ಕರ್ನಾಟಕದ ಹೆಮ್ಮೆಯ ನಂದಿನಿಗೆ ಮತ್ತೊಂದು ಗೌರವ – ಅತ್ಯುತ್ತಮ ಆಹಾರ ಬ್ರಾಂಡ್‌ಗಳಲ್ಲಿ 4ನೇ ಸ್ಥಾನ!

ಕರ್ನಾಟಕದ ಹೆಮ್ಮೆಯ ನಂದಿನಿಗೆ ಮತ್ತೊಂದು ಗೌರವ – ಅತ್ಯುತ್ತಮ ಆಹಾರ ಬ್ರಾಂಡ್‌ಗಳಲ್ಲಿ 4ನೇ ಸ್ಥಾನ!

ಕರ್ನಾಟಕದ ಹೆಮ್ಮೆಯ ಬ್ರಾಂಡ್‌ಗಳಲ್ಲಿ ಒಂದಾದ ನಂದಿನಿ ಮುಕುಟಕ್ಕೆ ಮತ್ತೊಂದು ಗೌರವ ಸಿಕ್ಕಿದೆ. ಭಾರತೀಯ ಅತ್ಯುತ್ತಮ ಆಹಾರ ಬ್ರಾಂಡ್‌ಗಳಲ್ಲಿ ನಂದಿನಿ 4ನೇ ಸ್ಥಾನ ಪಡೆದಿದೆ.

ಇದನ್ನೂ ಓದಿ: ವಾಣಿಜ್ಯ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಬೆಲೆ ಭಾರಿ ಇಳಿಕೆ – ಸಿಲಿಂಡರ್‌ ದರ ಎಷ್ಟು?

ನಂದಿನಿ ಗತ್ತು ಮತ್ತೊಮ್ಮೆ ಎಲ್ಲರಿಗೂ ಗೊತ್ತಾಗಲಿದೆ. ವಿಶ್ವದ ಪ್ರಮುಖ ಬ್ರ್ಯಾಂಡ್ ಮೌಲ್ಯಮಾಪನ ಸಲಹಾ ಸಂಸ್ಥೆಯಾದ ಬ್ರಾಂಡ್ ಫೈನಾನ್ಸ್ ಬಿಡುಗಡೆ ಮಾಡಿದ 2025ರ ಶ್ರೇಯಾಂಕಗಳ ಪ್ರಕಾರ, ಕರ್ನಾಟಕ ಹಾಲು ಒಕ್ಕೂಟದ ಬ್ರ್ಯಾಂಡ್ ನಂದಿನಿ, ಆಹಾರ ಮತ್ತು ಪಾನೀಯಗಳ ವಿಭಾಗದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದೆ. ಹಾಗೆಯೇ ಬ್ರ್ಯಾಂಡ್‌ಗಳ ಮೌಲ್ಯಮಾಪನ ವಿಭಾಗದಲ್ಲಿ 2024ರಲ್ಲಿ 43ನೇ ಸ್ಥಾನದಲ್ಲಿದ್ದ ನಂದಿನಿ, ಇದೀಗ 2025ನೇ ಸಾಲಿನಲ್ಲಿ 38ನೇ ಸ್ಥಾನಕ್ಕೆ ಜಿಗಿದಿದೆ.

ನಂದಿನಿ 4ನೇ ಸ್ಥಾನ ಪಡೆದರೆ, ಪ್ರಮುಖ ಬ್ರ್ಯಾಂಡ್‌ಗಳಾದ ಅಮುಲ್ ಮೊದಲ ಸ್ಥಾನ, ಮದರ್ ಡೈರಿ 2ನೇ ಸ್ಥಾನ, ಬ್ರಿಟಾನಿಯಾ ಮೂರನೇ ಸ್ಥಾನ ಪಡೆದುಕೊಂಡಿದ್ದು, 4ನೇ ಸ್ಥಾನದಲ್ಲಿ ನಂದಿನಿ ಇದ್ದರೆ, ಡಾಬರ್ 5ನೇ ಸ್ಥಾನ ಪಡೆದುಕೊಂಡಿದೆ. ದೇಶಾದ್ಯಂತ ಮನೆ ಮಾತಾಗಿರುವ ನಂದಿನಿ ಕರ್ನಾಟಕ ಮೂಲದ ಡೈರಿ ಸಹಕಾರಿ ಸಂಸ್ಥೆ ನಂದಿನಿ, ಐದನೇ ಸ್ಥಾನದಲ್ಲಿದ್ದ ಡಾಬರ್ ಅನ್ನು ಸೋಲಿಸುವ ಮೂಲಕ ನಾಲ್ಕನೇ ಬಲಿಷ್ಠ ಭಾರತೀಯ ಉನ್ನತ ಆಹಾರ ಬ್ರಾಂಡ್ ಆಗಿ ಹೊರಹೊಮ್ಮಿತು.

Sulekha