ಬಾಹ್ಯಾಕಾಶ ತಲುಪಿದ ʼಡ್ರ್ಯಾಗನ್ʼ ನೌಕೆ – ರಕ್ಷಣೆಗೆ ಬಂದವರನ್ನ ಅಪ್ಪುಗೆ ನೀಡಿ ಸ್ವಾಗತಿಸಿದ ಸುನಿತಾ

ಬಾಹ್ಯಾಕಾಶ ತಲುಪಿದ ʼಡ್ರ್ಯಾಗನ್ʼ ನೌಕೆ – ರಕ್ಷಣೆಗೆ ಬಂದವರನ್ನ ಅಪ್ಪುಗೆ ನೀಡಿ ಸ್ವಾಗತಿಸಿದ ಸುನಿತಾ

ಭಾರತೀಯ ಮೂಲದ ಸುನಿತಾ ವಿಲಿಯಮ್ಸ್‌ ಬಾಹ್ಯಾಕಾಶ್‌ ಅಧ್ಯಯನಕ್ಕೆ ತೆರಳಿದ್ದು, ಅಲ್ಲೇ ಸಿಲುಕಿಕೊಂಡಿದ್ದಾರೆ. ಕೋಟ್ಯಂತರ ಮಂದಿ ಅವರು ಸುರಕ್ಷಿತವಾಗಿ ಬರಲಿ ಅಂತ ಕಾಯ್ತಾ ಇದ್ದಾರೆ. ಇದೀಗ ಈ ಘಳಿಗೆ ಹತ್ತಿರ ಬಂದಿದೆ. ಸುನಿತಾ ವಿಲಿಯಮ್ಸ್ ಅವರು ಇದೀಗ ಮರಳಿ ಭೂಮಿಗೆ ಬರಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ದರ್ಶನ್‌ ಗೆ ಮತ್ತೆ ನಿರಾಸೆ –  ಜಾಮೀನು ಅರ್ಜಿ ವಿಚಾರಣೆ ಅ.4ಕ್ಕೆ ಮುಂದೂಡಿಕೆ

ಹೌದು, ಭಾರತೀಯ ಮೂಲದ ಸುನೀತಾ ವಿಲಿಯಮ್ಸ್​ ಮತ್ತು ಬುಚ್​ ವಿಲ್ಮೋರ್​ ಬಾಹ್ಯಾಕಾಶದಲ್ಲಿ ಸಿಲುಕಿ 3 ತಿಂಗಳುಗಳು ಕಳೆದಿವೆ. ಹೀಲಿಯಂ ಸೋರಿಕೆ ಸಮಸ್ಯೆಯಿಂದ ನಭದಲ್ಲೇ ಬಾಕಿಯಾಗಿದ್ದರು. ಆದರೆ ಇವರನ್ನು ಕರೆತರಲು ಸ್ಪೇಸ್​ ಎಕ್ಸ್​ನ ಕ್ರೂ-9 ‘ಡ್ರ್ಯಾಗನ್​ ’ ನೌಕೆಯನ್ನು ಶನಿವಾರದಂದು ಉಡಾವಣೆ ಮಾಡಲಾಗಿದೆ. ನಾಸಾ ಸುನೀತಾ ವಿಲಿಯಮ್ಸ್​ ಮತ್ತು ಬುಚ್​ ವಿಲ್ಮೋರ್​ ಇರುವ ನೌಕೆಯಲ್ಲಿನ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲು ಮತ್ತು ಅವರಿಬ್ಬರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರಲು ಗಗನಯಾತ್ರಿ ನಿಕ್​ ಹೇಗ್​ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್​​ ಗೊರ್ಬುನೊವ್​​ ಅವರನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ. ಇದೀಗ ಸುನಿತಾ ವಿಲಿಯಮ್ಸ್ ಅವರನ್ನ ಈಗ ಭೂಮಿಗೆ ಕರೆದುಕೊಂಡು ಬರಲು ‘ಸ್ಪೇಸ್ ಎಕ್ಸ್’ ಆಕಾಶಕ್ಕೆ ತಲುಪಿದೆ.

ಸದ್ಯ ನಭಕ್ಕೆ ‘ಡ್ರ್ಯಾಗನ್​’ ನೌಕೆ ತಲುಪಿದ್ದು, ವಿಲಿಯಮ್ಸ್​ ಮತ್ತು ವಿಲ್ಮೋರ್​ ಅವರನ್ನು ಭೇಟಿ ಮಾಡಿದ್ದಾರೆ. ಅತ್ತ ಅಲೆಕ್ಸಾಂಡರ್ ಮತ್ತು ನಿಕ್​ ಕಂಡು ಇಬ್ಬರು ಖುಷಿಯಲ್ಲಿ ಪ್ರೀತಿಯ ಹಗ್​​ ಮಾಡಿ ಸ್ವಾಗತಿಸಿದ್ದಾರೆ.

ಡ್ರ್ಯಾಗನ್​​ ವ್ಯೋಮ ನೌಕೆ ಕೇಪ್​​ ಕ್ಯಾನವೆರಲ್​​ ಸ್ಪೇಸ್​​ ಪೋರ್ಸ್​​ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಸದ್ಯ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ಮುಂದಿನ ವರ್ಷ ಫೆಬ್ರವರಿ ತಿಂಗಳಿನಲ್ಲಿ ಸುನಿತಾ ವಿಲಿಯಮ್ಸ್​ ಮತ್ತು ಉಳಿದ ಮೂವರು ಹಿಂತಿರುಗಲಿದ್ದಾರೆ. ಕ್ರೂ-8 ಮಿಷನ್​​ನಲ್ಲಿರುವ ನಾಲ್ವರು ಗಗನಯಾತ್ರಿಗಳು ಅಕ್ಟೋಬರ್​ ಮೊದಲ ವಾರ ಭೂಮಿಗೆ ಹಿಂತಿರುಗಲಿದ್ದಾರೆ.

Shwetha M

Leave a Reply

Your email address will not be published. Required fields are marked *