ಕನ್ನಡದಲ್ಲೂ ಹಾರ್ದಿಕ್ ಹೆಂಡ್ತಿ ಡ್ಯಾನ್ಸ್!! – ನತಾಶಾಗೆ ಸಿಕ್ಕ ಪಾಲೆಷ್ಟು?
ಪಾಂಡ್ಯ ಪತ್ನಿ ಎಷ್ಟು ಕೋಟಿಗಳ ಒಡತಿ?

ಕನ್ನಡದಲ್ಲೂ ಹಾರ್ದಿಕ್ ಹೆಂಡ್ತಿ ಡ್ಯಾನ್ಸ್!! – ನತಾಶಾಗೆ ಸಿಕ್ಕ ಪಾಲೆಷ್ಟು?ಪಾಂಡ್ಯ ಪತ್ನಿ ಎಷ್ಟು ಕೋಟಿಗಳ ಒಡತಿ?

ಹಾರ್ದಿಕ್‌ ಪಾಂಡ್ಯ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದೆ.. ಪತ್ನಿ ನತಾಶ ಸ್ಟಾಂಕೋವಿಕ್ ಹಾರ್ದಿಕ್‌ ಪಾಂಡ್ಯಗೆ ವಿಚ್ಛೇದನ ನೀಡಲಿದ್ದಾರೆ ಎಂಬ ವದಂತಿ ಜೋರಾಗಿ ಸದ್ದು ಮಾಡ್ತಾ ಇದೆ. ಈ ಸುದ್ದಿಯನ್ನು ಪುಷ್ಠಿಕರಿಸುವಂತೆ ನತಾಶ  ಮುಂಬೈನ ಬಾಂದ್ರಾದ ಕೆಫೆ ಒಂದರಲ್ಲಿಅಲೆಕ್ಸಾಂಡರ್‌ ಎಂಬವರ ಜೊತೆ ಕಾಣಿಸಿಕೊಂಡಿದ್ರು.. ಹೀಗಾಗಿ ಡಿವೋರ್ಸ್‌ ಪಕ್ಕಾ. ಹಾರ್ದಿಕ್  ಆಸ್ತಿಲಿ 70 % ನತಾಶಾಗೆ ಕೊಡ್ಬೇಕು ಅಂತಾ ಭಾರಿ ಚರ್ಚೆ ಆಗ್ತಾ ಇತ್ತು.. ಈ ಬೆನ್ನೆಲ್ಲೆ‌ ಪಾಂಡ್ಯ ಫ್ಯಾನ್ಸ್ ನತಾಶ ಹಿನ್ನೆಲೆ ಏನು? ಆದಾಯ ಎಷ್ಟಿದೆ ಅಂತಾ ಗೂಗಲ್ ನಲ್ಲಿ ಸರ್ಚ್ ಮಾಡ್ತಾ ಇದ್ದಾರೆ..

ಇದನ್ನೂ ಓದಿ: ಕೇಜ್ರಿವಾಲ್‌ಗೆ ಕಾನೂನು ಹೋರಾಟದಲ್ಲಿ ಹಿನ್ನಡೆ – ಭಾನುವಾರ ಜೈಲಿಗೆ

ಈ ವರ್ಷ ಪಾಂಡ್ಯ ಟೈಮೇ ಅದ್ಯಾಕೋ ಸರಿ ಇಲ್ಲ ಅನ್ಸುತ್ತೆ.. ಒಂದಲ್ಲ ಒಂದು ವಿಚಾರದಲ್ಲಿ ಹೊಡೆತ ತಿನ್ನುತ್ತಲೇ ಇದ್ದಾರೆ.. ಪದೇ ಪದೇ ಟೀಕೆಗೆ ಗುರಿಯಾಗುತ್ತಲೇ ಇದ್ದಾರೆ.. ಈ ಬಾರಿಯ ಐಪಿಎಲ್ ನಲ್ಲಿ ಪಾಂಡ್ಯ ಒಳ್ಳೆ ಪ್ರದರ್ಶನ ನೀಡಿಲ್ಲ..  ಈಗ ಟಿ20 ವಿಶ್ವಕಪ್​​ಗೆ ತಯಾರಿ ನಡೆಸುತ್ತಿರುವ ಹೊತ್ತಲ್ಲೇ ಪಾಂಡ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪಾಂಡ್ಯ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಇದರ ಸೂಚನೆ ಎಂಬಂತೆ ನತಾಶಾ ಇತ್ತೀಚೆಗೆ ತನ್ನ ಇನ್‌ಸ್ಟಾಗ್ರಾಮ್ ಖಾತೆಯಿಂದ ಪಾಂಡ್ಯ ಹೆಸರನ್ನು ತೆಗೆದುಹಾಕಿದ್ದರು. ಇದಾದ ಬಳಿಕ ಇಬ್ಬರು ತಮ್ಮ ಫೋಟೋಗಳನ್ನು ಎಲ್ಲೂ ಶೇರ್​ ಮಾಡಿಲ್ಲ. ಅದರಲ್ಲೂ ಮಾರ್ಚ್​​ 4ನೇ ತಾರೀಕು ನತಾಶಾ ಸ್ಟಾಂಕೋವಿಕ್ ಬರ್ತಡೇ. ಅಂದು ಹಾರ್ದಿಕ್​​​​​ ಹೆಂಡತಿಗೆ ಒಂದು ಸ್ಟೇಟಸ್​ ಹಾಕಿ ವಿಶ್​ ಮಾಡಿಲ್ಲ.

ಇತ್ತೀಚೆಗೆ ಈ ಬಗ್ಗೆ ಮೀಡಿಯಾದವ್ರು ಪ್ರಶ್ನೆ ಮಾಡಿದಾಗಲೂ ನತಾಶಾ ಯಾವುದೇ ರಿಯಾಕ್ಟ್​ ಮಾಡಿರಲಿಲ್ಲ. ಹೀಗಾಗಿ ಪಾಂಡ್ಯ ದಂಪತಿ ಡಿವೋರ್ಸ್ ಪಕ್ಕಾ ಅಂತಾ ಫ್ಯಾನ್ಸ್ ಮಾತಾಡ್ತಿದ್ದಾರೆ. ಅಷ್ಟೇ ಅಲ್ಲ  ಪಾಂಡ್ಯ ತಮ್ಮ ಪತ್ನಿಯಿಂದ ಡಿವೋರ್ಸ್​ ಪಡೆದ್ರೆ ಜೀವನಾಂಶ ನೀಡಬೇಕು. ಆಗ ಹೆಂಡತಿಗೆ ಜೀವನಾಂಶ ಎಂದು 70% ಆಸ್ತಿ ಕೊಡಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ನತಾಶ ಹಿನ್ನೆಲೆ ಏನು? ಎಷ್ಟು ಕೋಟಿ ಒಡತಿ ಅನ್ನೋ ಬಗ್ಗೆ ಹುಡುಕಾಡುತ್ತಿದ್ದಾರೆ ಫಾನ್ಸ್..

ಮಾರ್ಚ್ 4, 1992ರಂದು ಜನಿಸಿದ ನತಾಶಾ, ಸೆರ್ಬಿಯಾ ಮೂಲದವರು‌.

ಸರ್ಬಿಯಾದಲ್ಲಿ ಮಾಡೆಲ್ ಕ್ಷೇತದಲ್ಲಿ ಗುರುತಿಸಿಕೊಂಡಿದ್ದ ನತಾಶ  2012ಕ್ಕೆ ಭಾರತಕ್ಕೆ ಬಂದಿದ್ದರು..   ಬಳಿಕ ಈ ಬ್ಯೂಟಿ, ಇಂಡಿಯನ್ ರ್ಯಾಪರ್ ಬಾದ್‌ಷಾ ಅವರ ಮ್ಯೂಸಿಕ್ ವಿಡಿಯೋ ಆಲ್ಬಂನಲ್ಲಿ ಹೆಜ್ಜೆ ಹಾಕುವ ಮೂಲಕ ಪ್ರಖ್ಯಾತಿ ಗಳಿಸಿದ್ದರು. ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿರುವ ನತಾಶಾ ಕೆಲ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ನತಾಶಾ ಅವರು ಮೊದಲಿಗೆ ಪ್ರಕಾಶ್ ಝಾ ಅವರ ಸತ್ಯಾಗ್ರಹ ಸಿನಿಮಾದಲ್ಲಿ ‘ಅಯೋ ಜಿ’ ಎಂಬ ಹಾಡೊಂದರಲ್ಲಿ ಕಾಣಿಸಿಕೊಂಡರು. ಇದಾದ ಬೆನ್ನಲ್ಲೇ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್‌ಬಾಸ್ 8ನೇ ಆವೃತ್ತಿಯಲ್ಲಿ ಕಾಣಿಸಿಕೊಂಡರು. ಬಳಿಕ ಫರ್ಕಿ ರಿಟರ್ನ್ಸ್ ನ‌ ಮೆಹಬೂಬ, ಡ್ಯಾಡಿ ಸಿನಿಮಾದ ಜಿಂದಗಿ ಮೆರಿ ಡ್ಯಾನ್ಸ್ ಮತ್ತು ಪ್ರೈ ಡೇ  ಚಿತ್ರದ ಜಿ ಮೈ ಛೋಯಿ ಹಾಡುಗಳಲ್ಲಿ ನತಾಶಾ ಹೆಜ್ಜೆ ಹಾಕಿದ್ದರು. ಇತ್ತೀಚೆಗೆ ಇಮ್ರಾನ್ ಹಶ್ಮಿ ಅವರ ದಿ ಬಾಡಿ ಚಿತ್ರದ ಜಲಕ್ ದಿಕಲಾಜಾ ಹೊಸ ಅವತರಣಿಕೆಯ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 2019ರ ನಾಚ್ ಬೆಲಿಯೇ -9 ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದರು. ಇದರಲ್ಲಿ ಮೂರನೇ ರನ್ನರ್ ಅಪ್ ಆಗಿದ್ದರು.

ಇನ್ನು ನತಾಶ ಸ್ಯಾಂಡಲ್ ವುಡ್ ನಲ್ಲೂ ಸೊಂಟ ಬಳುಕಿಸಿದ್ದಾರೆ.‌ ನಟ ದುನಿಯಾ ವಿಜಯ್ ಅಭಿನಯದ ಯೋಗರಾಜ್ ಭಟ್ ನಿರ್ದೇಶನದ ದನ ಕಾಯೋನು ಚಿತ್ರದಲ್ಲಿಯು ನತಾಶಾ ಹಾಡೊಂದಕ್ಕೆ ಡ್ಯಾನ್ಸ್ ಮಾಡಿದ್ದಾರೆ.. ಸಿನಿಮಾ ರಂಗ, ಮಾಡೆಲಿಂಗ್ ಮಾತ್ರವಲ್ಲದೆ ನತಾಶಾ ಜಾಹಿರಾತುಗಳ ಮೂಲಕವೂ ಆದಾಯ ಗಳಿಸುತ್ತಾರೆ.. ಇವರ ಆಸ್ತಿ 20 ಕೋಟಿಗೂ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

 

Shwetha M

Leave a Reply

Your email address will not be published. Required fields are marked *