ನಾಸಾ ಕಚೇರಿಯಲ್ಲಿ ಕರೆಂಟ್ ಕಟ್! – ಗಗನಯಾತ್ರಿಗಳ ಜೊತೆ ಸಂಪರ್ಕ ಕಳೆದುಕೊಂಡ ವಿಜ್ಞಾನಿಗಳು!
ಮನೆಗಳೆಲ್ಲೆಲ್ಲಾ ಕರೆಂಟ್ ಹೋದಾಗ ಏನಾದರೂ ಸಣ್ಣ ಪುಟ್ಟ ಎಡವಟ್ಟುಗಳು ಆಗುತ್ತಾ ಇರುತ್ತದೆ. ಆದೆರೆ ಬಾಹ್ಯಾಕಾಶ ಸಂಸ್ಥೆಯ ಕಂಟ್ರೋಲ್ ರೂಮ್ನಲ್ಲೇ ಪವರ್ ಕಟ್ ಆದರೆ ಏನಾಗಬಹುದು? ದೊಡ್ಡ ಸಮಸ್ಯೆಯೇ ಉದ್ಭವವಾಗಬಹುದು. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಕಚೇರಿಯಲ್ಲಿ ಬುಧವಾರ ಕರೆಂಟ್ ಹೋಗಿದೆ. ಇದ್ರಿಂದಾಗಿ ನಾಸಾ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿರುವ ಅಂತಾರಾಷ್ಟ್ರೀಯ ನಿಲ್ದಾಣದ ಜೊತೆಗಿನ ಸಂಪರ್ಕವನ್ನೇ ಕಳೆದುಕೊಂಡಿದ್ದಾರೆ!
ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಅರಳಿತು ಸುಂದರ ಸುಮ – ನಾಸಾ ಬಿಡುಗಡೆಗೊಳಿಸಿದ ಹೂವಿನ ಫೋಟೋಗೆ ಎಲ್ಲರೂ ಬೆರಗು
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಕಚೇರಿಯಲ್ಲಿ ಬುಧವಾರ ಬೆಳಗ್ಗೆ 9 ಗಂಟೆ 9 ನಿಮಿಷದ ಸುಮಾರಿಗೆ ಪವರ್ ಕಟ್ ಆಗಿದೆ. ಇದರಿಂದಾಗಿ ನಾಸಾ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿರುವ ಅಂತಾರಾಷ್ಟ್ರೀಯ ನಿಲ್ದಾಣದ ಜೊತೆಗಿನ ಸಂಪರ್ಕವನ್ನೇ ಕಳೆದುಕೊಂಡಿದ್ದಾರೆ. ಹೀಗಾಗಿ ಬಾಹ್ಯಾಕಾಶ ನಿಲ್ದಾಣದಲ್ಲಿ ಕೆಲಸ ಮಾಡುತ್ತಿರುವ ಗಗನಯಾತ್ರಿಗಳಿಗೆ ಯಾವುದೇ ಸಂದೇಶ ಕಳುಹಿಸಲಾಗದೆ ಪರದಾಡಿದ್ದಾರೆ. ಬಳಿಕ ಅಮೆರಿಕ ವಿಜ್ಞಾನಿಗಳು ರಷ್ಯಾ ಬಾಹ್ಯಾಕಾಶ ಸಂಸ್ಥೆಯ ಮೊರೆ ಹೋಗಿದ್ದಾರೆ. ಕರೆಂಟ್ ಕಟ್ ಆಗಿ 20 ನಿಮಿಷಗಳ ಬಳಿಕ ರಷ್ಯಾ ಬಾಹ್ಯಾಕಾಶ ಸಂಸ್ಥೆಯ ಕಮ್ಯುನಿಕೇಶನ್ ಸಿಸ್ಟಮ್ ಮೂಲಕ ತಮ್ಮ ಗಗನಾಯಾತ್ರಿಗಳಿಗೆ ಅಮೆರಿಕ ವಿಜ್ಞಾನಿಗಳು ವಾಯ್ಸ್ ಮೆಸೇಜ್ ಕಳುಹಿಸಿದ್ದಾರೆ.
ಇಸ್ರೋ ವಿಜ್ಞಾನಿಗಳು ಸುಮಾರು ಒಂದೂವರೆ ಗಂಟೆಗಳ ನಂತರ ಬ್ಯಾಕ್ಅಪ್ ಕಂಟ್ರೋಲ್ ಸಿಸ್ಟಮ್ನ ವ್ಯವಸ್ಥೆ ಮಾಡಿಕೊಂಡು ನಾಸಾ ವಿಜ್ಞಾನಿಗಳು ಮತ್ತೆ ಗಗನಯಾತ್ರಿಗಳನ್ನು ಸಂಪರ್ಕಿಸಿದ್ದಾರೆ. ಇದೇ ಮೊದಲ ಬಾರಿಗೆ ಬಾಹ್ಯಾಕಾಶ ಸಂಸ್ಥೆಯೊಂದು ಬ್ಯಾಕ್ಅಪ್ ಸಿಸ್ಟಮ್ ಮೂಲಕ ಕೆಲಸ ಮಾಡಿದೆ. ಅಮೆರಿಕದ ಹಾಸ್ಟನ್ನಲ್ಲಿ ನಾಸಾದ ಬ್ಯಾಹ್ಯಾಕಾಶ ಕಂಟ್ರೋಲ್ ರೂಮ್ ಇದ್ದು, ಅಲ್ಲಿಂದ ಕೆಲ ಮೈಲಿ ದೂರದಲ್ಲಿ ಬ್ಯಾಕಪ್ ಸಿಸ್ಟಮ್ನ್ನ ನಾಸಾ ಅಳವಡಿಸಿಕೊಂಡಿದೆ. ಅಂದಹಾಗೆ ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳು ಭೂಮಿಯಲ್ಲಿರುವ ಕಂಟ್ರೋಲ್ ರೂಮ್ನಿಂದ ವಿಜ್ಞಾನಿಗಳು ನೀಡುವ ನಿರ್ದೇಶನದಂತೆಯೇ ಕೆಲಸ ಮಾಡುತ್ತಿರುತ್ತಾರೆ.