ರಿಷಭ್‌ ಪಂತ್‌ಗೆ ಬೆರಳು ತೋರಿಸಿದ ರಾಜಸ್ಥಾನ್ ರಾಯಲ್ಸ್‌ನ ನಾಂಡ್ರೆಗೆ ಬಿಗ್ ಶಾಕ್ – 35,700 ರೂ. ದಂಡ

ರಿಷಭ್‌ ಪಂತ್‌ಗೆ ಬೆರಳು ತೋರಿಸಿದ ರಾಜಸ್ಥಾನ್ ರಾಯಲ್ಸ್‌ನ ನಾಂಡ್ರೆಗೆ ಬಿಗ್ ಶಾಕ್ – 35,700 ರೂ. ದಂಡ

ಇಂಡಿಯನ್ ಪ್ರೀಮಿಯರ್ ಲೀಗ್​ನ 32ನೇ ಪಂದ್ಯದಲ್ಲಿ ಅಶಿಸ್ತು ತೋರಿದ ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ನಾಂಡ್ರೆ ಬರ್ಗರ್ ಅವರಿಗೆ ಪಂದ್ಯದ ಸಂಭಾವನೆಯ ಶೇ. 10 ರಷ್ಟು ದಂಡ ವಿಧಿಸಲಾಗಿದೆ. ಏಪ್ರಿಲ್ 22 ರಂದು ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಬರ್ಗರ್ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದರು.

ಈ ಪಂದ್ಯದ ಎರಡನೇ ಓವರ್‌ನಲ್ಲಿ ನಾಂಡ್ರೆ ಬರ್ಗರ್ ಅವರು ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ವಿಕೆಟ್ ಪಡೆದ ಸಂಭ್ರಮದಲ್ಲಿ ಬರ್ಗರ್ ಅವರು ಪಂತ್ ಅವರತ್ತ ಬೆರಳು ತೋರಿಸಿ ಬೀಳ್ಕೊಡುಗೆ ನೀಡಿದ್ದರು. ಇದನ್ನು ಐಪಿಎಲ್ ನೀತಿ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ವಧು, ವರನ ಫೋಟೋ ತೆಗೆಯುತ್ತಿದ್ದ ವೇಳೆ ಭೀಕರ ಅಪಘಾತ! – 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಫೋಟೋಗ್ರಾಫರ್ ಸಾವು!

ನಾಂಡ್ರೆ ಬರ್ಗರ್ ಅವರು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.5 ರ ಅಡಿಯಲ್ಲಿ ‘ಲೆವೆಲ್ 1’ ಅಪರಾಧ ಎಸಗಿದ್ದಾರೆ ಎಂದು ಸಾಬೀತಾಗಿದೆ. ಇದು ಎದುರಾಳಿ ಆಟಗಾರನನ್ನು ಕೆರಳಿಸುವಂತಹ ಸನ್ನೆ ಅಥವಾ ಭಾಷೆಯನ್ನು ಬಳಸುವುದಕ್ಕೆ ಸಂಬಂಧಿಸಿದೆ. ಪಂದ್ಯದ ಸಂಭಾವನೆಯಲ್ಲಿ ಶೇ. 10 ರಷ್ಟು ಕಡಿತ ಮಾಡಲಾಗಿದ್ದು, ಅವರ ಶಿಸ್ತಿನ ದಾಖಲೆಯಲ್ಲಿ ಒಂದು ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ. ಬರ್ಗರ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರಿಂದ ಹೆಚ್ಚಿನ ವಿಚಾರಣೆಯ ಅಗತ್ಯವಿರಲಿಲ್ಲ.

ಸೌತ್ ಆಫ್ರಿಕಾ ವೇಗಿ ನಾಂಡ್ರೆ ಬರ್ಗರ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ 50 ಲಕ್ಷ ರೂ.ಗೆ ಖರೀದಿಸಿದೆ. ಅದರಂತೆ ಅವರ ಲೀಗ್​ ಹಂತದ ಪ್ರತಿ ಪಂದ್ಯದ ಸಂಭಾವನೆ 3.57 ಲಕ್ಷ ರೂ. 3.57 ಲಕ್ಷ ರೂ. ಪಂದ್ಯ ಸಂಭಾವನೆಯಿಂದ 10% ದಂಡ ಕಟ್ಟಬೇಕಾಗಿದೆ. ಅಂದರೆ ಬೆರಳು ತೋರಿಸಿ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದಕ್ಕೆ ನಾಂಡ್ರೆ ಬರ್ಗರ್ 35,700 ರೂ. ದಂಡ ಕಟ್ಟಬೇಕಾಗಿ ಬಂದಿದೆ.

 

Kishor KV