ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿರುವ ಮೊಸಾಯಿಕ್‌ನ ಚಿತ್ರ ಸೆರೆ ಹಿಡಿದ ನಾಸಾ!

ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿರುವ ಮೊಸಾಯಿಕ್‌ನ ಚಿತ್ರ ಸೆರೆ ಹಿಡಿದ ನಾಸಾ!

ಚಂದ್ರನ ಮೇಲೆ ಅನೇಕ ರಾಷ್ಟ್ರಗಳ ವಿಜ್ಞಾನಿಗಳು ನಿರಂತರವಾಗಿ ಅಧ್ಯಯನ ನಡೆಸುತ್ತಲೇ ಇದ್ದಾರೆ. ಮಾನವನ ವಾಸಕ್ಕೆ ಯೋಗ್ಯವಾದ ವಾತಾವರಣವಿದೆಯೇ ಎಂಬುವುದರ ಕುರಿತು ಸಂಶೋಧನೆ ನಡೆಯುತ್ತಲೇ ಇದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡ ಚಂದ್ರನ ಮೇಲೆ ಅನೇಕ ಅಧ್ಯಯನಗಳನ್ನು ಕೈಗೊಳ್ಳುತ್ತಲೇ ಇದೆ. ಇದೀಗ ನಾಸಾದ ಎರಡು ವಿಭಿನ್ನ ಕ್ಯಾಮೆರಾಗಳು, ಚಂದ್ರನ ದಕ್ಷಿಣ ಧ್ರುವದ ಚಿತ್ರವನ್ನು ಸೆರೆಹಿಡಿದಿದೆ. ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿರುವ ಮೊಸಾಯಿಕ್‌ನ ಚಿತ್ರ ಸೆರೆಯಾಗಿದೆ.

ಇದನ್ನೂ ಓದಿ: ಡ್ರೈವರ್‌ ಇಲ್ಲದೇ ಓಡುತ್ತೆ ನಮ್ಮ ಮೆಟ್ರೋ! – ಹೊಸ ಸೇವೆ ಶೀಘ್ರದಲ್ಲೇ ಆರಂಭ!

ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿರುವ ಮೊಸಾಯಿಕ್‌ಪ್ರದೇಶವನ್ನು ಮಾನವ ಇದುವರೆಗೂ ಅನ್ವೇಷಿಸಿಲ್ಲ. ಅಲ್ಲದೇ ಈ ಪ್ರದೇಶದ ಕುರಿತು ವಿಜ್ಞಾನಿಗಳು ಹೆಚ್ಚಿನ ಕುತೂಹಲವನ್ನು ಹೊಂದಿದ್ದು, ಇಲ್ಲಿ ಮಂಜುಗಡ್ಡೆಯ ನಿಕ್ಷೇಪಗಳು ಇರುವ ಸಾಧ್ಯತೆಗಳನ್ನು ಅಂದಾಜಿಸಿದ್ದಾರೆ.

ಚಂದ್ರನ ಫೋಟೋ ಬಿಡುಗಡೆಗೊಳಿಸಿರುವ ನಾಸಾ, “ಮೂನ್‌ಲೈಟ್‌ ಸೊನಾಟಾ. ನೂತನ ಚಿತ್ರವು, ಚಂದ್ರನ ಸುತ್ತ ಸುತ್ತುತ್ತಿರುವ ಎರಡು ಕ್ಯಾಮೆರಾಗಳ ಶಕ್ತಿಯನ್ನು ಅನಾವರಣಗೊಳಿಸುತ್ತದೆ. ಇವು ಒಟ್ಟಿಗೆ ಕಾರ್ಯ ನಿರ್ವಹಿಸುತ್ತಿವೆ. ನಾಸಾದ ಲೂನಾರ್‌ ರೆಕಾಗ್ನೆ„ಸನ್ಸ್‌ ಆರ್ಬಿಟರ್‌ ಕ್ಯಾಮೆರಾ(ಎಲ್‌ಆರ್‌ಒಸಿ) ಮತ್ತು ಶಾಡೊಕ್ಯಾಮ್‌ ಚಂದ್ರನ ಈ ಚಿತ್ರಗಳನ್ನು ಸೆರೆಹಿಡಿದಿವೆ’ ಎಂದು ತಿಳಿಸಿದೆ.

Shwetha M