ಪಿಂಚಣಿ ವ್ಯವಸ್ಥೆ ವಿರುದ್ಧ ರಾಷ್ಟ್ರವ್ಯಾಪಿ ಮುಷ್ಕರ- ಫ್ರಾನ್ಸ್‌ನಲ್ಲಿ ಜನಜೀವನ ಅಸ್ತವ್ಯಸ್ತ

ಪಿಂಚಣಿ ವ್ಯವಸ್ಥೆ ವಿರುದ್ಧ ರಾಷ್ಟ್ರವ್ಯಾಪಿ ಮುಷ್ಕರ- ಫ್ರಾನ್ಸ್‌ನಲ್ಲಿ ಜನಜೀವನ ಅಸ್ತವ್ಯಸ್ತ

ಪಿಂಚಣಿ ವ್ಯವಸ್ಥೆ ವಿರುದ್ಧ ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಪಿಂಚಣಿ ವ್ಯವಸ್ಥೆಯನ್ನು ಸುಧಾರಿಸುವ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಯೋಜನೆ ವಿರುದ್ಧ ಜನ ಆಕ್ರೋಶಗೊಂಡು ಬೀದಿಗಿಳಿದಿದ್ದಾರೆ. ಪಿಂಚಣಿ ವ್ಯವಸ್ಥೆಯ ಬದಲಾವಣೆಗಳ ಅಗತ್ಯತೆಗಳ ಬಗ್ಗೆ ಜನರಿಗೆ ತಿಳಿಸಲು ಸರ್ಕಾರ ಹೆಣಗಾಡುತ್ತಿದೆ. ಆಂತರಿಕ ಸಚಿವಾಲಯದ ಪ್ರಕಾರ 1.27 ದಶಲಕ್ಷಕ್ಕೂ ಹೆಚ್ಚು ಜನ ಹೋರಾಟಕ್ಕಿಳಿದಿದ್ದಾರೆ.

ಇದನ್ನೂ ಓದಿ:  ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಹುತಾತ್ಮರಲ್ಲ, ಅದೊಂದು ಅಪಾಘಾತವಷ್ಟೇ’ – ಬಿಜೆಪಿ ಸಚಿವ

ಫ್ರಾನ್ಸ್ ನಲ್ಲಿ ಲಕ್ಷ ಲಕ್ಷ ಜನರ ಹೋರಾಟದ ಪರಿಣಾಮ ಜನಜೀವನ ಅಲ್ಲೋಲ ಕಲ್ಲೋಲವಾಗಿದೆ. ರಾಷ್ಟ್ರವ್ಯಾಪಿ ನಡೆಯುತ್ತಿರುವ ಮುಷ್ಕರದಿಂದಾಗಿ ವಿದ್ಯುತ್ ಉತ್ಪಾದನೆ ಮೇಲೂ ಪರಿಣಾಮ ಬೀರಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ , ಶಾಲಾ ಕಾಲೇಜುಗಳು ಸಂಪೂರ್ಣ ಬಂದ್ ಆಗಿವೆ. ಜೊತೆಗೆ ರೈಲು ಸಂಚಾರ ಕೂಡಾ ಅಸ್ತವ್ಯಸ್ತಗೊಂಡಿದೆ.

suddiyaana