ಭೂಕಂಪದ ಮುನ್ಸೂಚನೆ ನೀಡುವ ಉಪಗ್ರಹ ರೆಡಿ – ಯಾವಾಗ ಉಡಾವಣೆ.. ಹೇಗಿದೆ ಸಿದ್ಧತೆ..!? 

ಭೂಕಂಪದ ಮುನ್ಸೂಚನೆ ನೀಡುವ ಉಪಗ್ರಹ ರೆಡಿ – ಯಾವಾಗ ಉಡಾವಣೆ.. ಹೇಗಿದೆ ಸಿದ್ಧತೆ..!? 

ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿರೋ ಭಯಾನಕ ಭೂಕಂಪದಿಂದ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನ ದಿಕ್ಕಿಲ್ಲದೆ ಬೀದಿಪಾಲಾಗಿದ್ದಾರೆ. ಪ್ರಕೃತಿ ವಿಕೋಪಕ್ಕೆ ಇಡೀ ವಿಶ್ವವೇ ಆತಂಕಗೊಂಡಿದೆ. ಇಂಥಾ ಟೈಮಲ್ಲೇ ವಿಜ್ಞಾನಲೋಕದಲ್ಲಿನ ಬೆಳವಣಿಗೆಯೊಂದು ಭರವಸೆ ಮೂಡಿಸಿದೆ.

ಭೂಕಂಪ, ಭೂಕುಸಿತ ಸೇರಿದಂತೆ ಭೂಮಿಯಲ್ಲಿ ನಡೆಯುವ ದುರಂತಗಳು ಮತ್ತು ಸಣ್ಣ ಸಣ್ಣ ಬದಲಾವಣೆಗಳ ಬಗ್ಗೆ ಪತ್ತೆ ಹಚ್ಚುವ ಕುರಿತಾಗಿ ಉಪಗ್ರಹವೊಂದು ರೆಡಿಯಾಗುತ್ತಿದೆ. ಇಸ್ರೋ ಮತ್ತು ನಾಸಾ ಜಂಟಿಯಾಗಿ ಭೂ ವೀಕ್ಷಣಾ ಉಪಗ್ರಹ ನಿಸಾರ್ (NASA-ISRO Synthetic Aperture Radar) ಅಭಿವೃದ್ಧಿಪಡಿಸುತ್ತಿದ್ದು 2024 ರ ಜನವರಿ ತಿಂಗಳಲ್ಲಿ ಉಡಾವಣೆ ಮಾಡುವ ಸಿದ್ಧತೆ ನಡೆಯುತ್ತಿದೆ. ಪ್ರತಿ 12 ದಿನಕ್ಕೊಮ್ಮೆ ಭೂಮಿಯ ಚಿತ್ರವನ್ನ ಸೆರೆ ಹಿಡಿಯುವ ನಿಸಾರ್ ಭೂಕಂಪ, ಭೂ ಕುಸಿತ ಸೇರಿದಂತೆ ಭೂಮಿಯಲ್ಲಿ ನಡೆಯುವ ಯಾವುದೇ ಬದಲಾವಣೆಗಳನ್ನ ಕುರಿತು ಮುನ್ಸೂಚನೆ ನೀಡಲಿದೆ.

ಇದನ್ನೂ ಓದಿ : ಲೀಟರ್ ಹಾಲಿಗೆ ₹200, ಕೆಜಿ ಕೋಳಿ ಮಾಂಸಕ್ಕೆ ₹1,100 – ಪಾಪಿ ಪಾಕಿಸ್ತಾನದ ಸ್ಥಿತಿ ಅಧೋಗತಿ..!

ಫೆಬ್ರವರಿ 03 ರಂದು ನಾಸಾದ ಜೆಟ್ ಪ್ರೊಪ್ಯುಲಷನ್ ಲ್ಯಾಬೊರೇಟರಿಗೆ ಭೇಟಿ ನೀಡಿದ್ದ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ನಿಸಾರ್ ಉಪಗ್ರಹ ತಯಾರಿಕೆಯ ಅಂತಿಮ ಸಿದ್ಧತೆಯನ್ನ ಪರಶೀಲಿಸಿದ್ದರು. ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ತಲುಪಲಿರುವ ನಿಸಾರ್ ಉಪಗ್ರಹ ಜಿಎಸ್‌ಎಲ್‌ವಿ (GSLV) ರಾಕೆಟ್‌ ಬಳಸಿ ಆಂಧ್ರಪ್ರದೇಶದ ಶ್ರೀಹರಿಕೋಟದಿಂದ 2024 ರ ಆರಂಭದಲ್ಲಿ ಉಡಾವಣೆಯಾಗಲಿದೆ.

ಏನಿದು ನಿಸಾರ್ ಉಪಗ್ರಹ?

2014 ರಲ್ಲಿ ನಡೆದ ಒಪ್ಪಂದದಂತೆ ನಾಸಾ ಮತ್ತೂ ಇಸ್ರೋ ಜಂಟಿಯಾಗಿ ಸಿದ್ಧಗೊಳಿಸುತ್ತಿರುವ ನಿಸಾರ್ ಒಂದು ಭೂಸರ್ವೇಕ್ಷಣಾ ಉಪಗ್ರಹವಾಗಿದ್ದು, L ಮತ್ತು S ಡ್ಯುಯಲ್ ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರಾಡಾರ್ (SAR) ಅನ್ನು ಒಯ್ಯುತ್ತದೆ. ಅದರ ಮೂರು ವರ್ಷಗಳ ಕಾರ್ಯಾಚರಣೆಯ ಅವಧಿಯಲ್ಲಿ ಪ್ರತಿ 12 ದಿನಗಳಿಗೊಮ್ಮೆ ಇಡೀ ಭೂ ಮಂಡಲವನ್ನ ವೀಕ್ಷಿಸುತ್ತದೆ. ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಹಗಲು ರಾತ್ರಿ ಅವಲೋಕನಗಳನ್ನು ಮಾಡುತ್ತದೆ. ಭೂಮಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಪಾಕೃತಿಕ ವಿಕೋಪಗಳು, ಮಂಜುಗಡ್ಡೆಯ ಕುಸಿತ ಮತ್ತು ಭೂಕಂಪಗಳು, ಸುನಾಮಿಗಳು, ಜ್ವಾಲಾಮುಖಿಗಳು ಮತ್ತು ಭೂಕುಸಿತಗಳಂತಹ ನೈಸರ್ಗಿಕ ಅಪಾಯಗಳನ್ನ ಪತ್ತೆ ಹಚ್ಚುವಲ್ಲಿ ಈ ಉಪಗ್ರಹವು ಸಂಶೋಧಕರಿಗೆ ಸಹಾಯ ಮಾಡುತ್ತದೆ. ಭೂಕಂಪ,  ಭೂಕುಸಿತಗಳು ಮತ್ತು ಜ್ವಾಲಾಮುಖಿ ಸ್ಫೋಟಗಳ ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳುವ ಮೂಲಕ ದೇಶಗಳಿಗೆ ನೈಸರ್ಗಿಕ ಅಪಾಯಗಳಿಗೆ ಸಿದ್ಧವಾಗಲು ಸಹಾಯ ಮಾಡುತ್ತದೆ.

 

suddiyaana