ಈ ದೇವಸ್ಥಾನದಲ್ಲಿ ಚಿನ್ನದ ಭಂಡಾರವೇ ಇದೆ.. -1400 ವರ್ಷಗಳಷ್ಟು ಹಳೆಯದಾದ ಈ ದೇವಾಲಯ ಎಲ್ಲಿದೆ ಗೊತ್ತಾ?
ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗಬೇಕಂದ್ರೆ ಅನೇಕರು ದೇವಸ್ಥಾನಕ್ಕೆ ತೆರಳುತ್ತಾರೆ. ಭಗವಂತನಲ್ಲಿ ತಮ್ಮ ಕಷ್ಟಗಳನ್ನು ಪರಿಹರಿಸುವಂತೆ ಕೇಳುತ್ತಾರೆ. ಭಾರತದಲ್ಲಿ ಲೆಕ್ಕಕ್ಕೆ ಸಿಗದಷ್ಟು ದೇವಾಲಯಗಳು ಇವೆ. ಪ್ರತಿ ಹಳ್ಳಿಗಳಲ್ಲಿಯೂ ಒಂದಾದರೂ ದೇವಾಲಯಗಳನ್ನು ಕಾಣಬಹುದು. ಬಹುಶಃ ಅದಕ್ಕಾಗಿಯೇ ಕೆಲವರು ಈ ದೇಶವನ್ನು ದೇವಾಲಯಗಳ ದೇಶ ಎಂದು ಕರೆಯುತ್ತಾರೆ. ಕೆಲವು ದೇಗುಲಗಳು ಅಲ್ಲಿನ ಇತಿಹಾಸದಿಂದಾಗಿ ತುಂಬಾ ಫೇಮಸ್ ಹೊಂದಿದ್ದರೆ, ಇನ್ನೂ ಕೆಲವಯ ದೇಗುಲಗಳು ಊಹಿಸಲೂ ಸಾಧ್ಯವಾಗದಷ್ಟು ಸಂಪತ್ತನ್ನು ಹೊಂದಿರುತ್ತವೆ. ಆದರೆ, ವಿದೇಶಗಳಲ್ಲಿ ಹಿಂದೂ ದೇಗುಲಗಳು ತುಂಬಾ ಕಡಿಮೆ. ಇದ್ರೂ ಕೂಡ ಸಣ್ಣ ದೇವಸ್ಥಾನಗಳನ್ನು ಕಾಣಬಹುದಾಗಿದೆ. ಇಂತಹ ದೇವಸ್ಥಾನಗಳಿಗೆ ಭಾರತೀಯರು ಹೆಚ್ಚಿನ ಪ್ರಮಾಣದಲ್ಲಿ ಭೇಟಿಯಾಗುತ್ತಾರೆ. ಆದ್ರೆ ಇಲ್ಲೊಂದು ದೇಗುಲವಿದೆ. ಈ ದೇಗುಲ ವಿದೇಶದಲ್ಲಿದೆ. ಇದು ಹೆಚ್ಚು ಸಂಪತ್ತು ಹೊಂದಿರುವ ದೇವಸ್ಥಾನ ಎಂಬ ಖ್ಯಾತಿ ಪಡೆದಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ಭಕ್ತಿಯ ಪರ್ವಕಾಲ! – 6 ವರ್ಷಗಳಲ್ಲಿ 500 ದೇಗುಲಗಳ ನಿರ್ಮಾಣ!
ಸಾಮಾನ್ಯವಾಗಿ ಭಾರತದಲ್ಲಿ ದೇಗುಲಗಳು ಹೆಚ್ಚು ಸಂಪತ್ತಿನಿಂದ ಕೂಡಿರುತ್ತವೆ. ಹಲವು ದೇಗುಲಗಳು ಚಿನ್ನದ ರಾಶಿ ಹೊಂದಿರುತ್ತವೆ. ಆದರೆ ನಾರ್ವೆಯ ಈ ದೇವಾಲಯ ಸುಮಾರು 1400 ವರ್ಷಗಳಷ್ಟು ಹಳೆಯದಾಗಿದ್ದು, ಇಲ್ಲಿ ಅಪಾರ ಪ್ರಮಾಣದಲ್ಲಿ ಚಿನ್ನದ ಸಂಪತ್ತಿದೆ ಎಂದು ಹೇಳಲಾಗುತ್ತದೆ.
ಇದು ಯಾವ ದೇವರ ಗುಡಿ?
ನಾರ್ವೆಯಲ್ಲಿರುವ ಈ ಹಳೆಯ ದೇವಾಲಯದಲ್ಲಿ ನಾರ್ಸ್ ದೇವತೆಗಳನ್ನು ಪೂಜಿಸಲಾಗುತ್ತಿದೆ. ಪುರಾತತ್ವಶಾಸ್ತ್ರಜ್ಞರು ಈ ದೇವಾಲಯದ ಒಳಗೆ ಕೆಲವು ಶಿಲ್ಪಗಳನ್ನು ಸಹ ಕಂಡುಕೊಂಡಿದ್ದಾರೆ. ಇಲ್ಲಿರುವ ಎಲ್ಲಾ ವಿಗ್ರಹಗಳು ಚಿನ್ನದಿಂದ ಮಾಡಲ್ಪಟ್ಟಿದೆ. ಆದರೆ ಈ ಚೌಕಾಕಾರದ ಶಿಲ್ಪಗಳು ಕಾಗದದಷ್ಟು ತೆಳುವಾಗಿರುತ್ತವೆ. ಈ ಪ್ರತಿಮೆಗಳು ನಾರ್ಸ್ ದೇವರು ಫ್ರೊಯ್ ಮತ್ತು ದೇವತೆ ಗೆರ್ಡ್‌ನ ಚಿತ್ರಗಳನ್ನು ಹೊಂದಿವೆ ಎಂದು ತಜ್ಞರು ಹೇಳುತ್ತಾರೆ.
ಎಷ್ಟು ಚಿನ್ನ ಸಿಕ್ಕಿದೆ?
ಓಸ್ಲೋ ವಿಶ್ವವಿದ್ಯಾನಿಲಯದ ವರದಿಯ ಪ್ರಕಾರ, ಈ ಶಿಲ್ಪಗಳು ಸುಮಾರು 550 AD ಯಲ್ಲಿ ಪ್ರಾರಂಭವಾದ ಮೆರೋವಿಂಗಿಯನ್ ಅವಧಿಗೆ ಸೇರಿವೆ. ಈ ಮೆರೋವಿಂಗಿಯನ್ ಅವಧಿಯು ವೈಕಿಂಗ್ ಯುಗದವರೆಗೂ ಮುಂದುವರೆಯಿತು. ವೈಕಿಂಗ್ ಜನರನ್ನು ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ. ಅವರು ತಮ್ಮ ನಾಗರಿಕತೆ ಮತ್ತು ಧರ್ಮವನ್ನು ಬಹಳ ದೂರದವರೆಗೆ ಹರಡಿದರು. ಈ ದೇವಾಲಯದ ಒಳಗಿನ ನೆಲಮಾಳಿಗೆಯು ಅಪಾರವಾದ ಚಿನ್ನದಿಂದ ತುಂಬಿದೆ ಎಂದು ಇಲ್ಲಿನ ಜನರು ನಂಬುತ್ತಾರೆ. ಆದರೆ, ಇದುವರೆಗೆ ಎಷ್ಟು ಪ್ರಮಾಣದ ಚಿನ್ನ ಇದೆ ಎಂದು ಹೇಳಲಾಗುತ್ತಿಲ್ಲ..