ಮೋದಿ ಸಾಮ್ರಾಜ್ಯಕ್ಕೆ 23 ವರ್ಷ! – ರಾಜಕಾರಣದ ಹೊಸ ಅಧ್ಯಾಯ ಆರಂಭವಾಗಿದ್ದು ಎಲ್ಲಿಂದ?

ಮೋದಿ ಸಾಮ್ರಾಜ್ಯಕ್ಕೆ 23 ವರ್ಷ! – ರಾಜಕಾರಣದ ಹೊಸ ಅಧ್ಯಾಯ ಆರಂಭವಾಗಿದ್ದು ಎಲ್ಲಿಂದ?

ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಅಧಿಕಾರ  ಸ್ವೀಕಾರ ಮಾಡಿ ಅ. 07ಕ್ಕೆ 23 ವರ್ಷಗಳು ಕಳೆದಿವೆ ರಾಜಕೀಯ ಅಖಾಡಕ್ಕೆ ಎಂಟ್ರಿಕೊಟ್ಟ ಮೋದಿ ಹಿಂದೆ ತಿರುಗಿ ನೋಡಲೇ ಇಲ್ಲ. ತನ್ನ ರಾಜಕೀಯ ಹಾದಿಯನ್ನ ಯಶಸ್ವಿಯಾಗಿ ನಡೆದುಕೊಂಡು ಬಂದಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾದ ದಿನದಿಂದ ಇಲ್ಲಿಯವರೆಗೂ ಒಂದಲ್ಲಾ ಒಂದು ಹುದ್ದೆಯನ್ನು ಮೋದಿ ಅಲಂಕರಿಸಿರುವುದು ವಿಶೇಷವಾಗಿದೆ. ಪ್ರಧಾನಿಯಾಗಿ 11 ವರ್ಷ ಹಾಗೂ ಗುಜರಾತ್​ನ ಮುಖ್ಯಮಂತ್ರಿಯಾಗಿ ಸುಮಾರು 12 ವರ್ಷಗಳ ಕಾಲ ನರೇಂದ್ರ ಮೋದಿಯವರು ಅಧಿಕಾರ ನಡೆಸಿದ್ದಾರೆ.

ಇದನ್ನೂ ಓದಿ: ಸೂರ್ಯ ಸಿಡಿಲು.. ಪಾಂಡ್ಯ ಮಿಂಚು – ಬಾಂಗ್ಲಾ ಬಾಯ್ಸ್ ಸದೆ ಬಡಿದ ಭಾರತ

23 ವರ್ಷ ಮೋದಿ ಮೋಡಿ

ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಅಭಿವೃದ್ಧಿಯತ್ತ ಸಾಗುತ್ತಿರೋ ಗುಜರಾತ್‌.. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ 14 ನೇ ಮುಖ್ಯಮಂತ್ರಿಯಾಗಿ ಅಕ್ಟೋಬರ್ 7, 2001 ರಂದು ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ ಅಭಿವೃದ್ಧಿ ರಾಜಕಾರಣದ ಹೊಸ ಅಧ್ಯಾಯ ಆರಂಭವಾಯಿತು. 26 ಮೇ 2014 ರಂದು, 2014 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತವನ್ನು ಪಡೆದಾಗ, ಅವರು ದೇಶದ 14 ನೇ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿಯವರ ನಂತರ ಮೋದಿಯವರು ಹೆಚ್ಚು ಕಾಲ ಪ್ರಧಾನಿ ಹುದ್ದೆಯಲ್ಲಿದ್ದಾರೆ. ನೆಹರು 6130 ದಿನಗಳು ಮತ್ತು ಇಂದಿರಾ ಗಾಂಧಿ 5829 ದಿನಗಳು ಪ್ರಧಾನಿಯಾಗಿದ್ದರು. ಮೋದಿ ಅವರು ಸತತ ಮೂರನೇ ಅವಧಿಗೆ 3786 ದಿನಗಳ ಕಾಲ ಪ್ರಧಾನಿಯಾಗಿದ್ದಾರೆ.

2014 ರಲ್ಲಿ ಪ್ರಾರಂಭವಾದ ‘ಮೇಕ್ ಇನ್ ಇಂಡಿಯಾ’ ಉಪಕ್ರಮವು ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ. ಕಾರ್ಯಕ್ರಮವು ಮಿಶ್ರ ಫಲಿತಾಂಶಗಳನ್ನು ಕಂಡಿದ್ದರೂ, ಇದು ಹೆಚ್ಚಿದ ವಿದೇಶಿ ನೇರ ಹೂಡಿಕೆಗೆ ಕೊಡುಗೆ ನೀಡಿದೆ. ಕೋವಿಡ್-19 ಸಾಂಕ್ರಾಮಿಕ ರೋಗವು ಎದುರಿಸುತ್ತಿರುವ ಆರ್ಥಿಕ ಸವಾಲುಗಳಿಗೆ ಪ್ರತಿಕ್ರಿಯೆಯಾಗಿ, ಮೋದಿ ಅವರು ಆತ್ಮನಿರ್ಭರ್ ಭಾರತ್  ಅಭಿಯಾನವನ್ನು 2020 ರಲ್ಲಿ ಪ್ರಾರಂಭಿಸಿದರು. ಪಿಎಂ ಕಿಸಾನ್ ಸಮ್ಮಾನ್ ನಿಧಿ, ಸ್ವಚ್ಛತಾ ಅಭಿಯಾನ, ಸ್ಟಾರ್ಟ್ಅಪ್ಗಳು, ಪ್ರಧಾನ ಮಂತ್ರಿ ಜನ್ಧನ್ ಯೋಜನೆ, ಡಿಜಿಟಲ್ ಇಂಡಿಯಾದಂತಹ ಹಲವು ಯೋಜನೆಗಳಿಂದ ಜನರಿಗೆ ಸಾಕಷ್ಟು ಅನುಕೂಲಗಳಾಗಿವೆ. ಗುಜರಾತ್‌ನ ಅಭಿವೃದ್ಧಿಯಲ್ಲಿ 23 ವರ್ಷಗಳ ಪ್ರಧಾನಿ ಮೋದಿಯವರ ಸಂಕಲ್ಪವನ್ನು ಈಡೇರಿಸಲು, ಗುಜರಾತ್ ಸರ್ಕಾರವು ಅಕ್ಟೋಬರ್ 7 ರಿಂದ ಅಕ್ಟೋಬರ್ 15 ರವರೆಗೆ ಅಭಿವೃದ್ಧಿ ಸಪ್ತಾಹವನ್ನು ಆಚರಿಸಲಿದೆ.

ಪ್ರಧಾನಮಂತ್ರಿನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಯಾಗಿ ತಮ ಸಾರ್ವಜನಿಕ ಜೀವನದಲ್ಲಿ 23 ವರ್ಷಗಳನ್ನು ಪೂರೈಸಿದಕ್ಕೆ ಅಮಿತ್ ಶಾ ಟ್ವೀಟ್ ಮಾಡಿ ಶ್ಲಾಗಿಸಿದ್ದಾರೆ.  ಮೋದಿಯವರ ಈ ಸುದೀರ್ಘ ಸಾರ್ವಜನಿಕ ಜೀವನಕ್ಕೆ ಸಾಕ್ಷಿಯಾಗಿರುವುದು ಅವರ ಅದಷ್ಟದ ಸಂಗತಿ ಎಂದು ಹೇಳಿಕೊಂಡಿದ್ದಾರೆ. ಬಡವರ ಕಲ್ಯಾಣ, ದೇಶದ ಅಭಿವದ್ಧಿ, ಭದ್ರತೆ ಮತ್ತು ಭಾರತದ ಜಾಗತಿಕ ಗುರುತನ್ನು ಏಕಕಾಲದಲ್ಲಿ ಹೇಗೆ ಬಲಪಡಿಸಬೇಕು ಎಂಬುದನ್ನು ಮೋದಿ ಅವರು ತೋರಿಸಿಕೊಟ್ಟಿದ್ದಾರೆ. ಸಮಸ್ಯೆಗಳನ್ನು ತುಂಡು ತುಂಡಾಗಿ ನೋಡುವ ಬದಲು ಮೋದಿ ಸಮಗ್ರ ಪರಿಹಾರದ ದಷ್ಟಿಕೋನವನ್ನು ದೇಶಕ್ಕೆ ಪ್ರಸ್ತುತಪಡಿಸಿದರು ಎಂದು ಶಾ ಹೇಳಿದ್ದಾರೆ.

Shwetha M