ಹಣ ಹಂಚದೆ ಇಟ್ಟುಕೊಂಡಿದ್ದರೆ ದಯವಿಟ್ಟು ವಾಪಸ್ ಕೊಡಿ – ಅಂಗಲಾಚಿದ ಬಿಜೆಪಿ ಮಾಜಿ ಸಚಿವ ನಾರಾಯಣಗೌಡ
ಚುನಾವಣೆ ಮುಗಿದು ಫಲಿತಾಂಶ ಬಂದು ಕಾಂಗ್ರೆಸ್ ಸರ್ಕಾರ ರಚನೆಯಾಗಿ ಸಿದ್ದರಾಮಯ್ಯ ಸಿಎಂ ಕೂಡ ಆದ್ರು. ಸರ್ಕಾರದ ಮೊದಲ ಅಧಿವೇಶನ ಕೂಡ ಶುರುವಾಗಿದೆ. ಆದ್ರೆ ಎಲೆಕ್ಷನ್ನಲ್ಲಿ ಸೋತಿರೋ ನಾಯಕರ ನೋವು ಇನ್ನೂ ಕಡಿಮೆಯಾಗಿಲ್ಲ. ಅದ್ರಲ್ಲೂ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದವರೇ ಸೋತಿದ್ದು ಆತ್ಮಾವಲೋಕನದಲ್ಲಿ ತೊಡಗಿದ್ದಾರೆ. ಆದ್ರೀಗ ಚುನಾವಣೆ ವೇಳೆ ಜನರಿಗೆ ಹಂಚಲು ನೀಡಿದ್ದ ಹಣವನ್ನು ಮತದಾರರಿಗೆ ತಲುಪಿಸದೇ ಯಾರಾದರೂ ಇಟ್ಟುಕೊಂಡಿದ್ದರೆ ವಾಪಸ್ ಕೊಟ್ಟುಬಿಡಿ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಕೆ.ಸಿ ನಾರಾಯಣಗೌಡ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಅರ್ಧ ಗಂಟೆಗೂ ಹೆಚ್ಚು ಫೋನ್ ನಲ್ಲಿ ಮಾತನಾಡುತ್ತೀರಾ? – ಕಾದಿದೆ ಆಪತ್ತು!
ಮಂಡ್ಯದಲ್ಲಿ ಸೋಮವಾರ ಕೃತಜ್ಞತಾ ಸಭೆಯಲ್ಲಿ ಮಾತಾಡಿದ ನಾರಾಯಣಗೌಡ ಮತದಾರರಿಗೆ ಹಂಚಲು ಪಡೆದಿದ್ದ ಹಣ ಹಂಚದೇ ಆಪ್ತರಿಂದಲೇ ಮೋಸವಾಗಿದೆ ಎಂದು ಆರೋಪಿಸದ್ದಾರೆ. ಯಾರಾದರೂ ಹಣ ಇಟ್ಟುಕೊಂಡಿದ್ದರೆ ವಾಪಸ್ ಕೊಟ್ಟುಬಿಡಿ ಎಂದು ಅಂಗಾಲಾಚಿದ್ದಾರೆ. ಅಲ್ಲದೇ ಆ ಹಣದಿಂದ ಟ್ರಸ್ಟ್ ಸ್ಥಾಪಿಸಿ ಸಮಾಜ ಸೇವೆಗೆ ವಿನಿಯೋಗಿಸೋಣ ಎಂದು ಕರೆಕೊಟ್ಟಿದ್ದಾರೆ. ಹಣ ಹಂಚಿಕೆ ವಿಚಾರವಾಗಿ ನಾನು ಮಾಹಿತಿ ಪಡೆದಿದ್ದೇನೆ. ಕ್ಷೇತ್ರದ ಹಲವು ಕಡೆಗಳಿಗೆ ನಮ್ಮ ಹಣ ತಲುಪಿಲ್ಲ. ಹಣ ಹಂಚಿಕೆ ಮಾಡದೇ ಇಟ್ಟುಕೊಂಡಿದ್ದರೆ ದಯವಿಟ್ಟು ವಾಪಸ್ ಕೊಡಿ. ಉತ್ತಮ ಕೆಲಸಗಳಿಗೆ ಬಳಸಿಕೊಳ್ಳೋಣ ಎಂದು ಹಣ ಪಡೆದು ಹಂಚದ ಮುಖಂಡರಿಗೆ ಮನವಿಮಾಡಿದ್ದಾರೆ.
ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ (JDS) ಅಭ್ಯರ್ಥಿ ಹೆಚ್.ಟಿ ಮಂಜು ಅವರು 79,844 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ (Congress) ಅಭ್ಯರ್ಥಿ ಬಿ.ಎಲ್ ದೇವರಾಜ್ ಅವರು 57,939 ಮತ ಪಡೆದಿದ್ದರೆ ಕೆಸಿ ನಾರಾಯಣಗೌಡ ಅವರು 37,793 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು.