ಅಕ್ರಮ ಚುನಾವಣೆ ಮೂಲಕವೇ ಪ್ರಧಾನಿ ಮೋದಿ ಗೆದ್ದಿರೋದು! – ಗಂಭೀರ ಆರೋಪ ಮಾಡಿದ ಸಂತೋಷ್ ಲಾಡ್

ಅಕ್ರಮ ಚುನಾವಣೆ ಮೂಲಕವೇ ಪ್ರಧಾನಿ ಮೋದಿ ಗೆದ್ದಿರೋದು! – ಗಂಭೀರ ಆರೋಪ ಮಾಡಿದ ಸಂತೋಷ್ ಲಾಡ್

ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು, ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧದ ತಮ್ಮ ಮತಗಳ್ಳತನ ಆರೋಪಗಳನ್ನು ಮತ್ತೆ ಮಾಡಿದ್ದಾರೆ. ಈ ಬೆನ್ನಲ್ಲೇ ಸಚಿವ ಸಂತೋಷ್ ಲಾಡ್ ಪ್ರಧಾನಿ ಮೋದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇಡೀ ದೇಶದಲ್ಲಿ ಓಟ್ ಚೋರಿ ಆಗಿರೋದು ಸತ್ಯ. ನರೇಂದ್ರ ಮೋದಿ ಅಕ್ರಮ ಮಾಡಿಯೇ ಚುನಾವಣೆಗಳನ್ನು ಗೆದ್ದಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹುಡುಗಿ ಅಂದ ನೋಡಲು ಮೇಕಪ್‌ ಉಜ್ಜಿ, ಸೀರೆ ಬಿಚ್ಚಿದ ಗಂಡಿನ ಕಡೆಯವರು! – ವಧುವನ್ನು ಅಳೆಯಲು ಹೋಗಿ ಬೆತ್ತಲಾದ ವರ!

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಂತೋಷ್‌ ಲಾಡ್‌,  ಆಳಂದ ಚುನಾವಣೆ ಆಗಿ 5-6 ವರ್ಷ ಆಯ್ತು. ಎಸ್‌ಐಟಿ ಅವರು ಎಲೆಕ್ಷನ್ ಕಮಿಷನ್‌ಗೆ ಪತ್ರ ಬರೆದಿದ್ದಾರೆ, ಆದರೆ ಇದಕ್ಕೆ ಉತ್ತರ ಕೊಟ್ಟಿಲ್ಲ. ಮೇಲ್ನೋಟದಲ್ಲಿ ಇದು ಸತ್ಯದಂತೆ ಕಾಣುತ್ತೆ. ಕರ್ನಾಟಕ ಮಾತ್ರ ಅಲ್ಲ ಒರಿಸ್ಸಾ, ಮಹಾರಾಷ್ಟ್ರದಲ್ಲಿ ಮತಗಳ್ಳತನ ಆಗಿದೆ. ಬಿಹಾರದಲ್ಲಿ 3 ಲಕ್ಷ ಮನೆಗೆ 0 ನಂಬರ್ ಕೊಟ್ಟಿದ್ದಾರೆ. ಮೋದಿ ಹೀಗೆ ಅಕ್ರಮ ಮಾಡಿಯೇ ಚುನಾವಣೆಗಳನ್ನ ಗೆದ್ದಿರೋದು ಎಂದು ದೂರಿದ್ದಾರೆ.

ರಾಜ್ಯದಲ್ಲಿ ಮತಪಟ್ಟಿ ಪರಿಷ್ಕರಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪರಿಷ್ಕರಣೆ ಮಾಡಲಿ ಯಾರು ಬೇಡ ಅಂದರು. ಬಿಹಾರ ತರಹ ಆಗುವ ಆತಂಕ ಇದೆ. ಎಲೆಕ್ಷನ್ ಕಮಿಷನರ್ ಅವರನ್ನ ಹೇಗೆ ನೇಮಕ ಆಗಬೇಕು ಅಂತ ಇತ್ತು. ಬಿಜೆಪಿಯವರು ಆ ನಿಯಮವನ್ನೇ ಬದಲಾವಣೆ ಮಾಡಿದರು. ಎಲೆಕ್ಷನ್ ಕಮಿಷನ್ ರಾಹುಲ್ ಗಾಂಧಿ ಮಾಡಿರುವ ಆರೋಪಕ್ಕೆ ಸರಿಯಾಗಿ ಉತ್ತರ ಕೊಟ್ಟಿಲ್ಲ. ಇವರೆಲ್ಲ ಒಬ್ಬ ಮನುಷ್ಯನ್ನ ದೇವರು ಮಾಡಿದ್ದಾರೆ. ಈಗ ಇವರದ್ದು ಪಿಕ್ಚರ್ ನೋಡಬೇಕಂತೆ, ತೋರಿಸ್ತಾರೆ ನೋಡಿ. ಯಾರಪ್ಪನದ್ದು ಎಲ್ಲಮ್ಮನ ಜಾತ್ರೆ ಅಷ್ಟೇ. ಇವರಿಗೆ ಕೇವಲ ಒಬ್ಬ ವ್ಯಕ್ತಿ ಪಾಪ್ಯುಲರ್ ಆಗಬೇಕು ಅಷ್ಟೆ. ಕೊಳ್ಳೆ ಹೊಡೆದು ಹೋಗಬೇಕು ಅಷ್ಟೇ. ಮೋದಿ ಅವರೇ ಪಿಕ್ಚರ್ ನಿಮ್ಮದೆ ಓಡಿಸಿ ಎಂದು ಕಿಡಿಕಾರಿದ್ದಾರೆ.

ಅದಾನಿಗೆ ಈ ಸರ್ಕಾರ ಒಂದು ರೂಪಾಯಿಗೆ ಒಂದು ಸಾವಿರ ಎಕರೆ ಕೊಟ್ಟಿದ್ದಾರೆ. ಇವರಿಗೆ ಮಾನ ಮರ್ಯಾದೆ, ಸ್ವಾಭಿಮಾನ ಇದೆಯಾ? ಯಾರು ಈ ಅದಾನಿ? ಇವರಿಗೆ ಕೇಳೋರು ಇಲ್ಲ. ಹೇಳೋರು ಇಲ್ಲ. ಮೋದಿ ಸಾಹೇಬ್ರೆ ಮಜಾ ಮಾಡಿ. ನಿಮ್ದೆ ಪಿಕ್ಚರ್ ಹೊಡೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.

Shwetha M