ನಂದಿನಿ ಗ್ರಾಹಕರಿಗೆ ದರ ಏರಿಕೆ ಬರೆ- ಹಾಲು, ಮೊಸರಿಗೆ 3 ರೂ ಏರಿಕೆ!

ನಂದಿನಿ ಗ್ರಾಹಕರಿಗೆ ದರ ಏರಿಕೆ ಬರೆ- ಹಾಲು, ಮೊಸರಿಗೆ 3 ರೂ ಏರಿಕೆ!

ಬೆಂಗಳೂರು: ನಂದಿನಿ ಹಾಲು ಮೊಸರು ಮಾರಾಟ ದರವನ್ನು ಲೀಟರ್ ಗೆ 3 ರೂ. ಹೆಚ್ಚಿಸಲು ಕೆಎಂಎಫ್ ಆದೇಶ ಹೊರಡಿಸಿದ್ದು, ಇಂದು (ನ.14) ಮಧ್ಯರಾತ್ರಿಯಿಂದಲೇ ಜಾರಿಗೆ ಎಂದು ತಿಳಿಸಿದೆ.

ಇದನ್ನೂ ಓದಿ:  ಟಾಟಾ ಸನ್ಸ್ ವಿಮಾನಯಾನ ಸಂಸ್ಥೆಗಳ ವಿಲೀನ ಪ್ರಕ್ರಿಯೆ ಶೀಘ್ರದಲ್ಲೇ ಆರಂಭ!

ಶೀಘ್ರದಲ್ಲೇ ನಂದಿನಿ ಹಾಲಿನ ದರವನ್ನು ಏರಿಕೆ ಮಾಡುವುದಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ 9ಅ.31) ರಂದು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಅದರಂತೆ ಪ್ರತಿ ಲೀಟರ್ ಹಾಲು, ಮೊಸರಿಗೆ 3 ರೂ ದರ ಹೆಚ್ಚಳ ಮಾಡಲಾಗಿದೆ. ಇನ್ನು ಹೆಚ್ಚಳ ಮಾಡಲಾದ ದರವನ್ನು, ಪ್ರೋತ್ಸಾಹ ಧನದ ರೂಪದಲ್ಲಿ ರೈತರಿಗೆ ವರ್ಗಾವಣೆ ಮಾಡಲಾಗುವುದು ಎಂದು ಕೆಎಂಎಫ್ ತಿಳಿಸಿದೆ. ಈ ಕುರಿತ

ಪರಿಷ್ಕೃತ ದರ ಪಟ್ಟಿ

ಟೋನ್ಡ್‌ ಹಾಲಿನ ದರ ಪ್ರಸ್ತುತ ಲೀಟರ್‌ಗೆ 37 ರುಪಾಯಿ ಇದ್ದು, 40 ರೂಗೆ ಹೆಚ್ಚಳ ಆಗಿದೆ.

ಹೋಮೋಜಿನೈಸ್ಡ್‌ ಟೋನ್ಡ್ ಹಾಲಿನ ದರ 38 ರೂಪಾಯಿಯಿಂದ 41 ಕ್ಕೆ ಹೆಚ್ಚಳ

ಹೋಮೋಜಿನೈಸ್ಡ್‌ ಹಸುವಿನ ಹಾಲಿನ ದರ 42 ರಿಂದ 45 ಕ್ಕೆ ಹೆಚ್ಚಳ

ಸ್ಪೆಷಲ್ ಹಾಲು 43 ರಿಂದ 46 ಕ್ಕೆ ಹೆಚ್ಚಳ

ಶುಭಂ ಹಾಲು 43 ರಿಂದ 46 ಕ್ಕೆ ಹೆಚ್ಚಳ

ಹೋಮೋಜಿನೈಸ್ಡ್‌ ಸ್ಟಾಂಡರ್‌ಡೈಸ್ಡರ್‌ ಹಾಲು 44ರಿಂದ 47ಕ್ಕೆ ಏರಿದೆ.

ಸಮೃದ್ಧಿ ಹಾಲಿನ ದರ 48 ರಿಂದ 51 ರೂಪಾಯಿ ಆಗಿದ್ದು, ಸಂತೃಪ್ತಿ ಹೋಮೋಜಿನೈಸ್ಡ್‌ ಹಾಲು 50 ರಿಂದ 53 ರೂಪಾಯಿಗೆ ಏರಿಕೆ ಆಗಿದೆ. ಇನ್ನು ಡಬಲ್‌ ಟೋನ್ಡ್‌ ಹಾಲು 36 ರಿಂದ 39 ರೂಪಾಯಿ ಆದ್ರೆ, ಒಂದು ಕೆಜಿ ಮೊಸರಿನ ಬೆಲೆ 45 ರಿಂದ 48 ರೂಪಾಯಿಗೆ ಏರಿಕೆ ಆಗಿದೆ.

suddiyaana