ಕಾರು, ಬೈಕ್ ಆಯ್ತು ಈಗ ಎಲೆಕ್ಟ್ರಿಕ್ ವಿಮಾನ! – ಯಾವಾಗಿನಿಂದ ಹಾರಾಟ

ಕಾರು, ಬೈಕ್ ಆಯ್ತು ಈಗ ಎಲೆಕ್ಟ್ರಿಕ್ ವಿಮಾನ! – ಯಾವಾಗಿನಿಂದ ಹಾರಾಟ

ಈಗಂತೂ ಇಂಧನ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೆಚ್ಚುತ್ತಿರುವ ತೈಲದ ಬೆಲೆಯಿಂದಾಗಿ ವಾಹನಗಳು ನಮಗೆ ಬೇಕೆ ಅನ್ನೋ ಪ್ರಶ್ನೆ ಮೂಡುತ್ತಿದೆ. ಹಾಗಾಗಿ ಜನರು ಎಲೆಕ್ಷ್ರಿಕ್ ವಾಹನಗಳತ್ತ ಮೊರೆ ಹೋಗುತ್ತಿದ್ದಾರೆ. ಈಗಾಗಲೇ ಎಲೆಕ್ಟ್ರಿಕ್‌ ಸ್ಕೂಟರ್‌, ಬೈಕ್‌, ಕಾರು ಮತ್ತು ಬಸ್‌ ರಸ್ತೆಗಳಲ್ಲಿ ಓಡಾಡುತ್ತಿವೆ. ಅಲ್ಲದೇ ಎಲೆಕ್ಷ್ರಿಕ್ ವಾಹನಗಳಿಗೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಎಲೆಕ್ಟ್ರಿಕ್‌ ವಿಮಾನ ಹಾರಾಟ ಆರಂಭಿಸಲು ನಾಸಾ ಅಣಿಯಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ವರ್ಷವೇ ನಾಸಾ ಅಭಿವೃದ್ಧಿಪಡಿಸಿರುವ ಪ್ರಾಯೋಗಿಕ ಎಲೆಕ್ಟ್ರಿಕ್‌ ವಿಮಾನ ಎಕ್ಸ್‌-57 ತನ್ನ ಮೊದಲ ಹಾರಾಟ ಮಾಡಲಿದೆ.

ಇದನ್ನೂ ಓದಿ: ಮೆಸೇಜ್ ಕಳುಹಿಸುವಾಗ ಹುಷಾರ್..! – ಭಾರತದಲ್ಲಿ 36 ಲಕ್ಷಕ್ಕೂ ಅಧಿಕ ವಾಟ್ಸ್ಆ್ಯಪ್ ಖಾತೆ ಬ್ಯಾನ್

ಅಮೆರಿಕದ ನಾಸಾ ವಿಜ್ಞಾನಿಗಳು ಬ್ಯಾಟರಿ ಚಾಲಿತ ವಿಮಾನ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಎಕ್ಸ್‌-57 ವಿಮಾನವು ತನ್ನ ಪ್ರೊಪೆಲ್ಲರ್‌ಗಳಿಗೆ ವಿದ್ಯುತ್‌ ಮೋಟರ್‌ಗಳನ್ನು ಚಲಾಯಿಸಲು ಲಿಥಿಯಂ ಬ್ಯಾಟರಿಗಳನ್ನು ಬಳಸುತ್ತದೆ. ಆದರೆ ಇದು ಪ್ರಸ್ತುತ ಬಳಸುತ್ತಿರುವ ವೈಮಾನಿಕ ಇಂಧನಕ್ಕೆ ಹೋಲಿಸಿದರೆ 50 ಪಟ್ಟು ಕಡಿಮೆ ಇಂಧನವು ಬ್ಯಾಟರಿಗಳಿಂದ ಉತ್ಪತ್ತಿಯಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಎಲೆಕ್ಟ್ರಿಕ್ ವಿಮಾನ ಸಂಪೂರ್ಣ ವಿದ್ಯುತ್ ಚಾಲಿತವಾಗಿದ್ದು, ಇದರ ರೆಕ್ಕೆಗಳ ಉದ್ದಕ್ಕೂ ಪ್ರಭಾವಶಾಲಿ 14 ಪ್ರೊಪೆಲ್ಲರ್‌ಗಳನ್ನು ಎಕ್ಸ್‌-57 ಅಳವಡಿಸಲಾಗಿದೆ. ಇದು ನಾಲ್ಕು ಆಸನಗಳ, ಇಟಾಲಿಯನ್-ನಿರ್ಮಿತ ಟೆಕ್ನಾಮ್ P2006T ವಿಮಾನವಾಗಿದೆ. ಅಲ್ಲದೇ ಸಣ್ಣ ಮೋಟಾರ್ ಹಾಗೂ ಬ್ಯಾಟರಿ ಮೂಲಕ ಈ ಹಾರಾಟ ನಡೆಸಲಿದೆ ಅಂತಾ ತಜ್ಞರು ತಿಳಿಸಿದ್ದಾರೆ.

suddiyaana