ದಾಂಪತ್ಯ ಜೀವನಕ್ಕೆ ಕಾಲಿಟ್ಟ ನನ್ನರಸಿ ರಾಧೆ ಸೀರಿಯಲ್‌ ನಟಿ ಕೌಸ್ತುಭ –  ಹುಡುಗ ಯಾರು ಗೊತ್ತಾ?

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನನ್ನರಸಿ ರಾಧೆ ಸೀರಿಯಲ್‌ ನಟಿ ಕೌಸ್ತುಭ –  ಹುಡುಗ ಯಾರು ಗೊತ್ತಾ?

ನನ್ನರಸಿ ರಾಧೆ ಸೀರಿಯಲ್‌ನಲ್ಲಿ ನಟಿಸಿ ಮನೆ ಮಾತಾದ ಕೌಸ್ತುಭ ಮಣಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೌಸ್ತುಭ  ಅವರು ಸಿದ್ದಾಂತ್ ಸತೀಶ್ ಎಂಬುವವರ ಜೊತೆ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಟಿ ಕೌಸ್ತುಭ ಮಣಿ ನನ್ನರಸಿ ರಾಧೆ ಸೀರಿಯಲ್‌ನಲ್ಲಿ ಇಂಚರಾ ಪಾತ್ರದ ಮೂಲಕ ಗುರುತಿಸಿಕೊಂಡಿದ್ದರು. ಈ ಪಾತ್ರದ ಮೂಲಕ ಅತೀ ಹೆಚ್ಚು ಫ್ಯಾನ್ಸ್​ಗಳನ್ನು ನಟಿ ಸಂಪಾದಿಸಿಕೊಂಡಿದ್ದರು. ಇದೀಗ ಇವರು ಸಪ್ತಪದಿ ತುಳಿದಿದ್ದಾರೆ. ಸಿದ್ದಾಂತ್ ಸತೀಶ್ ಎಂಬುವವರ ಜೊತೆ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.  ಕಿರುತೆರೆ ನಟ ಹಾಗೂ ನಟಿಯರು ನಟಿ ಕೌಸ್ತುಭ ಮಣಿ ಮದುವೆಗೆ ಬಂದು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: ನಾನು ಮಾಡಿದ ತ್ಯಾಗಕ್ಕೆ ಬೆಲೆಯೇ ಇಲ್ಲವಾಯ್ತಾ? – ದಳಪತಿಗಳ ವಿರುದ್ಧ ಸುಮಲತಾ ಅಂಬರೀಶ್‌ ಕೆಂಡಾಮಂಡಲ

ಕೌಸ್ತುಭ ಅವರ ಪತಿ ಸಿದ್ದಾಂತ್ ಸತೀಶ್ ಕೆನಡಾದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ವಿದೇಶದಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಗುರು ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸಿದ್ಧಾಂತ ಸತೀಶ್ ಜೊತೆ ಕೌಸ್ತುಭ ಮಣಿ ಪುಟ್ಟ ವಿಮಾನದಲ್ಲಿ ಬಹಳ ವಿಭಿನ್ನವಾಗಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿವೆ. ಸದ್ಯ ನಟಿ ಕೌಸ್ತುಭ ಮಣಿ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಈ ಫೋಟೋ ನೋಡಿದ ಅಭಿಮಾನಿ ನಟಿ ಕೌಸ್ತುಭ ಅವರಿಗೆ ಶುಭ ಹಾರೈಸುತ್ತಿದ್ದಾರೆ.

ಸದ್ಯ ನಟಿ ಕೌಸ್ತುಭ ಮಣಿ ಹ್ಯಾಟ್ರಿಕ್ ಹೀರೋ, ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ಕೌಸ್ತುಭ ಮಣಿ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಕನ್ನಡದ ರಾಮಾಚಾರಿ 2.0 ಚಿತ್ರದಲ್ಲಿ ಕೌಸ್ತುಭ ಮಣಿ ನಟಿಸಿದ್ದಾರೆ.

Shwetha M

Leave a Reply

Your email address will not be published. Required fields are marked *