ಮಂಗಳನ ಅಂಗಳದಲ್ಲಿ ಚಲಿಸುವ ಮೋಡಗಳು! – ಫೋಟೋ ಸೆರೆಹಿಡಿದ ನಾಸಾ

ಮಂಗಳನ ಅಂಗಳದಲ್ಲಿ ಚಲಿಸುವ ಮೋಡಗಳು! – ಫೋಟೋ ಸೆರೆಹಿಡಿದ ನಾಸಾ

ಮಂಗಳ ಗ್ರಹದ ಬಗ್ಗೆ ಒಂದಲ್ಲ ಒಂದು ರೀತಿಯ ಅನ್ವೇಷಣೆಯನ್ನು ವಿಜ್ಞಾನಿಗಳು ನಡೆಸುತ್ತಿದ್ದಾರೆ. ಈಗಾಗಲೇ ಮಂಗಳ ಗ್ರಹಕ್ಕೆ ಮಾನವ ಸಹಿತ ಯಾನ, ಮಾನವನ ವಾಸಕ್ಕೆ ಯೋಗ್ಯ ವಾತಾವರಣ ಹೀಗೆ ಹತ್ತು ಹಲವು ವಿಚಾರಗಳನ್ನು ಅಧ್ಯಯನ ನಡೆಸಲು ನಾಸಾ ಸಂಸ್ಥೆ ಮಂಗಳ ಗ್ರಹದಲ್ಲಿ ರಾಶಿ ರಾಶಿ ರೋವರ್‌ಗಳನ್ನ ಲ್ಯಾಂಡ್ ಮಾಡಿದೆ. ಈ ರೋವರ್‌ಗಳು ಕೂಡ ಅತ್ಯದ್ಭುತ ಮಾಹಿತಿಗಳನ್ನು ಹಂಚಿಕೊಳ್ಳುವುದರ ಜೊತೆಗೆ ಫೋಟೋಗಳನ್ನು ಸೆರೆ ಹಿಡಿದು ಕಳುಹಿಸುತ್ತಿದೆ. ಇದೀಗ ನಾಸಾದ ಪೆರ್ಸೆವೆರನ್ಸ್ ರೋವರ್ ಮಂಗಳ ಗ್ರಹದಲ್ಲಿನ ಮೋಡಗಳ ದೃಶ್ಯವನ್ನು ಸೆರೆಹಿಡಿದು ಕಳುಹಿಸಿದ್ದು, ಇದನ್ನು ನಾಸಾ ಹಂಚಿಕೊಂಡಿದೆ.

ಇದನ್ನೂ ಓದಿ: ಮಂಗಳನ ಅಂಗಳ ಮುಟ್ಟಲು 7 ತಿಂಗಳಲ್ಲ 45 ದಿನ ಸಾಕು – ಇತಿಹಾಸ ಬರೆಯುತ್ತಾ ಹೊಸ ಯೋಜನೆ..!?

ನಾಸಾದ ಪೆರ್ಸೆವೆರನ್ಸ್ ರೋವರ್ ಮೋಡಗಳು ಮಂಗಳ ಗ್ರಹದ ಮೇಲೆ ಮೆಲ್ಲಗೆ ಸಾಗುತ್ತಿರುವ ದೃಶ್ಯಗಳನ್ನು ಸೆರೆಹಿಡಿದಿದೆ. ಈ ಮೋಡಗಳ ಬಗ್ಗೆ ನಾಸಾ ವಿವರಣೆ ನೀಡಿದೆ. ಮಂಗಳದ ಮೋಡಗಳು ಭೂಮಿಯ ಸಿರಸ್ ಮೋಡಗಳಂತೆ ತೆಳ್ಳಗಿರುತ್ತವೆ. ಭೂಮಿಯ ಮೋಡಗಳು ದ್ರವರೂಪದ ನೀರನ್ನು ಹೊಂದಿರಬಹುದಾದರೂ, ಮಂಗಳ ಗ್ರಹದ ಮೇಲಿನ ಕಡಿಮೆ ತಾಪಮಾನ ಮತ್ತು ಒತ್ತಡಗಳು ನೀರು-ಐಸ್ (ಮತ್ತು CO2 ಐಸ್) ಮೋಡಗಳನ್ನು ರೂಪಿಸಲು ಮಾತ್ರ ಅನುಮತಿಸುತ್ತವೆ. ಈ ನೀರು-ಐಸ್ ಮೋಡಗಳು ಕಡಿಮೆ ಪ್ರಮಾಣದ ನೀರಿನ ಕಾರಣದಿಂದಾಗಿ ತೆಳುವಾಗಿರುತ್ತವೆ. ಭೂಮಿ ಮೇಲೆ ಯಥೇಚ್ಛವಾಗಿ ನೀರಿದ್ದರೂ ಮಂಗಳ ಗ್ರಹದಲ್ಲಿ ಅಷ್ಟು ನೀರಿಲ್ಲ. ನೀರು ಇದ್ದರೂ ಮಂಗಳ ಗ್ರಹದ ಒಳಭಾಗದಲ್ಲಿ ಅಡಗಿ ಕೂತಿದೆ. ಹೀಗಾಗಿ ಈ ಮೋಡಗಳು ತೆಳ್ಳಗಿರುತ್ತವೆ ಎಂದು ನಾಸಾ ಹೇಳಿದೆ.

ನಾಸಾ ತನ್ನ ಟ್ವಿಟರ್ ಖಾತೆಯಲ್ಲಿ ಮಂಗಳ ಗ್ರಹ ಫೊಟೋಗಳನ್ನು ಹಂಚಿಕೊಂಡಿದ್ದು, ಟ್ವಿಟರ್ ಬಳಕೆದಾರರು ಇದು ಪ್ರಪಂಚದ ಒಂದು ಅದ್ಭುತ. ಭೂಮಿ ಬಿಟ್ಟು ಮತ್ತೊಂದು ಗ್ರಹದಲ್ಲಿ ಅದರಲ್ಲೂ ಮಂಗಳ ಗ್ರಹದಲ್ಲಿ ಮೋಡಗಳು ತೇಲುತ್ತಿರುವುದನ್ನು ನೋಡುವುದು ನಿಜಕ್ಕೂ ಅತ್ಯದ್ಭುತ ಎಂದಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

suddiyaana