ಬಾವಿಗೆ ಬಿದ್ದ ಕಾರು! – ಘೋರ ದುರಂತಕ್ಕೆ 9 ಮಂದಿ ಸ್ಥಳದಲ್ಲೇ ಸಾವು!

ಬಾವಿಗೆ ಬಿದ್ದ ಕಾರು! – ಘೋರ ದುರಂತಕ್ಕೆ 9 ಮಂದಿ ಸ್ಥಳದಲ್ಲೇ ಸಾವು!

9 ಮಂದಿ ಪ್ರಯಾಣಿಸುತ್ತಿದ್ದ ಕಾರೋಂದು ಬಾವಿಗೆ ಬಿದ್ದು, 9 ಮಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದಿದೆ. ಮೃತರಲ್ಲಿ 6 ಮಕ್ಕಳಿದ್ದರೂ ಎಂದು ಹೇಳಲಾಗಿದೆ.

ಇದನ್ನೂ ಓದಿ: ತವರಿನಲ್ಲೂ ಚೆನ್ನೈಗೆ ಸಿಗಲಿಲ್ಲ ಗೆಲುವು – ಸಿಎಸ್‌ಕೆ ವಿರುದ್ಧ ಗೆದ್ದು ಬೀಗಿದ ಪಂಜಾಬ್ ಕಿಂಗ್ಸ್

ನಾಸಿಕ್‌ನ ದಿಂಡೋರಿ ತಾಲೂಕಿನಲ್ಲಿ ಶುಕ್ರವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಮಾರುತಿ XL6 ಕಾರಿನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಬಾವಿಗೆ ಉರುಳಿ ಬಿದ್ದಿದೆ. ವಾಹನದಲ್ಲಿದ್ದ 9 ಜನ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವರದಿಯ ಪ್ರಕಾರ ದರ್ಗುಡೆ ಕುಟುಂಬವು ಖಾಸಗಿ ಕಾರ್ಯಕ್ರಮವೊಂದಕ್ಕೆ ವಾಪಸ್ ಬರುವಾಗ ಈ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತರೆಲ್ಲರೂ ಇಂದೋರ್ ಗ್ರಾಮದ ದರ್ಗುಡೆ ಕುಟುಂಬದವರು ಎಂದು ಪೊಲೀಸರು ಹೇಳಿದ್ದಾರೆ.  ಮೃತರಲ್ಲಿ ಸುನಿಲ್ ದರ್ಗುಡೆ, ಅವರ ಪತ್ನಿ ಮತ್ತು ಅವರ ಮಗಳು ಸೇರಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರ, ವಾಹನದ ಚಾಲಕನ ನಿಯಂತ್ರಣ ತಪ್ಪಿ, ವಾಹನವು ನೇರವಾಗಿ ನೀರು ತುಂಬಿದ ಬಾವಿಗೆ ಬಿದ್ದಿದೆ. ಅಪಘಾತದ ಬಗ್ಗೆ ತಿಳಿದ ತಕ್ಷಣ, ಅಲ್ಲಿ ಜನರು ಮತ್ತು ಪೊಲೀಸರು ರಕ್ಷಣಾ ಕಾರ್ಯಕ್ಕಾಗಿ ಸ್ಥಳಕ್ಕೆ ಧಾವಿಸಿದರು. ಎನ್‌ಡಿಆರ್‌ಎಫ್ ಸಿಬ್ಬಂದಿ ಕೂಡ ಸ್ಥಳಕ್ಕೆ ತಲುಪಿ ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ದಿಂಡೋರಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಪಘಾತದ ನಿಖರವಾದ ಕಾರಣವನ್ನು ಏನು ಎಂಬ ಬಗ್ಗೆ ಕಾರಣ ಹುಡುಕುತ್ತಿದ್ದಾರೆ.

Shwetha M