ಭಾರತದ ಗಗನಯಾತ್ರಿಗಳ ಹೆಸರು ಅಧಿಕೃತ ಘೋಷಣೆ – ನಾಲ್ವರು ಅದೃಷ್ಟಶಾಲಿಗಳು ಯಾರು ಗೊತ್ತಾ?

ಭಾರತದ ಗಗನಯಾತ್ರಿಗಳ ಹೆಸರು ಅಧಿಕೃತ ಘೋಷಣೆ – ನಾಲ್ವರು ಅದೃಷ್ಟಶಾಲಿಗಳು ಯಾರು ಗೊತ್ತಾ?

ಸೂರ್ಯಯಾನ, ಚಂದ್ರಯಾನದ ನಂತರ ಇಸ್ರೋ ಮತ್ತೊಂದು ಮೈಲುಗಲ್ಲಿಗೆ ಸಜ್ಜಾಗಿದೆ. ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಸಜ್ಜಾಗಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದೀಗ ಇಸ್ರೋ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯಾನಕ್ಕೆ ನಾಲ್ವರು ಗಗನಯಾತ್ರಿಗಳನ್ನು ಆಯ್ಕೆ ಮಾಡಲಾಗಿದ್ದು, ಗಗನಯಾತ್ರಿಗಳ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಬಿಜೆಪಿಗೆ ಶಾಕ್‌ ಕೊಟ್ಟ ಎಸ್‌.ಟಿ ಸೋಮಶೇಖರ್‌!

ಕೇರಳದ ತಿರುವನಂತಪುರದ ಇಸ್ರೋ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭೇಟಿ ನೀಡಿದ್ದಾರೆ. ಇದೇ ವೇಳೆ ಬಾಹ್ಯಾಕಾಶ ಯಾನ ಕೈಗೊಳ್ಳಲಿರುವ ಗಗನಯಾನಿಗಳ ಹೆಸರನ್ನು ಪ್ರಧಾನಿ ಮೋದಿ ಬಿಡುಗಡೆಗೊಳಿಸಿದ್ದಾರೆ. ಭಾರತೀಯ ವಾಯುಸೇನೆಯಲ್ಲಿ ಕೆಲಸ ಮಾಡುವ ಕ್ಯಾ. ಪ್ರಶಾಂತ್​​ ನಾಯರ್​, ಕ್ಯಾ, ಅಜಿತ್​ ಕೃಷ್ಣನ್​​, ಕ್ಯಾ. ಅಂಗದ ಪ್ರತಾಪ್, ವಿಂಗ್​​ ಕಮ್ಯಾಂಡರ್​ ಶುಭಾಂಶು ಶುಕ್ಲಾ ಅವರು ಇಸ್ರೋದ ಗಗನಯಾತ್ರೆಗೆ ಸಜ್ಜಾಗಿದ್ದಾರೆ.

ಗಗನಯಾತ್ರೆಗೆ ಸಿದ್ಧಗೊಳ್ಳುತ್ತಿರುವ ಈ ವಾಯುಸೇನಾ ಅಧಿಕಾರಿಗಳಿಗೆ ಭಾರತದ ವಿವಿಧ ಸೇನಾಪಡೆಗಳಲ್ಲಿ ನಿಯೋಜಿಸಿ ವಿವಿಧ ರೀತಿಯ ತರಬೇತಿ ನೀಡಲಾಗುತ್ತಿದೆ. ಕಳೆದ 5 ವರ್ಷಗಳಿಂದ ಇಸ್ರೋ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇದರ ಜೊತೆಗೆ ರಷ್ಯಾದಲ್ಲೂ ಕಠಿಣ ತರಬೇತಿಯನ್ನು ಈ ಗಗನಯಾನಿಗಳು ಪಡೆದಿದ್ದಾರೆ. ಇಸ್ರೋ ಕೈಗೊಳ್ಳಲಿರುವ ಮಾನವ ಸಹಿತ ಬಾಹ್ಯಾಕಾಶ ಯೋಜನೆ ಗಗನಯಾನಕ್ಕೆ  ಭಾರತೀಯ ವಾಯುಸೇಯ ಅಧಿಕಾರಿಗಳಾದ ಕ್ಯಾ. ಪ್ರಶಾಂತ್​​ ನಾಯರ್​, ಕ್ಯಾ, ಅಜಿತ್​ ಕೃಷ್ಣನ್​​, ಕ್ಯಾ. ಅಂಗದ ಪ್ರತಾಪ್, ವಿಂಗ್​​ ಕಮ್ಯಾಂಡರ್​ ಶುಭಾಂಶು ಶುಕ್ಲಾ ಅವರನ್ನು ಆಯ್ಕೆ ಮಾಡಿ ಕಠಿಣ ತರಬೇತಿ ನೀಡಲಾಗುತ್ತಿದೆ.

Shwetha M