ಇಳಕಲ್ ಸೀರೆಯಲ್ಲಿ ಮೂಡಿದ ರಾಷ್ಟ್ರಧ್ವಜ & ಚಂದ್ರಯಾನ 3 – ಕಲಾವಿದನ ಕೈಚಳಕಕ್ಕೆ ಜನ ಬೆರಗು

ಇಳಕಲ್ ಸೀರೆಯಲ್ಲಿ ಮೂಡಿದ ರಾಷ್ಟ್ರಧ್ವಜ & ಚಂದ್ರಯಾನ 3 – ಕಲಾವಿದನ ಕೈಚಳಕಕ್ಕೆ ಜನ ಬೆರಗು

ಸ್ವಾತಂತ್ರ್ಯ ದಿನಾಚರಣೆಗೆ ಇನ್ನೆರಡೇ ದಿನ ಬಾಕಿ ಉಳಿದಿದ್ದು ಧ್ವಜಾರೋಹಣಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಕಲಾವಿದರು ಕೂಡ ತಮ್ಮದೇ ಶೈಲಿಯಲ್ಲಿ ಸ್ವಾತಂತ್ರ್ಯ ದಿನದ ಕಲರವ ಹೆಚ್ಚಿಸಿದ್ದಾರೆ. ಅದರಲ್ಲೂ ನೇಕಾರ ಕಲಾವಿದ ಮೇಘರಾಜ್ ಗುದಟ್ಟಿ (Meghraj Gudatti) ಅವರು ಇಳಕಲ್‌ ಸೀರೆಯಲ್ಲಿ ರಾಷ್ಟ್ರಧ್ವಜ (National Flag) ಮತ್ತು ಚಂದ್ರಯಾನ-3 (Chandrayaan-3) ಚಿತ್ರ ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ  : ಜಪಾನ್ ತಂಡವನ್ನು ಮಣಿಸಿದ ಭಾರತ – ‘ಏಷ್ಯನ್ ಚಾಂಪಿಯನ್ಸ್ ಟ್ರೋಫಿ’ ಫೈನಲ್‌ಗೆ ಟೀಮ್ ಇಂಡಿಯಾ ಎಂಟ್ರಿ

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಐತಿಹಾಸಕ್ಕೆ ಸಾಧನೆ ಮಾಡಲು ಮುಂದಾಗಿದ್ದು ಕಳೆದ ಜುಲೈ 14ರಂದು ಚಂದ್ರಯಾನ 3 ನೌಕೆಯನ್ನ ಉಡಾವಣೆ ಮಾಡಿದೆ. ಇದೇ ತಿಂಗಳ 27ರಂದು ನೌಕೆಯು ಚಂದಿರನ ದಕ್ಷಿಣ ಧ್ರುವಕ್ಕೆ ಇಳಿಯಲಿದ್ದು ಮೈಲುಗಲ್ಲು ಸಾಧಿಸಲಿದೆ. ಇಸ್ರೋದ ಈ ಸಾಧನೆಗೆ ಇಡೀ ವಿಶ್ವವೇ ಬೆರಗು ಗಣ್ಣಿನಿಂದ ನೋಡುತ್ತಿದೆ. ಹೀಗಾಗಿ ನಾನು ನನ್ನ ಕೈಲಾದ ಮಟ್ಟಿಗೆ ಪ್ರಯತ್ನಿಸಿ ನೇಯ್ಗೆಯ ಮೂಲಕ ಇಸ್ರೋ ವಿಜ್ಞಾನಿಗಳಿಗೆ (ISRO Scientist) ಗೌರವ ಸಲ್ಲಿಸಿದ್ದೇನೆ ಎಂದು ಮೇಘರಾಜ್ ಹೇಳಿದ್ದಾರೆ.

ದೇಶದಲ್ಲೇ ಪ್ರಖ್ಯಾತಿ ಹಾಗೂ ಪ್ರಸಿದ್ಧಿಯನ್ನು ಪಡೆದಿರುವ ಇಳಕಲ್ ಸೀರೆಯ (Ilkal Saree) ಮೇಲೆ ಮೇಘರಾಜ್ ಅವರು ಕಲಾ ನೈಪುಣ್ಯ ಪ್ರದರ್ಶಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಅಯೋಧ್ಯೆಯ ರಾಮಮಂದಿರದ (Ram mandir) ಅಡಿಗಲ್ಲು ಹಾಕುವಾಗ ಸೀರೆಯಲ್ಲಿ ರಾಮಮಂದಿರದ ನೀಲನಕ್ಷೆಯನ್ನು ಬಿಡಿಸಿ ಅಭಿಮಾನ ಮೆರೆದಿದ್ದರು. ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರ ಕೊನೆಯ ಜೇಮ್ಸ್‌ (James) ಚಿತ್ರಕ್ಕೆ ವಿಶೇಷ ಶುಭಾಶಯಗಳನ್ನು ಕೋರಿ ಚಿತ್ರ ಶತದಿನೋತ್ಸವ ಆಚರಿಸಲಿ ಎಂದು ಶುಭ ಹಾರೈಸಿದ್ದರು. ಅಲ್ಲದೇ ಕಾಂತಾರ (Kantara) ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಗಲಿ ಎಂದು ಸೀರೆಯಲ್ಲಿ ಶುಭ ಕೋರಿದ್ದರು.

suddiyaana