ಬಿಲ್ಡಪ್ ಕೊಟ್ಟು ಬೆತ್ತಲಾದ ಪಾಕಿಸ್ತಾನ – ಖಾಲಿ ಸ್ಟೇಡಿಯಮ್ ನಲ್ಲಿ PSL ಪಂದ್ಯ
9 ವಿದೇಶಿ ಆಟಗಾರರು ಜೂಟ್

ಐಪಿಎಲ್ ಅಂದ್ರೆ ಆದ್ರೆ ಸಾಕು.. ಪಾಕಿಸ್ತಾನ ಬಾಯಿ ಬಡ್ಕೊಳ್ಳೋಕೆ ಸ್ಟಾರ್ಟ್ ಮಾಡುತ್ತೆ. ಐಪಿಎಲ್ಗೆ ಠಕ್ಕರ್ ಕೊಡ್ತೀವಿ, ಅವ್ರಿಗಿಂತ ಜಾಸ್ತಿ ನಾವೇ ಫೇಮಸ್, ನಮ್ಮಲ್ಲೇ ಸ್ಟಾರ್ ಆಟಗಾರರು ಇರೋದು ಅಂತೆಲ್ಲಾ ಬಿಲ್ಡಪ್ ಕೊಡ್ತಾರೆ. ಈ ಸಲವೂ ಅದೇ ಡೈಲಾಗ್ ಹೊಡೆದಿದ್ರು. ಆದ್ರೆ ಪಾಕಿಸ್ತಾನ ಸೂಪರ್ ಲೀಗ್ ಆರಂಭಕ್ಕೂ ಮುನ್ನವೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬೆತ್ತಲಾಗಿದೆ. 2 ಕ್ರೀಡಾಂಗಣಗಳಲ್ಲಷ್ಟೇ ಆಡ್ಬೇಕಿದೆ. ಖಾಲಿ ಸ್ಟೇಡಿಯಮ್ನಲ್ಲೇ ಪಂದ್ಯಗಳನ್ನ ನಡೆಸ್ಬೇಕಿದೆ. ಇದು ಸಾಲ್ದು ಅಂತಾ ವಿದೇಶಿ ಆಟಗಾರರು ಟಾಟಾ ಬೈ ಬೈ ಅಂತಾ ಜೂಟ್ ಹೇಳಿದ್ದಾರೆ.
ಇದನ್ನೂ ಓದಿ : RCBಗೆ ಟಾಪ್ 4 ಬೆಂಕಿ ಬ್ಯಾಟರ್ಸ್.. ಸಾಲ್ಟ್ & ಕೊಹ್ಲಿ ಅಡ್ವಾಂಟೇಜ್ ಏನು? – ಪವರ್ ಪ್ಲೇ ಗೇಮ್ ಡಿಸೈಡರ್ ಯಾರು?
ಇಂಡಿಯನ್ ಪ್ರೀಮಿಯರ್ ಲೀಗ್ ಇದೇ ಮಾರ್ಚ್ 28ರಿಂಧ ಗ್ರ್ಯಾಂಡ್ ಆಗಿ ಸ್ಟಾರ್ಟ್ ಆಗ್ತಿದೆ. ಅತ್ತ ಐಪಿಎಲ್ಗೂ ಎರಡು ದಿನ ಮೊದ್ಲೇ ಪಾಕಿಸ್ತಾನ ಪ್ರೀಮಿಯರ್ ಲೀಗ್ ಮಾರ್ಚ್ 26ಕ್ಕೆ ಶುರುವಾಗಲಿದೆ. ಇಂಟ್ರೆಸ್ಟಿಂಗ್ ಅಂದ್ರೆ ಐಪಿಎಲ್ ಆಡಿಯನ್ಸ್ನೆಲ್ಲಾ ನಾವು ಪಿಎಸ್‌ಎಲ್‌ನಲ್ಲಿ ಎಂಗೇಜ್ ಮಾಡ್ತೀವಿ ಅಂತಿದ್ದ ಪಿಸಿಬಿ ಈಗ ತಮ್ಮದೇ ಅಭಿಮಾನಿಗಳನ್ನೂ ಕಳ್ಕೊಳ್ಳೋ ಸ್ಥಿತಿಗೆ ಬಂದಿದ್ದಾರೆ. ಯಾಕಂದ್ರೆ ಲಾಕ್ಡೌನ್ ರೀತಿಯಲ್ಲೇ ಪಂದ್ಯಗಳನ್ನ ನಡೆಸೋಕೆ ಸಿದ್ಧರಾಗಿದ್ದಾರೆ. ಭಾನುವಾರ ಪ್ರೆಸ್ ಮೀಟ್ ಮಾಡಿರೋ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಪಿಎಸ್ಎಲ್ ನಲ್ಲಿ ಆಗಿರೋ ಬದಲಾವಣೆಗಳನ್ನ ಘೋಷಣೆ ಮಾಡಿದ್ದಾರೆ.
ಎರಡು ಸ್ಟೇಡಿಯಂ.. ಫ್ಯಾನ್ಸ್ ಇಲ್ಲದೇ ನಡೆಯುತ್ತೆ ಸೀಸನ್!
ಪಾಕಿಸ್ತಾನ ಸೂಪರ್ ಲೀಗ್ 11ನೇ ಸೀಸನ್ ಮಾರ್ಚ್ 26ಕ್ಕೆ ಸ್ಟಾರ್ಟ್ ಆಗಲಿದೆ. ಇಂಟ್ರೆಸ್ಟಿಂಗ್ ಅಂದ್ರೆ ಯಾವ ಪ್ರೇಕ್ಷಕರೂ ಇಲ್ಲದೇ ಮ್ಯಾಚ್ಗಳು ನಡೆಯಲಿವೆ. ಅದೂ ಅಲ್ದೇ ಇಡೀ ಸೀಸನ್ ಪಂದ್ಯಗಳು ಕೇವಲ ಎರಡು ಸ್ಥಳಗಳಲ್ಲಿ ಮಾತ್ರ ನಡೆಸೋಕೆ ತೀರ್ಮಾನ ಮಾಡಿದ್ದಾರೆ. ಪಿಎಸ್‌ಎಲ್‌ನಲ್ಲಿ ಫಾರ್ ದಿ ಫಸ್ಟ್ ಟೈಂ ಈ ಸಲ 8 ತಂಡಗಳು ಆಡಲಿವೆ. ಪಂದ್ಯಗಳ ಸಂಖ್ಯೆಯೂ ಹೆಚ್ಚಾಗಿದೆ. ಹೀಗಿದ್ರೂ ಭದ್ರತಾ ಕಾರಣಗಳನ್ನ ನೀಡಿ ಕೇವಲ 2 ಕ್ರೀಡಾಂಗಣಗಳಲ್ಲೇ ಇಡೀ ಆವೃತ್ತಿ ಮುಗಿಸೋಕೆ ಮುಂದಾಗಿದ್ದಾರೆ. ಒನ್ ಮೋರ್ ಥಿಂಗ್ ಯಾವುದೇ ಪಂದ್ಯಗಳಿಗೂ ಅಭಿಮಾನಿಗಳಿಗೆ ಎಂಟ್ರಿ ಇರಲ್ಲ. ಸೋ ಖಾಲಿ ಸ್ಟೇಡಿಯಮ್ನಲ್ಲೇ ಪಂದ್ಯಗಳನ್ನ ನಡೆಸಬೇಕು.
ಪೆಟ್ರೋಲ್ ಶಾರ್ಟೇಜ್ ಲೀಗ್ ಎಂದು ಫ್ಯಾನ್ಸ್ ಲೇವಡಿ!
ಇನ್ನು ಪಾಕಿಸ್ತಾನ ಲೀಗ್ನ ಈ ಬದಲಾವಣೆಗಳನ್ನ ಕೆಲ ಅಭಿಮಾನಿಗಳು ಲೇವಡಿ ಮಾಡಿದ್ದಾರೆ. ಇರಾನ್, ಇಸ್ರೇಲ್ ಹಾಗೇ ಪಾಕಿಸ್ತಾನ್ ನಡುವಿನ ಯುದ್ಧದಿಂದಾಗಿ ಇಂಧನ ಮತ್ತು ಅನಿಲ ಕೊರತೆ ಉಂಟಾಗಿದೆ. ಇದ್ರ ಎಫೆಕ್ಟ್ ಪಿಎಸ್ಎಲ್ಗೂ ತಟ್ಟಿದೆ. ಪ್ರೆಸ್ಮೀಟ್ನಲ್ಲಿ ಸ್ವತಃ ಪಿಸಿಬಿ ಅಧ್ಯಕ್ಷರೇ ಇದನ್ನ ಹೇಳಿದ್ದಾರೆ. ಇಂಧನ ಬಿಕ್ಕಟ್ಟಿನಿಂದಾಗಿ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ನಾಗರಿಕರು ಸಂಚಾರವನ್ನು ನಿರ್ಬಂಧಿಸುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ ಸಾರಿಗೆಯನ್ನು ಕಡಿಮೆ ಮಾಡಲು ಮತ್ತು ಇಂಧನವನ್ನು ಉಳಿಸಲು ಪಾಕಿಸ್ತಾನ ಮಂಡಳಿಯು ಕೇವಲ ಎರಡು ನಗರಗಳಲ್ಲಿ ಮತ್ತು ಪ್ರೇಕ್ಷಕರಿಲ್ಲದೆ ಲೀಗ್ ಅನ್ನು ನಡೆಸಲು ನಿರ್ಧರಿಸಿದೆ ಎಂದಿದ್ದಾರೆ. ಹಾಗೇ ಉದ್ಘಾಟನಾ ಸಮಾರಂಭವನ್ನು ಸಹ ರದ್ದುಗೊಳಿಸಲಾಗಿದೆ. ಇನ್ನು ಪಿಸಿಬಿ ನಿರ್ಧಾರಕ್ಕೆ ಟಾಂಟ್ ಕೊಟ್ಟಿರೋ ಐಲ್ಯಾಂಡ್ ಕ್ರಿಕೆಟ್, ಪಿಎಸ್ಎಲ್ ಬರ್ತಿದೆ. ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳಿಗೆ ತುಂಬಾ ರೋಮಾಂಚನಕಾರಿಯಾಗಿದೆ. ಪಿಎಸ್ಎಲ್ ಅಂದ್ರೆ ಪೆಟ್ರೋಲ್ ಶಾರ್ಟೇಜ್ ಲೀಗ್ ಎಂದರ್ಥ’ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕಾಲೆಳೆದಿದೆ. ಮತ್ತೊಂದೆಡೆ ಕಳೆದ ವಾರವಷ್ಟೇ ಪಾಕಿಸ್ತಾನ ಮಿಲಿಟರಿ ಆಫ್ಘಾನಿಸ್ತಾನದ ಹಾಸ್ಪಿಟಲ್ ಮೇಲೆ ದಾಳಿ ನಡೆಸಿ 400ಕ್ಕೂ ಹೆಚ್ಚು ಜನರನ್ನ ಕೊಂದಿತ್ತು. ಇದಕ್ಕೆ ಪ್ರತೀಕಾರವಾಗಿ ಪಿಎಸ್ಎಲ್ ಪಂದ್ಯಗಳ ಮೇಲೆ ದಾಳಿ ನಡೆಸೋದಾಗಿ ಆಫ್ಘನ್ ಎಚ್ಚರಿಕೆ ನೀಡಿತ್ತು. ಇದಕ್ಕೆ ಬೆದರಿ ಪಾಕ್ ಹೀಗೆ ಗುಟ್ಟಾಗಿ ಪಂದ್ಯಗಳನ್ನ ಆಡಿಸ್ತಿದೆ ಅನ್ನೋ ವಾದವೂ ಇದೆ. ಹೀಗೆ ಪಂದ್ಯಗಳನ್ನ ನಡೆಸೋಕೇ ಪಿಎಸ್ಎಲ್ ಹಿಂದೆ ಮುಂದೆ ನೋಡ್ತಿದ್ರೆ ಅತ್ತ ದೇಶಿ ಆಟಗಾರರು ಟೂರ್ನಿಯಿಂದಲೇ ಹೊರ ಬರ್ತಿದ್ದಾರೆ.
ಪಿಎಸ್ ಎಲ್ ನಿಂದ ಹೊರ ಬಂದ 9 ವಿದೇಶಿ ಪ್ಲೇಯರ್ಸ್!
ಪಾಕಿಸ್ತಾನದ ಜೊತೆ ಗಡಿ ವಿವಾದ ಹೊಂದಿರೋ ಆಫ್ಘಾನಿಸ್ತಾನ ಈಗಾಗ್ಲೇ ತನ್ನ ಆಟಗಾರರನ್ನ ಪಿಎಸ್‌ಎಲ್‌ನಲ್ಲಿ ಆಡದಂಥೆ ನಿಷೇಧ ಹೇರಿದೆ. ಇದು ಸಾಲ್ದು ಅಂತಾ ವಿದೇಶಿ ಆಟಗಾರರು ಲೀಗ್ ಆರಂಭಕ್ಕೂ ಮುನ್ನವೇ ಹಿಂದೆ ಸರಿಯುತ್ತಿದ್ದಾರೆ. 2026ರ ಲೀಗ್ ಆರಂಭಕ್ಕೂ ಮೊದ್ಲೇ 9 ವಿದೇಶಿ ಆಟಗಾರರು ಲೀಗ್ಗೆ ಗುಡ್ ಬೈ ಹೇಳಿದ್ದಾರೆ. ಆಸ್ಟ್ರೇಲಿಯಾದ ಜ್ಯಾಕ್ ಫ್ರೇಸರ್ ಮೆಕ್‌ಗುರ್ಕ್, ಆಸ್ಟ್ರೇಲಿಯಾದ ಸ್ಪೆನ್ಸರ್ ಜಾನ್ಸನ್, ಹಾಗೇ ಜಾನ್ಸನ್ ಚಾರ್ಲ್ಸ್ ಮತ್ತು ಗುಟ್ಟಕೇಶ್ ಮೋತಿ ಪಿಎಸ್ಎಲ್ ನಿಂದ ಹೊರ ಬಂದಿದ್ದಾರೆ. ದಕ್ಷಿಣ ಆಫ್ರಿಕಾದ ಓಟ್ನೀಲ್ ಬಾರ್ಟ್‌ಮನ್, ಇಂಗ್ಲೆಂಡ್‌ನ ಟೈಮಲ್ ಮಿಲ್ಸ್, ಜಿಂಬಾಬ್ವೆಯ ಬ್ಲೆಸಿಂಗ್ ಮುಜರಬಾನಿ, ರಹಮಾನಲ್ಲಾ ಗುರ್ಬಾಜ್ ಕೂಡ ಹಿಂದೆ ಸರಿದಿದ್ದಾರೆ. ಅಲ್ದೇಶ್ರೀಲಂಕಾ ಟಿ20 ತಂಡದ ನಾಯಕ ಹಾಗೂ ಆಲ್ರೌಂಡರ್ ದಸುನ್ ಶನಕ ಈ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದಾರೆ. ಶನಕ ರಾಜಸ್ಥಾನ ರಾಯಲ್ಸ್ ಸೇರಲಿದ್ದಾರೆ. ಹೀಗೆ ಕೆಲವ್ರು ಐಪಿಎಲ್ಗೆ ಬಂದ್ರೆ ಇನ್ನೂ ಕೆಲವ್ರು ಪರ್ಸನಲ್ ರೀಸನ್ ಹೇಳಿ ಟೂರ್ನಿಗೆ ಗುಡ್ ಬೈ ಹೇಳಿದ್ದಾರೆ.
ಇನ್ನು ಪಿಎಸ್ಎಲ್ ಬಿಟ್ಟು ಐಪಿಎಲ್ಗೆ ಬಂದಿರೋ ವಿದೇಶಿ ಆಟಗಾರರಿಗೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಕಾನೂನು ಸಂಕಷ್ಟದ ಎಚ್ಚರಿಕೆ ನೀಡಿದ್ದಾರೆ. ಆಟಗಾರರ ವಿರುದ್ದ ಕಠಿಣ ಕ್ರಮ ಕೈಗೊಳ್ಳೋದಾಗಿ ಹೇಳಿದ್ದಾರೆ. ಹಾಗೇ ಅಭಿಮಾನಿಗಳಿಲ್ಲದೆ ಪಂದ್ಯ ನಡೆಸೋದ್ರಿಂದ ಫ್ರಾಂಚೈಸಿಗಳಿಗೆ ಆಗುವ ನಷ್ಟಕ್ಕೆ ಪಿಸಿಬಿ ಕಡೆಯಿಂದ ಪರಿಹಾರ ಕೊಡೋದಾಗಿ ಹೇಳಿದ್ದಾರೆ. ಒಟ್ನಲ್ಲಿ ಐಪಿಎಲ್ಗೆ ಪರ್ಯಾಯವಾಗಿ ಪಿಎಸ್ಎಲ್ ಮಾಡ್ತೀವಿ ಅಂತಿದ್ದ ಪಾಕಿಸ್ತಾನ ಈಗ ಪಂದ್ಯಗಳನ್ನ ನಡೆಸೋಕೂ ಅಗ್ದೇ ಬಿಡೋಕೂ ಆಗ್ದೇ ವಿಶ್ವಕ್ರಿಕೆಟ್ನ ಎದುರಲ್ಲಿ ಮತ್ತೊಮ್ಮೆ ಬೆತ್ತಲಾಗಿದೆ.

ನೋಡಿರಿ

