹನ ಸವಾರರಿಗೆ ಗುಡ್‌ನ್ಯೂಸ್ – ಶೇ.50ರಷ್ಟು ಟೋಲ್ ಚಾರ್ಜ್ ಕಡಿತ

ಟೋಲ್ ಚಾರ್ಜ್‌ನಿಂದ ಕಂಗೆಟ್ಟ ವಾಹನ ಸವಾರರಿಗೆ ಗುಡ್‌ನ್ಯೂಸ್ –  ಶೇ.50ರಷ್ಟು ಟೋಲ್ ಚಾರ್ಜ್ ಕಡಿತ

ದುಬಾರಿ ಟೋಲ್ ಚಾರ್ಜ್‌ನಿಂದ ಕಂಗೆಟ್ಟ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದೆ.   ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಟೋಲ್ ದರ ಶೇಕಡಾ 50 ರಷ್ಟು ಕಡಿತ ಮಾಡಿದೆ. ರಾಷ್ಟ್ರೀಯ ಹೆದ್ದಾರಿ ಟೋಲ್ ದರ ಶೇಕಡಾ 50 ರಷ್ಟು ಕಡಿತ ಮಾಡಲಾಗಿದೆ. ಆದರೆ ಈ ಶೇಕಾಡ 50 ರಷ್ಟು ಕಡಿತದಲ್ಲಿ ಎಲ್ಲಾ ಟೋಲ್ ರಸ್ತೆ ಅನ್ವಯವಾಗುವುದಿಲ್ಲ. ಯಾವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಂಗ ಮಾರ್ಗ, ಫ್ಲೈ ಓವರ್, ಸೇತುವೆ ಸೇರಿದಂತೆ ಎಲಿವೇಟೆಡ್ ರಸ್ತೆಗಳ ರಚನೆ ಇದೆಯೋ ಈ ಟೋಲ್ ರಸ್ತೆಗಳ ದರ ಅರ್ಧದಷ್ಟು ಕಡಿತ ಮಾಡಲಾಗಿದೆ.

ರಾಷ್ಟ್ರೀಯ ಹೆದ್ದಾರಿಯ ಸೇತುವೆ, ಸುರಂಗ, ಫ್ಲೈಓವರ್ ಸೇರಿದಂತೆ ಎಲಿವೆಟೆಡ್ ರಸ್ತೆಗಳ ಟೋಲ್ ದರ ಪರಿಷ್ಕರಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಒಟ್ಟು ಉದ್ದದ ಐದುಪಟ್ಟು ಅಥವಾ ಎಲಿವೇಟೆಡ್ ಹೆದ್ದಾರಿ ಭಾಗದ ಒಟ್ಟು ಉದ್ದ ಇವೆಡರಲ್ಲಿ ಯಾವುದು ಕಡಿಮೆ ಆಗುತ್ತೋ ಅದರ ಪ್ರಕಾರ ಟೋಲ್ ಶುಲ್ಕ ವಿಧಿಸಲಾಗುತ್ತಿದೆ. ಇದು ಪರಿಷ್ಕೃತ ನಿಯಮವಾಗಿದೆ. ಇದರಿಂದ ಹೆದ್ದಾರಿಯ ಎಲಿವೇಟೆಡ್ ಟೋಲ್ ರಸ್ತೆಗಳ ಶುಲ್ಕ ಶೇಕಡಾ 50 ರಷ್ಟು ಕಡಿಮೆಯಾಗಲಿದೆ. ಇದರಿಂದ ವಾಹನ ಸವಾರರು ನಿರಾಳರಾಗಿದ್ದಾರೆ.

ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳಲ್ಲಿ ಟೋಲ್ ಶುಲ್ಕ ವಿಧಿಸಲು 2008ರ ಟೋಲ್ ಪ್ಲಾಜಾ ನಿಯಮ ಅನುಸರಿಸಲಾಗುತ್ತದೆ. ಇದೀಗ 2008ರ ಈ ಟೋಲ್ ಪ್ಲಾಜಾ ನಿಯಮಕ್ಕೆ ತಿದ್ದುಪಡಿ ತರಲಾಗಿದೆ. ಈ ಮೂಲಕ ಹೊಸ ಟೋಲ್ ದರ ಜಾರಿಗೆ ಮಾಡಲಾಗಿದೆ. ಸದ್ಯ ಮಾಡಿರುವ ತಿದ್ದುಪಡಿ ಹೆದ್ದಾರಿ ರಸ್ತೆಯ ಸುರಂಗ, ಫ್ಲೈಓವರ್, ಸೇತುವೆ ಸೇರಿದಂತೆ ಎಲಿವೇಟೆಡ್ ಟೋಲ್ ರಸ್ತೆಗಳಿಗೆ ಅನ್ವಯವಾಗಲಿದೆ.

Kishor KV