ಬಾಹ್ಯಾಕಾಶದಲ್ಲಿ ಅರಳಿತು ಸುಂದರ ಸುಮ – ನಾಸಾ ಬಿಡುಗಡೆಗೊಳಿಸಿದ ಹೂವಿನ ಫೋಟೋಗೆ ಎಲ್ಲರೂ ಬೆರಗು

ಬಾಹ್ಯಾಕಾಶದಲ್ಲಿ ಅರಳಿತು ಸುಂದರ ಸುಮ – ನಾಸಾ ಬಿಡುಗಡೆಗೊಳಿಸಿದ ಹೂವಿನ ಫೋಟೋಗೆ ಎಲ್ಲರೂ ಬೆರಗು

ಎದುರಿಸಿದ ಸವಾಲುಗಳೆಷ್ಟೋ.. ಬೆಳಕಿಗೆ ಬಂದ ಅಚ್ಚರಿಗಳೆಷ್ಟೋ.. ಇದೇ ಕಾರಣಕ್ಕೆ ಬಾಹ್ಯಾಕಾಶ ಮತ್ತು ಬ್ರಹ್ಮಾಂಡವನ್ನ ಕುತೂಹಲಗಳ ಗುಚ್ಛ ಎಂದೇ ಕರೆಯಲಾಗುತ್ತೆ. ಯಾಕಂದ್ರೆ ಬಾಹ್ಯಾಕಾಶದ ಸಂಶೋಧನೆಯಿಂದಾಗಿ ಆಗಾಗ ಅನೇಕ ಕೌತುಕಗಳು ಎದುರಾಗುತ್ತಿರುತ್ತವೆ. ಈಗಾಗಲೇ ವಿಜ್ಞಾನಿಗಳು ಈ ವಿಚಾರವಾಗಿ ಹತ್ತಾರು ಸಂಶೋಧನೆಗಳನ್ನ ಮಾಡಿದ್ದು, ಅಲ್ಲಿ ತರಕಾರಿ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಹೂವೊಂದು ಅರಳಿದ್ದು ಎಲ್ಲರ ಕೌತುಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಮಾನವಸಹಿತ ಗಗನಯಾನಕ್ಕೆ ಇಸ್ರೋ ಸಿದ್ಧತೆ – ಬಾಹ್ಯಾಕಾಶ ಯಾತ್ರೆಗೆ ಆಹಾರ ರೀತಿ ಹೇಗಿದೆ?

ಬಾಹ್ಯಾಕಾಶ ಸಂಶೋಧಕರು, ವಿಜ್ಞಾನಿಗಳು ಒಂದಿಲ್ಲೊಂದು ಅನ್ವೇಷಣೆಗಳನ್ನ ಮಾಡುತ್ತಲೇ ಇರುತ್ತಾರೆ.‌ ನಾಸಾ ಬಿಡುಗಡೆ ಮಾಡುವ ಚಿತ್ರಗಳೇ‌ ಇದಕ್ಕೆ ಸಾಕ್ಷಿ. ಈ ಹೂವಿನ ಹೆಸರು ಜಿನ್ನಿಯಾ. ತರಕಾರಿಗಳನ್ನು ಬೆಳೆಯುವ ಜಾಗದಲ್ಲಿ ಇದು ಅರಳಿ ನಿಂತಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಬಾಹ್ಯಾಕಾಶದಲ್ಲಿ ಸಸ್ಯಗಳನ್ನು ಬೆಳೆಯುವ ಕುರಿತು 1970ರಿಂದಲೂ ವಿಜ್ಞಾನಿಗಳು ಸಂಶೋಧನೆ ನಡೆಸುತ್ತ ಬಂದಿದ್ದಾರೆ. ಆದರೆ ಗಗನಯಾತ್ರಿ ಕೆಜೆಲ್ ಲಿಂಡ್ ಗ್ರೇನ್ 2015ರಲ್ಲಿ ನಿರ್ದಿಷ್ಟವಾದ ಪ್ರಯೋಗದಲ್ಲಿ ತೊಡಗಿಕೊಂಡರು. ಅಲ್ಲದೆ, ಈ ಪ್ರಯೋಗಗಳೆಲ್ಲ ಪ್ರದರ್ಶನಕ್ಕಲ್ಲ, ಬಾಹ್ಯಾಕಾಶದಲ್ಲಿ ಸಸ್ಯಗಳು ಹೇಗೆ ಅಭಿವೃದ್ಧಿಗೊಳ್ಳುತ್ತವೆ ಎನ್ನುವುದನ್ನು ಅಧ್ಯಯನ ಮಾಡುತ್ತಾ ಹೋದಂತೆ ಭೂಮಿಯ ಮೇಲೆ ಬೆಳೆಗಳನ್ನು ಹೇಗೆ ಬೆಳೆಯಬಹುದು ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಇದು ಸಹಕಾರಿಯಾಗುತ್ತದೆ ಎನ್ನುವುದು ವಿಜ್ಞಾನಿಗಳ ಮಾತು. ಈಗಾಗಲೇ ನಾಸಾ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಲೆಟ್ಯೂಸ್, ಟೊಮ್ಯಾಟೊ, ಮೆಣಸಿನಕಾಯಿಗಳನ್ನು ಬೆಳೆದಿದ್ದಾರೆ. ಇತರೇ ತರಕಾರಿಗಳೊಂದಿಗೆ ಮುಂದಿನ ದಿನಗಳಲ್ಲಿ ಇನ್ನೂ ಸಾಕಷ್ಟು ಸಸ್ಯಗಳು ಫಲ ಕೊಡಲಿವೆ.

suddiyaana