ನಾನೊಂದು ಮದ್ವೆ ಮಾಡ್ಕೊಂಡೆ..! – ಹಳೇ ಹಾಡು.. ‌ಹೊಸ ರೀಲ್ಸ್‌
ಮದ್ವೆ ಆದವರಿಗೆ ಇದೇ ಹಾಡು ಫೆವರೆಟ್‌!

ನಾನೊಂದು ಮದ್ವೆ ಮಾಡ್ಕೊಂಡೆ..! – ಹಳೇ ಹಾಡು.. ‌ಹೊಸ ರೀಲ್ಸ್‌ಮದ್ವೆ ಆದವರಿಗೆ ಇದೇ ಹಾಡು ಫೆವರೆಟ್‌!

ಇದು ಸೋಶಿಯಲ್ ಮೀಡಿಯಾ ಜಮಾನ.. ಯಾವಾಗ ಏನ್ ಟ್ರೆಂಡಿಂಗ್ ನಲ್ಲಿರುತ್ತೆ.. ಏನ್ ವೈರಲ್ ಆಗುತ್ತೆ ಅಂತಾ ಹೇಳೋದಿಕ್ಕೆ ಸಾಧ್ಯ ಇಲ್ಲ.. ಕಳೆದ ವರ್ಷ ಸುಮಾರು 25 ವರ್ಷಗಳ ಹಿಂದಿನ ಸಾಂಗ್ ಕರಿಮಣಿ ಮಾಲಿಕ ನೀನಲ್ಲ ಸಾಂಗ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಸ್ಯಾಂಡಲ್ ವುಡ್ ನ ಮತ್ತೊಂದು ಸಾಂಗ್ಸ್ ಸೋಡಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಸುಮಾರು 70 ವರ್ಷಗಳ ಹಿಂದಿನ ಕನ್ನಡ ಚಿತ್ರಗೀತೆಯೊಂದು ಸಖತ್ ಸದ್ದು ಮಾಡ್ತಿದೆ. ಅಷ್ಟಕ್ಕೂ ಆ ಸಾಂಗ್ ಯಾವುದು? ಮತ್ತೆ ಯಾಕೆ ಟ್ರೆಂಡ್ ಸೆಟ್ ಮಾಡಿತು ಈ ಸಾಂಗ್? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: RCB ರೆಕಾರ್ಡ್ ಬ್ರೇಕ್ ಚೇಸಿಂಗ್ – ಟಗರು ಪುಟ್ಟಿ ಟೂರ್ನಿಯಿಂದಲೇ ಔಟ್?

ಸೋಶಿಯಲ್ ಮೀಡಿಯಾ ಬಂದ್ಮೇಲಂತೂ ನಮ್ ಜನ ಫುಲ್ ಆಪ್ ಡೇಟ್ ಆಗಿದ್ದಾರೆ.. ಯಾವುದೇ ಒಂದು ಸಿಚುವೇಷನ್ ಇರ್ಲಿ ಅದಕ್ಕೊಂದು ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಲ್ಲ ಅಂದ್ರೆ ನಿದ್ದೇನೆ ಬರಲ್ಲ ಅನ್ನೋತರ ಆಡ್ತಾರೆ ಕೆಲವರು. ಇತ್ತೀಚೆಗಂತೂ  ಸಿನಿಮಾ ಡೈಲಾಗ್ಸ್‌, ಸಾಂಗ್ಸ್‌ ಎಲ್ಲದಕ್ಕೂ ರೀಲ್ಸ್‌ ಮಾಡಿ ಹಾಕುವವರೇ ಹೆಚ್ಚು.. ಜನ ಮರುಳೋ ಜಾತ್ರೆ ಮರುಳೋ ಅನ್ನೋ ಮಾತಿನಂತೆ ಒಂದು ವಿಡಿಯೋ ನೋಡಿ ಮತ್ತೊಂದಷ್ಟು ಜನ ರೀಲ್ಸ್‌ ಮಾಡಿ ಟ್ರೆಂಡ್‌ ಸೆಟ್‌ ಮಾಡಿಬಿಡ್ತಾರೆ.. ಕಳೆದ ವರ್ಷ  ಏನಿಲ್ಲ ಏನಿಲ್ಲ ಸಾಂಗ್‌ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು.. ಅದಾದ್ಮೇಲೆ ಅದಕ್ಕೆ ಬೆಳ್ಳುಳ್ಳಿ ಕಬಾಬ್, ರಾಹುಲ್ಲಾ ನನ್ನ ಸೇರಿಸಿ.. ಆತನೇ ಕರಿಮಣಿ ಮಾಲೀಕ ಅಂತಾ ಟ್ರೆಂಡ್‌ ಸೆಟ್‌ ಮಾಡಿದ್ರು.. ಇದೀಗ ಮತ್ತೊಂದು ಸಾಂಗ್‌ ಟ್ರೆಂಡಿಂಗ್‌ ನಲ್ಲಿದೆ. ಸುಮಾರು 70 ವರ್ಷಗಳ ಹಿಂದೆ ಬಿಡುಗಡೆಯಾದ ಕನ್ನಡ ಸಿನಿಮಾದ ಸಾಂಗ್‌ ವೊಂದು ಸಿಕ್ಕಾಪಟ್ಟೆ ವೈರಲ್‌ ಆಗಿದೆ.. ಮದುವೆಯಾದವರ ಬಾಯಲ್ಲೆಲ್ಲಾ ಇದೇ ಸಾಂಗ್‌ ಬರ್ತಿದೆ.. ಆ ಸಾಂಗ್‌ ಬೇರೆ ಯಾವುದೂ ಅಲ್ಲ.. ನಾನೊಂದು ಮದುವೆಯ ಮಾಡಿಕೊಂಡೆ, ಮನದಾನಂದವನ್ನು ನಾ ಕಳೆದುಕೊಂಡೆ.. ಈ ಸಾಂಗ್‌ ಈಗ ಸೋಶಿಯಲ್‌ ಮೀಡಿಯಾದಲ್ಲಿ ಹಲ್‌ ಚಲ್‌ ಸೃಷ್ಠಿಸಿದೆ. ರೀಲ್ಸ್ ಪ್ರಿಯರು ಇದೇ ಸಾಂಗ್‌ ಗೆ  ವೀಡಿಯೋಗಳನ್ನು ಮಾಡಿ ತೇಲಿಬಿಡುತ್ತಿದ್ದಾರೆ.

ಹೌದು ಸೋಶಿಯಲ್‌ ಮೀಡಿಯಾದಲ್ಲಿ ಈಗ ಮದುವೆಯಾದವರೆಲ್ಲಾ ತಕ್ಕ ಥೈಯಾ ದಿಕ್ಕ ಥೈಯಾ ಅಂತಾ ಈ ಸಾಂಗ್‌ ಗೆ ಡ್ಯಾನ್ಸ್‌ ಮಾಡ್ತಿದ್ದಾರೆ. ಈ ಸಾಂಗ್‌ ವೈರಲ್‌ ಆಗ್ತಿದ್ದಂತೆ ಈ ಸಾಂಗ್‌ ಯಾವುದು ಅಂತಾ ಸೋಶಿಯಲ್ ಮೀಡಿಯಾ ಬಳಕೆದಾರರು ಹುಡುಕಾಡ್ತಿದ್ದಾರೆ.. ಅಷ್ಟಕ್ಕೂ ಈ ಸಾಂಗ್‌ ಸುಮಾರು 70 ವರ್ಷಗಳ ಹಿಂದಿನ ಸಾಂಗ್..‌  1956ರಲ್ಲಿ ಕಲ್ಯಾಣ್ ಕುಮಾರ್,  ಮೈನಾವತಿ ಹಾಗೂ ಎಂ. ಜಯಶ್ರೀ ಲೀಡ್ ರೋಲ್‌ಗಳಲ್ಲಿ ನಟಿಸಿದ್ದ ಮುತ್ತೈದೆ ಭಾಗ್ಯ ಸಿನಿಮಾದ್ದು. ವಿಠಲಚಾರ್ಯ ನಿರ್ಮಿಸಿ ನಿರ್ದೇಶಿಸಿದ್ದ ಬ್ಲ್ಯಾಕ್‌ ಆಂಡ್‌ ವೈಟ್‌ ಸಿನಿಮಾ ಆ ಕಾಲದಲ್ಲಿ ಪ್ರೇಕ್ಷಕರನ್ನ ರಂಜಿಸಿತ್ತು. ಚಿತ್ರಕ್ಕೆ ರಾಜನ್- ನಾಗೇಂದ್ರ ಸಂಗೀತ ಸಂಯೋಜನೆ ಮಾಡಿದ್ದರು. ಹುಣಸೂರು ಕೃಷ್ಣಮೂರ್ತಿ, ಬಾಲಕೃಷ್ಣ ಹಾಗೂ ಮಾಸ್ಟರ್ ಹಿರಣ್ಣಯ್ಯ ಸಹ ತಾರಾಗಣದಲ್ಲಿದ್ದರು. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀ ಸ್ವಾತಂತ್ರ್ಯ ಅಗತ್ಯ. ಹೆಣ್ಣು ಯಾರಿಗಿಂತ ಕಮ್ಮಿ ಇಲ್ಲ, ಗಂಡು ತನ್ನ ಅಡಿ ಆಳಾಗಿ ಇರಬೇಕು, ನಾನು ಹೇಳಿದಂತೆ ಕೇಳಬೇಕು ಎಂದು ವಾದಿಸುವ ನಾಯಕಿ. ಸಂಗೀತದ ಮೇಷ್ಟ್ರಾಗಿ ಬಂದು ಆಕೆಯನ್ನು ಮದುವೆಯಾಗಿ ಆಕೆಗೆ ಸರಿ ತಪ್ಪುಗಳ ಪಾಠ ಮಾಡುವ ನಾಯಕನಾಗಿ ಕಲ್ಯಾಣ್‌ ಕುಮಾರ್ ನಟಿಸಿದ್ದರು.  ಇದ್ರಲ್ಲಿ ನಾನೊಂದು ಮದುವೆಯ ಮಾಡಿಕೊಂಡೆ ಮನದಾನಂದವನ್ನು ನಾ ಕಳೆದುಕೊಂಡೆ ಎಂಬ ಹಾಡಿಗೆ ಕಲ್ಯಾಣ್‌  ಕುಮಾರ್ ಕುಣಿದಿದ್ರು. ಇದೀಗ ಈ ಸಾಂಗ್‌ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗ್ತಿದೆ. ಮದುವೆ ಮಾಡಿಕೊಂಡವೆಲ್ಲರೂ ಈ ಸಾಂಗ್‌ ಗೆ ರೀಲ್ಸ್‌ ಮಾಡ್ತಿದ್ದಾರೆ..

ಈಗ ರೀಲ್ಸ್‌ ಮಾಡೋರೆಲ್ಲಾ ಈಗ ‘ತಕ್ಕ ಥೈಯಾ ದಿಕ್ಕ ಥೈಯಾ ಅಂತಾ ಗುನುಗಲು ಶುರುಮಾಡಿದ್ದಾರೆ.. ಮದುವೆಯಾದವರೆಲ್ಲಾ ರೀಲ್ಸ್‌ ಮುಖಾಂತರ ತಮ್ಮ ಕಷ್ಟ ಹೇಳಿಕೊಳ್ತಿದ್ದಾರೆ. ಮತ್ತೆ ಕೆಲವರು ರೀಲ್ಸ್ ಕಾರಣಕ್ಕೆ ಒಂದೊಳ್ಳೆ ಹಾಡನ್ನು ಮತ್ತೆ ಕೇಳುವಂತಾಯಿತು, ಸಿನಿಮಾ ನೋಡುವಂತಾಯಿತು ಅಂತಾ ಹೇಳ್ತಿದ್ದಾರೆ.

Shwetha M