ಈಕೆಗೆ ಕೊಹ್ಲಿ ಸುದೀಪ್‌ ತುಂಬಾ ಕ್ಲೋಸ್‌! – ಸಪ್ತಮಿಗೆ ಚಾನ್ಸ್‌ ಕೊಡ್ಸಿದ್ದೇ ಈ ಪುಟಾಣಿ
ಮಾತಿನ ಮಲ್ಲಿಗೆ ಸ್ಟಾರ್‌ ಪಟ್ಟ

ಈಕೆಗೆ ಕೊಹ್ಲಿ ಸುದೀಪ್‌ ತುಂಬಾ ಕ್ಲೋಸ್‌! – ಸಪ್ತಮಿಗೆ ಚಾನ್ಸ್‌ ಕೊಡ್ಸಿದ್ದೇ ಈ ಪುಟಾಣಿಮಾತಿನ ಮಲ್ಲಿಗೆ ಸ್ಟಾರ್‌ ಪಟ್ಟ

ನನ್ನಮ್ಮ ಸೂಪರ್‌ ಸ್ಟಾರ್‌ ಸೀಸನ್‌ 3 ಮುಕ್ತಾಯಗೊಂಡಿದೆ. ಈ ಬಾರಿ ಈ ಶೋ ಸಖತ್‌ ಮನರಂಜನೆ ನೀಡಿತ್ತು. ಮಕ್ಕಳ ಪರ್ಫಾಮೆನ್ಸ್‌ಗೆ ವೀಕ್ಷಕರು ಫಿದಾ ಆಗಿದ್ದಾರೆ. ನನ್ನಮ್ಮ ಸೂಪರ್‌ ಸ್ಟಾರ್ ಸೀಸನ್‌ 3ಯ ಗ್ರ್ಯಾಂಡ್ ಫಿನಾಲೆ ಮುಗಿದಿದೆ. ವಿನ್ನರ್‌ ಆಗಿ ಯಾರೆಂದು ಕೂಡ ಘೋಷಣೆಯಾಗಿದೆ. ಈ ಬಾರಿ ವೀಕ್ಷಕರಿಗೆ ಹೆಚ್ಚು ಮನರಂಜನೆ ನೀಡಿದ್ದು ಮೃದಿನಿ ಅಂತ ಹೇಳಿದ್ರೆ ತಪ್ಪಾಗದು.. ಆಕೆಯ ಉಲ್ಟಾ ಪಲ್ಟಾ ಮಾತುಗಳು ಹೊಟ್ಟೆ ಉಣ್ಣಾಗಿಸುವಷ್ಟು ನಗುವನ್ನು ತರಿಸಿದೆ. ಆಕೆಯ ಡೈಲಾಗ್‌ ಗಳು ಜಡ್ಜಸ್‌ಗಳೇ ಶಾಕ್‌ ಆಗಿದ್ದಾರೆ. ಆಕೆಗೆ ಕ್ರಿಕೆಟ್‌ ಕಿಂಗ್‌ ವಿರಾಟ್‌ ಕೊಹ್ಲಿ, ಕಿಚ್ಚ ಸುದೀಪ್‌ ತುಂಬಾ ಕ್ಲೋಸ್‌ ಅಂತೆ.. ಅವರ ಜೊತೆಗೆ ಫೋನ್‌ನಲ್ಲಿ ಮಾತಾಡ್ತಾಳಂತೆ ಮೃದಿನಿ..

ಇದನ್ನೂ ಓದಿ: ದಸರಾ ಆನೆ ಅರ್ಜುನನ ಸ್ಮಾರಕ ನಿರ್ಮಾಣ ಹೆಸರಿನಲ್ಲಿ ಅಕ್ರಮ ಹಣ ಸಂಗ್ರಹ! –  ನಟ ದರ್ಶನಗೂ ಮೋಸ?

ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 3  ಸಾಕಷ್ಟು ಮಕ್ಕಳ ಸಮಾಗಮಕ್ಕೆ ವೇದಿಕೆಯಾಗಿತ್ತು. ಈ ಬಾರಿ ನನ್ನಮ್ಮ ಸೂಪರ್‌ ಸ್ಟಾರ್‌ ವೇದಿಕೆ ಹತ್ತಿದ್ದ ಮಕ್ಕಳೆಲ್ಲಾ ತಮ್ಮ ಟ್ಯಾಲೆಂಟ್‌ ಪ್ರೂವ್ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಕ್ಕಳ ಮಾತು, ಮಕ್ಕಳ ನಟನೆಯೇ ಹೈಲೇಟ್ ಆಗಿತ್ತು. ಇದೀಗ ನನ್ನಮ್ಮ ಸೂಪರ್‌ ಸ್ಟಾರ್‌ 3 ಗ್ರಾಂಡ್‌ ಫಿನಾಲೆ ಮುಗಿದಿದೆ. ವಿನ್ನರ್‌ ಯಾರು ಅಂತಾ ಅನೌನ್ಸ್‌ ಆಗಿದೆ. ಈ ಬಾರಿ ವಿನ್ನರ್‌ ಪಟ್ಟ ಸಾರಿಕಾ ಹಾಗೂ ಮೃದಿನಿ ಪಡೆದುಕೊಂಡಿದ್ದಾರೆ. ರನ್ನರ್ ಅಪ್ ಪಟ್ಟವನ್ನು ಚೈತ್ರಾ-ದುಷ್ಯಂತ್ ಪಡೆದುಕೊಂಡಿದ್ದಾರೆ. ಸೀಸನ್​ 3ರ 3ನೇ ಸ್ಥಾನ ಪಡೆದವರು ಶಿಲ್ಪಾ ಹಾಗೂ ವಿಯಾನ್. 4ನೇ ಸ್ಥಾನವನ್ನು ಸೌಂದರ್ಯ ಹಾಗೂ ಧವನ್ ರಾಜ್ ಮುಡಿಗೇರಿಸಿಕೊಂಡಿದ್ದಾರೆ. 5ನೇ ಸ್ಥಾನದಲ್ಲಿ ಅಪೂರ್ವ ಅಯಾಂಶ್ ಬಂದಿದ್ದಾರೆ. 6ನೇ ಸ್ಥಾನವನ್ನು ಪ್ರಿಯಾಂಕಾ ಹಾಗೂ ದ್ವಿತಾ ಪಡೆದುಕೊಂಡಿದ್ದಾರೆ.

ಈ ಬಾರಿ ವೀಕ್ಷಕರಿಗೆ ಹೆಚ್ಚು ಮನರಂಜನೆ ನೀಡಿದ್ದು ಅಂದ್ರೆ ವಿನ್ನರ್‌ ಪಟ್ಟ ಅಲಂಕರಿಸಿದ ಮೃದಿನಿ.  ಆಕೆಯ ಮುದ್ದು ಮುದ್ದಾದ ಮಾತುಗಳು ಹೊಟ್ಟೆ ಉಣ್ಣಾಗಿಸುವಷ್ಟು ನಗುವನ್ನು ತರಿಸಿದೆ. ಮೃದಿನಿ ಮಾತಿಗೂ ಸೈ, ಡ್ಯಾನ್ಸ್‌ಗೂ ಸೈ, ನಟನೆಗೂ ಸೈ.. ಮಾತಿಗೆ ನಿಂತರೆ ಟಾಂಟ್ ಕೊಡುವುದರಲ್ಲಿ ಎಕ್ಸ್‌ಪರ್ಟ್.  ಈ ಸಕಲಕಲಾವಲ್ಲಭೆಯ ಡೈಲಾಗ್‌ಗಳಿಗೆ ಫಿದಾ ಆಗದವರೇ ಇಲ್ಲ. ಸಣ್ಣ ವಯಸ್ಸಿಗೆ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಸಂಪಾದಿಸಿದ್ದಾಳೆ ಈ ಪುಟಾಣಿ. ಇನ್ಸ್ಟಾಗ್ರಾಮ್‌ನಲ್ಲಿ ಈಕೆ ಡೈಲಾಗ್‌ಗೆ ಅದೆಷ್ಟೋ ಜನ ಲಿಪ್ ಸಿಂಕ್ ಮಾಡಿದ್ದಾರೆ. ಅಷ್ಟು ಫೇಮಸ್ ಈ ಮೃದಿನಿ.

ಮಕ್ಕಳು ಏನೇ ಮಾಡಿದರು ಚೆಂದ ಅಂತಾರೆ.‌ ಈಕೆ ಏನೇ ಮಾತನಾಡಿದರೂ ಕೇಳುವುದಕ್ಕೆ ಚೆಂದ.  ಈಕೆ ಮಾತಿಗೆ ನಿಂತ್ರೆ ನಾನ್‌ ಸ್ಟಾಪ್‌ ಮಾತನಾಡುತ್ತಲೇ ಇರ್ತಾಳೆ. ಆಕೆ ಕೊಡೋ ಬಿಲ್ಡಪ್‌ಗಳಿಗೆನೂ ಕಡಿಮೆ ಇಲ್ಲ.. ಅಷ್ಟರ ಮಟ್ಟಿಗೆ ಮಾತನಾಡುತ್ತಿರುತ್ತಾಳೆ.  ಆಕೆ ಎಷ್ಟು ಮಾತಾಡಿದ್ರೂ ಕಿರಿಕಿರಿ ಇರಲ್ಲ. ಆ ಕ್ಷಣಕ್ಕೆ ಕೇಳಿದರಷ್ಟೇ ನಗು ಭರಿಸುವಷ್ಟು ಟಾಂಟ್ ಕೊಡುತ್ತಾಳೆ. ಹೀಗಾಗಿ ನನ್ನಮ್ಮ ಸೂಪರ್ ಸ್ಟಾರ್ ವೇದಿಕೆಯಲ್ಲಿ ಮೃದಿನಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು.

ಇನ್ನು ಗ್ರಾಂಡ್‌ ಫಿನಾಲೆಗೆ ಕಾಂತಾರ ಬೆಡಗಿ ಸಪ್ತಮಿ ಗೌಡ ಗೆಸ್ಟ್ ಆಗಿ ಬಂದಿದ್ದಾರೆ. ಈ ವೇಳೆಯೂ ಮೃದಿನಿ ಮಾತಿನಲ್ಲೇ ಸಪ್ತಮಿಗೌಡಗೆ ಮೋಡಿ ಮಾಡಿದ್ದಾಳೆ. ಈ ವೇಳೆ ವೇದಿಕೆಯಲ್ಲಿ ನನಗೆ ದೊಡ್ಡ ಸ್ಟಾರ್ಸ್‌ ಗೊತ್ತು. ವಿರಾಟ್ ಕೊಹ್ಲಿ ಬೇಕಾ, ಕಿಚ್ಚ ಸುದೀಪ್ ಬೇಕಾ, ರಾಕಿಂಗ್ ಸ್ಟಾರ್ ಯಶ್ ಬೇಕಾ ಹೇಳಿ. ಈ ಮೂವರ ಜೊತೆಗೆ ಮಾತನಾಡಬೇಕು ಅಂದ್ರೆ ಸಾಕು ಪಟ್ ಅಂತ ಕಾಲ್ ಮಾಡಿ ಬಿಡುತ್ತಾಳೆ. ಅಷ್ಟು ಕಾಂಟ್ಯಾಕ್ಟ್ ಇದೆ ಮೃದಿನಿಗೆ. ನಾವೂ ನೀವೂ ಯೂಸ್ ಮಾಡುವಂತ ಫೋನ್ ಕೂಡ ಬೇಡ. ಮೈಕ್ ಇದ್ದರೆ ಮೈಕ್, ಇಲ್ಲಾ ಅಂದ್ರೆ ತನ್ನ ಅಂಗೈ ಅನ್ನೇ ಫೋನ್‌ ನಾಗಿ ಮಾಡ್ಕೊಂಡ್‌ ಕಾಲ್‌ ಮಾಡ್ತಾಳೇ..

ಆರಂಭದಲ್ಲಿ ಕಿಚ್ಚ ಸುದೀಪ್‌ಗೆ ಕಾಲ್ ಮಾಡಿದ ಮೃದಿನಿ, ಕಿಚ್ಚ ಸುದೀಪ್ ಹೇಗಿದ್ದೀರಾ ಅಂತಾನೇ ಮಾತನಾಡಿದಳು. ಆಮೇಲೆ ಸಪ್ತಮಿ ಗೌಡಗೆ ಯಶ್ ಜೊತೆಗೆ ಸಿನಿಮಾ ಮಾಡುವ ಆಸೆಯಾಗಿದೆ. ಹೀಗಾಗಿ‌ಒಂದು ಅವಕಾಶ ಕೊಡಿಸ್ತೀಯಾ ಎಂದು ಕೇಳಿದಾಗ ಪಟ್ ಅಂತ ರಾಕಿಂಗ್ ಸ್ಟಾರ್ ಯಶ್‌ಗೆ ಕಾಲ್ ಮಾಡಿ, ರಾಕಿಂಗ್ ಸ್ಟಾರ್ ಯಶ್. ಸಪ್ತಮಿ ಗೌಡಗೆ ನಿಮ್ಮ ಜೊತೆಗೆ ಸಿನಿಮಾ ಮಾಡಬೇಕಂತೆ ಅಂತಾ ಕೇಳಿದ್ದಾಳೆ. ಇದು ವೀಕ್ಷಕರನ್ನು ನಕ್ಕು ನಗಿಸುವಂತೆ ಮಾಡಿದೆ. ಈಕೆಯ ಡೈಲಾಗ್ಸ್‌ಗಳಿಗೆ ಫಿದಾ ಆದ ಸಪ್ತಮಿ ಗೌಡ  ಆಕೆಯನ್ನು ತನ್ನ ಬಳಿ ಕರೆಸಿಕೊಂಡು ಮಾತನಾಡಿದ್ದಾರೆ.

ಮೃದಿನಿಯ ಮಾತುಗಳೆಂದರೆ ಹೀಗೆ‌ ಇರೋದು. ಆ ಮಾತುಗಳು ನೆರೆದಿದ್ದವರನ್ನೆಲ್ಲಾ ನಕ್ಕು ನಲಿಸುತ್ತದೆ. ಇದೀಗ ಕಾಮಿಡಿ ಮಾಡಿದ ಮೃದಿನಿ, ಸೀರಿಯಸ್ ಆಗಿಯೇ ಜಡ್ಜಸ್‌ಗಳನ್ನು ಜಡ್ಜ್‌ ಮಾಡಿದ್ದಾಳೆ. ಜಡ್ಜಸ್ ಅಂದ್ರೆ ಸುಮ್ಮನೆ ಕೂರುತ್ತಾರೆ. ಇಲ್ಲ ಸ್ಟೇಜ್ ಮೇಲೆ ಬಂದು ಮುತ್ತು ಕೊಡುತ್ತಾರೆ ಎಂದಿದ್ದಾಳೆ. ಅಷ್ಟೇ ಅಲ್ಲ ನಾನು ನೆಕ್ಸ್ಟ್ ಜಡ್ಜ್ ಆಗ್ತೀನಿ ಅಂತಾನೆ ಹೇಳಿದ್ದಾಳೆ. ಇದನ್ನು ಕೇಳಿದ ತಾರಾ, ಸೃಜನ್ ಲೋಕೇಶ್, ಅನು ಪ್ರಭಾಕರ್ ಶಾಕ್ ಆದ್ರೂ.. ಅಕೆ ಕಾಮಿಡಿಗೆ ಖುಷಿಯಾಗಿದ್ದಾರೆ. ಒಟ್ಟಿನಲ್ಲಿ ಮೃದಿನಿ ಮುದ್ದು ಮುದ್ದಾಗಿ ಮಾತನಾಡಿ ವೀಕ್ಷಕರಿಗೆ ಸಖತ್‌ ಮನರಂಜನೆ ನೀಡಿ ನನ್ನಮ್ಮ ಸೂಪರ್ ಸ್ಟಾರ್‌ ವಿನ್ನರ್‌ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ.

Shwetha M