ಭೂಮಿಯಂತಿರುವ ಮತ್ತೊಂದು ಗ್ರಹ ಪತ್ತೆ! – ಮಾನವನ ವಾಸಕ್ಕೆ ಯೋಗ್ಯವಾಗಿದ್ಯಾ ಈ ಗ್ರಹ?

ಭೂಮಿಯಂತಿರುವ ಮತ್ತೊಂದು ಗ್ರಹ ಪತ್ತೆ! – ಮಾನವನ ವಾಸಕ್ಕೆ ಯೋಗ್ಯವಾಗಿದ್ಯಾ ಈ ಗ್ರಹ?

ಸೌರಮಂಡಲ ಹತ್ತು ಹಲವು ನಿಗೂಢಗಳ ಗೊಂಚಲು. ಇಲ್ಲಿ ನಡೆಯುವ ಕೌತುಕಗಳು ಅಚ್ಚರಿಯ ಜೊತೆಗೆ ಹತ್ತಾರು ಪ್ರಶ್ನೆಗಳನ್ನೂ ಮೂಡಿಸುತ್ತದೆ. ಹೀಗಾಗಿ ಖಗೋಳಶಾಸ್ತ್ರಜ್ಞರು ಸೌರಮಂಡಲದ ಮೇಲೆ ಸದಾ ಕಣ್ಣಿಟ್ಟಿರುತ್ತಾರೆ. ಅಲ್ಲಿ ನಡೆಯುವ ಪ್ರತಿಯೊಂದು ವಿದ್ಯಾಮಾನಗಳ ಬಗ್ಗೆಯೂ ಅಧ್ಯಯನ ನಡೆಸುತ್ತಾರೆ. ಇದೀಗ ಖಗೋಳಶಾಸ್ತ್ರಜ್ಞರು ಭೂಮಿಯ ಗಾತ್ರ ಇರುವ ಗ್ರಹವೊಂದನ್ನು ಪತ್ತೆಹಚ್ಚಿದ್ದಾರೆ!

ಇದನ್ನೂ ಓದಿ: ಮರೆಯಾಗುತ್ತಿದೆ ಶನಿಗ್ರಹದ ವಿಶಿಷ್ಟ ‘ಉಂಗುರ’!

ಹೌದು, ಸೌರಮಂಡಲದಲ್ಲಿ ಸಾಕಷ್ಟು ಗ್ರಹಗಳ ಹುಟ್ಟು ಸಾವು ಸಂವಿಸುತ್ತಲೇ ಇರುತ್ತದೆ. ಆದರೆ ನಮಗೆ ಇದ್ಯಾವುದರ ಬಗ್ಗೆಯೂ ಅರಿವಿರುವುದಿಲ್ಲ. ಇದೀಗ ಖಗೋಳಶಾಸ್ತ್ರಜ್ಞರು ಭೂಮಿಯ ಗಾತ್ರದಷ್ಟು ದೊಡ್ಡದಾದ ಗ್ರಹವೊಂದನ್ನು ಪತ್ತೆಹಚ್ಚಿದ್ದಾರೆ. ಇದಕ್ಕೆ “ಎಲ್‌ಪಿ 791-18ಡಿ” ಎಂದು ನಾಮಕರಣ ಮಾಡಿದ್ದಾರೆ.

ಅಮೆರಿಕದ ನಾಸಾದ ಟ್ರಾನ್ಸಿಟಿಂಗ್‌ ಎಕ್ಸೋಪ್ಲಾನೆಟ್‌ ಸರ್ವೆ ಸ್ಯಾಟಲೈಟ್‌(ಟಿಇಎಸ್‌ಎಸ್‌) ಮತ್ತು ಸ್ಪಿಟ್ಜರ್‌ ಬಾಹ್ಯಾಕಾಶ ದೂರದರ್ಶಕ ಬಳಸಿ ಖಗೋಳಶಾಸ್ತ್ರಜ್ಞರು ಈ ಸಂಶೋಧನೆ ನಡೆಸಿದ್ದಾರೆ. ಅಲ್ಲದೇ ಈ ಸಂಶೋಧನಾತ್ಮಕ ಅಧ್ಯಯನವನ್ನು “ನೇಚರ್‌’ ನಿಯತಕಾಲಿಕೆಯಲ್ಲಿ ಪ್ರಕಟಿಸಿದ್ದಾರೆ.

ಅಧ್ಯಯನದ ಪ್ರಕಾರ ಈ ಗ್ರಹವು ಜ್ವಾಲಾಮುಖೀಗಳಿಂದ ಕೂಡಿದೆ. ಹೀಗಾಗಿ ಇಲ್ಲಿ ಮಾನವರು ಜೀವನ ನಡೆಸಲು ಅನುಕೂಲವಾಗಿರುವ ವಾತಾವರಣ ಇರಬಹುದು ಎಂದು ಖಗೋಳಶಾಸ್ತ್ರಜ್ಞರು ಅಂದಾಜಿಸಿದ್ದಾರೆ.

ಪತ್ತೆಯಾದ ಗ್ರಹವು ತನ್ನಿಂದ 90 ಜ್ಯೋತಿರ್ವರ್ಷ ದೂರವಿರುವ ಕೆಂಪು ಕುಬ್ಜ ನಕ್ಷತ್ರವನ್ನು ಸುತ್ತುತ್ತಿದೆ. ಈ ನಕ್ಷತ್ರದ ಹೆಸರು “ಕ್ರೇಟರ್‌”. ಈ ಗ್ರಹದಲ್ಲಿ ಅಗ್ಗಿಂದಾಗೆ ಜ್ವಾಲಾಮುಖೀಗಳು ಸ್ಫೋಟಗೊಳ್ಳುತ್ತಿವೆ ಎಂದು ಅಮೆರಿಕದ ಹಾರ್ವರ್ಡ್‌ ವಿವಿ ಮತ್ತು ಸ್ಮಿತ್‌ಸೋನಿಯನ್‌ ಸಂಸ್ಥೆಯ ಖಗೋಳ ಭೌತಶಾಸ್ತ್ರ ವಿಭಾಗದ ಸಂಶೋಧಕರ ತಂಡ ತಿಳಿಸಿದೆ.

suddiyaana