ಮೀನಾಕ್ಷಿ ಮೀನಾಕ್ಷಿ ಎಂಥಾ ಮಗನನ್ನು ಹೆತ್ಬಿಟ್ರಿ ಮೀನಾಕ್ಷಿ! –  ಕಾರ್ತಿಕ್‌ ತಾಯಿಯನ್ನು ಡೈಲಾಗ್‌ ಮೂಲಕ ಹೊಗಳಿದ ನಿರೂಪಕಿ ಸುಶ್ಮಾ!

ಮೀನಾಕ್ಷಿ ಮೀನಾಕ್ಷಿ ಎಂಥಾ ಮಗನನ್ನು ಹೆತ್ಬಿಟ್ರಿ ಮೀನಾಕ್ಷಿ! –  ಕಾರ್ತಿಕ್‌ ತಾಯಿಯನ್ನು ಡೈಲಾಗ್‌ ಮೂಲಕ ಹೊಗಳಿದ ನಿರೂಪಕಿ ಸುಶ್ಮಾ!

ಬಿಗ್‌ಬಾಸ್‌ ವಿನ್ನರ್‌ ಕಾರ್ತಿಕ್‌ ಮಹೇಶ್‌ ಅವರು ಈಗ ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ದೇವಸ್ಥಾನಗಳಲ್ಲಿ, ಸಿನಿಮಾ ಕಾರ್ಯಕ್ರಮಗಳಲ್ಲಿ, ಸ್ಕೂಲ್-ಕಾಲೇಜ್‌ಗಳಲ್ಲಿ ಹಾಗೂ ಇನ್ನಿತ್ತರ ರಿಯಾಲಿಟಿ ಶೋಗಳಲ್ಲಿ ಹೀಗೆ ಎಲ್ಲಾ ಕಡೆ ಕಾರ್ತಿಕ್‌ ಮಹೇಶ್‌ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ತಮ್ಮ ತಾಯಿ ಜೊತೆ ನನ್ನಮ್ಮ ಸೂಪರ್ ಸ್ಟಾರ್ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ‘ಶ್ವೇತ ಪತ್ರ’ ದ ವಿರುದ್ಧ ‘ಕರಾಳ ಪತ್ರʼ ಪೋಸ್ಟರ್‌ ರಿಲೀಸ್‌ ಮಾಡಿದ ಕಾಂಗ್ರೆಸ್!

ಹೌದು, ಕಾರ್ತಿಕ್ ಮಹೇಶ್, ತಾಯಿ ಜೊತೆ ನನ್ನಮ್ಮ ಸೂಪರ್ ಸ್ಟಾರ್ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಕಾರ್ತಿಕ್ ಎಂಟ್ರಿ ಆಗುತ್ತಿದ್ದಂತೆ ನನ್ನ ಮುದ್ದು ತಾರೆ, ನಗುತಲಿ ಬಾರೆ ಎಂಬ ಅಣ್ಣಾವ್ರ ಹಾಡು ಪ್ರಸಾರವಾಗಿದೆ. ಈ ವೇಳೆ ಕಾರ್ತಿಕ್ ತಾಯಿ ಮೀನಾಕ್ಷಿ ಬಳಿಬಂದ ನಿರೂಪಕಿ ಸುಶ್ಮಾ, ಮೀನಾಕ್ಷಿ ಮೀನಾಕ್ಷಿ ಎಂಥಾ ಮಗನನ್ನು ಹೆತ್ತುಬಿಟ್ಟೆ ಮೀನಾಕ್ಷಿ’ ಎಂದು ಡೈಲಾಗ್‌ ಹೊಡೆದಿದ್ದಾರೆ. ಇದನ್ನು ವೇದಿಕೆಯಲ್ಲಿದ್ದ ಪ್ರತಿಯೊಬ್ಬರು ನಕ್ಕು ನಕ್ಕು ಸುಸ್ತಾಗಿದ್ದಾರೆ.

ಮಾತು ಮುಂದುವರಿಸಿದ ಸುಶ್ಮಾ ಎಲ್ಲಾ ನ್ಯೂಸ್ ಚಾನೆಲ್‌ಗಳಲ್ಲಿ ಕಪ್ ಎತ್ಕೊಂಡು ಓಡಾಡುತ್ತಿದ್ದೀರಾ ಆದರೆ ನಮ್ಮ ಶೋಗೆ ಕಪ್ ಯಾಕೆ ತಂದಿಲ್ಲ’ ಅಂತಾ ಸುಶ್ಮಾ ಪ್ರಶ್ನೆ ಮಾಡುತ್ತಾರೆ. ನನ್ನ ಪಾಲಿಗೆ ನನ್ನ ಅಮ್ಮನೇ ಕಪ್’, ಅಮ್ಮನೇ ನನ್ನ ಸೂಪರ್ ಸ್ಟಾರ್’  ಎಂದು ಕಾರ್ತಿಕ್‌ ಮಹೇಶ್‌ ಹೇಳುತ್ತಾರೆ. ಅದಕ್ಕೆ ತಾಯಿ ಮೀನಾಕ್ಷಿ ವೇದಿಕೆ ಮೇಲೆ ನಾಚಿಕೊಳ್ಳುತ್ತಾರೆ. ‘ಏಳು ಏಳು ಜನ್ಮ ಅಂತಿದ್ದರೆ ಕಾರ್ತಿಕ್‌ ನನ್ನ ಮಗನಾಗಿ ಹುಟ್ಟಲಿ ಎಂದು ಆಸೆ ಪಡುತ್ತೀನಿ’ ಎಂದು ಮೀನಾಕ್ಷಿ ಹೇಳಿದ್ದಾರೆ. ‘ಅಮ್ಮ ಖುಷಿಯಾಗಿ ಇರಬೇಕು ನೆಮ್ಮದಿಯಾಗಿ ಇರಬೇಕು. ಅವರೇ ನನ್ನ ಸೂಪರ್ ಸ್ಟಾರ್’ ಎಂದು ಕಾರ್ತಿಕ್‌ ಹೇಳುತ್ತಿದ್ದಂತೆ ತಾಯಿ ಮುತ್ತು ಕೊಟ್ಟಿದ್ದಾರೆ.

Shwetha M