ಅತ್ಯುತ್ತಮ ನಟ ಪ್ರಶಸ್ತಿ ಮೂಲಕ ತೆಲುಗು ಚಿತ್ರರಂಗದಲ್ಲಿ ಇತಿಹಾಸ ಬರೆದ ಅಲ್ಲು ಅರ್ಜುನ್ – ‘ಗಂಗೋತ್ರಿ’ಯಿಂದ ‘ಪುಷ್ಪ’ರಾಜ್ ವರೆಗಿನ ಸಿನಿಪಯಣವೇ ರೋಚಕ

ಅತ್ಯುತ್ತಮ ನಟ ಪ್ರಶಸ್ತಿ ಮೂಲಕ ತೆಲುಗು ಚಿತ್ರರಂಗದಲ್ಲಿ ಇತಿಹಾಸ ಬರೆದ ಅಲ್ಲು ಅರ್ಜುನ್ – ‘ಗಂಗೋತ್ರಿ’ಯಿಂದ ‘ಪುಷ್ಪ’ರಾಜ್ ವರೆಗಿನ ಸಿನಿಪಯಣವೇ ರೋಚಕ

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆ ಆಗಿದ್ದು, 50ಕ್ಕೂ ಹೆಚ್ಚು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಸಿನಿಮಾ ರಂಗಕ್ಕೆ ನೀಡುವ ದೇಶದ ಪ್ರತಿಷ್ಠಿತ ಪ್ರಶಸ್ತಿ ಇದಾಗಿದ್ದು, ರಾಷ್ಟ್ರಪತಿಗಳೇ ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಾರೆ. ಅದರಲ್ಲೂ ಈ ಬಾರಿಯ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ನಟ ಎಂದರೆ ಅದು ಅಲ್ಲು ಅರ್ಜುನ್.

ಇದನ್ನೂ ಓದಿ : 12 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ – ಕೊಡವ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಹರ್ಷಿಕಾ, ಭುವನ್‌

ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಸಿನಿಮಾ ನಟನೆಗೆ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ತೆಲುಗು ಕಲಾವಿದರೊಬ್ಬರು ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಪಡೆಯುತ್ತಿರುವುದು ಇದೇ ಮೊದಲು. ಈ ಮೂಲಕ ಅಲ್ಲು ಅರ್ಜುನ್ ಅವರು ಇತಿಹಾಸ ಬರೆದಿದ್ದಾರೆ. ಅವರಿಗೆ ಎಲ್ಲಾ ಕಡೆಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. 2021ರ ಡಿಸೆಂಬರ್​ನಲ್ಲಿ ರಿಲೀಸ್ ಆಯಿತು. ಈ ಚಿತ್ರ ನೋಡಿದ ಎಲ್ಲರೂ ಸಿನಿಮಾ ಬಗ್ಗೆ ಮೆಚ್ಚುಗೆ ತಿಳಿಸಿದ್ದರು. ಯಾಕಂದ್ರೆ ಅಲ್ಲು ಅರ್ಜುನ್​ ಅವರ ಮೇಕೋವರ್ ಗಮನ ಸೆಳೆದಿತ್ತು. ಅವರ ಮ್ಯಾನರಿಸಂ ಈ ಚಿತ್ರದಲ್ಲಿ ಬೇರೆಯದೇ ರೀತಿ ಇತ್ತು. ಅವರ ನಟನೆಗೆ ಜನರು ಭೇಷ್ ಎಂದರು. ಈಗ ಅವರ ನಟನೆಗೆ ರಾಷ್ಟ್ರಪ್ರಶಸ್ತಿ ದೊರೆತಿದ್ದು ಎಲ್ಲರಿಗೂ ಖುಷಿಕೊಟ್ಟಿದೆ.

ಅಲ್ಲು ಅರ್ಜುನ್ ಅವರ ಸಿನಿಪಯಣ ನೋಡೋದಾದ್ರೆ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್. ಹಲವು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅಲ್ಲು ಅರ್ಜುನ್ ಅವರು ಜನಿಸಿದ್ದು ಏಪ್ರಿಲ್ 8, 1982 ರಂದು. ಸಿನಿಮಾ ಹಿನ್ನೆಲೆ ಇರುವ ಕುಟುಂಬದಲ್ಲಿ ಹುಟ್ಟಿದ್ದರಿಂದ ಸಹಜವಾಗಿಯೇ ಅವರಿಗೆ ಸುಲಭದಲ್ಲಿ ಆಫರ್​ಗಳು ಸಿಕ್ಕವು. ಆದರೆ, ಅವರು ತಂದೆಯ ನೆರಳಲ್ಲಿ ಬೆಳೆಯದೇ ಪ್ರತ್ಯೇಕವಾಗಿ ಗುರುತಿಸಿಕೊಂಡರು. ಬಾಲ ನಟನಾಗಿ ಚಿತ್ರರಂಗಕ್ಕೆ ಬಂದ ಅಲ್ಲು ಅರ್ಜುನ್ ಅವರು, ಬಳಿಕ ‘ಗಂಗೋತ್ರಿ’ (2003) ಚಿತ್ರದ ಮೂಲಕ ಹೀರೋ ಆದರು. ಈ ಚಿತ್ರವನ್ನು ರಾಘವೇಂದ್ರ ರಾವ್ ನಿರ್ದೇಶನ ಮಾಡಿದ್ದರು. 2004ರಲ್ಲಿ ರಿಲೀಸ್ ಆದ ‘ಆರ್ಯ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಸುಕುಮಾರ್. ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಲು ಈ ಚಿತ್ರ ಸಹಕಾರಿ ಆಯಿತು. ಬಳಿಕ ‘ಬನ್ನಿ’, ‘ರೇಸ್​ ಗುರಮ್’, ‘ಸರೈನೋಡು’, ‘ಆರ್ಯ 2’, ‘ವೇದಂ’, ‘ಅಲಾ ವೈಕುಂಟಪುರಮುಲೋ’ ಸೇರಿ ಅನೇಕ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ.

ಅಲ್ಲು ಅರ್ಜುನ್ ತೆಲುಗು ಮಂದಿಗೆ ಪರಿಚಿತರಾಗಿದ್ದರು. ಅವರ ಯಾವ ಚಿತ್ರಗಳೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿರಲಿಲ್ಲ. ‘ಪುಷ್ಪ’ ಸಿನಿಮಾ ತೆಲುಗು ಜೊತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿಗೆ ಡಬ್ ಆಗಿ ರಿಲೀಸ್ ಆಯಿತು. ಪುಷ್ಪರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್ ಮಿಂಚಿದರು. ಈ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ 300 ಕೋಟಿ ರೂಪಾಯಿ ದಾಟಿದೆ. ಹಿಂದಿ ಒಂದರಲ್ಲೇ ಈ ಚಿತ್ರ 100 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಚಿತ್ರದಿಂದ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದರು.

suddiyaana