ಬೆಚ್ಚಿ ಬಿದ್ವಾ ಪ್ರತಿಷ್ಠಿತ ಹಾಲಿನ ಬ್ರ್ಯಾಂಡ್ಸ್?.. ದಿಲ್ಲಿ ಮಾರ್ಕೆಟ್ನಲ್ಲಿ KMF ಟಾರ್ಗೆಟ್! – ಗ್ರಾಹಕರ ಕೈಗೆ ‘ನಂದಿನಿ’ ಸೇರದಂತೆ ಕುತಂತ್ರ
ಒಬ್ಬ ಬೆಳೆತಾನೆ ಅಂದ್ರೆ ಕಾಲು ಎಳೆಯೋಕೆ ತುಂಬಾ ಜನ ಇರ್ತಾರೆ.. ಅದು ನಮ್ಮ ದೇಶದಲ್ಲಿ ಸ್ವಲ್ಪ ಜಾಸ್ತಿನೇ.. ನಮ್ಮ ಮನೆಯಲ್ಲ ಇರೋದ್ ಅಕ್ಕಪಕ್ಕದ ಮನೆಯವರು ತಂದ್ರೆ ಹೊಟ್ಟೆ ಉರಿಸಿಕೊಳ್ಳುವುದು.. ನಮ್ಮಕ್ಕಿಂತ ಬೇರೆಯವರು ಹೆಚ್ಚು ಬೆಳೆಯ ಬಾರದು ಅಂತಾ ಅಡ್ಡಿ ಮಾಡೋದು.. ಅವನಿಂದ ನಮ್ಮ ಲಾಭಕ್ಕೆ ಕುತ್ತು ಬರುತ್ತೆ ಎಂದಾಗ ಅದನ್ನ ಹಾಳು ಮಾಡೋದು ಜನರ ಕೆಟ್ಟ ಬುದ್ದಿ. ಈಗ ಕೆಲ ನೀಚರ ಕಣ್ಣು ನಮ್ಮ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್ ಆದ ನಂದಿನ ಮೇಲೆ ಬಿದ್ದಿದೆ. ದೇಶ, ವಿದೇಶದಲ್ಲಿ ಹೆಸರು ಮಾಡಿರೋ ನಂದಿನ ಬ್ರ್ಯಾಂಡ್‌ನ ಹೆಸರು ಕೆಡಿಸುವ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: IND Vs AUS.. ಇಬ್ಬರು ಡ್ರಾಪ್! – 2ನೇ ಪಂದ್ಯಕ್ಕೆ KL ಸ್ಲಾಟ್ ಚೇಂಜ್
ದೆಹಲಿಯಲ್ಲಿ ನಂದಿನ ಹಾಲಿಗೆ ಹೊಸ ಸಂಕಷ್ಟ
ನಂದಿನಿ.. ಕರ್ನಾಟಕದ ಪ್ರತಿಷ್ಟಿತಿ ಹಾಲಿನ ಬ್ರ್ಯಾಂಡ್.. ವಿಶ್ವ ಮಟ್ಟದಲ್ಲಿ ಗುರುಸಿಕೊಂಡಿರುವು KMFನ ನಂದಿನಿ, ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ನಮ್ಮ ರಾಜ್ಯದ ‘ನಂದಿನಿ’ ಹಾಲಿನ ವಹಿವಾಟಿಗೆ ಉತ್ತರ ಭಾರತದ ಪ್ರತಿಷ್ಠಿತ ಹಾಲಿನ ಬ್ರ್ಯಾಂಡ್ಗಳು ಅಡ್ಡಗಾಲು ಹಾಕಿವೆ ಅನ್ನೋ ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ. ನಂದಿನಿ ಹಾಲು ಸ್ಥಳೀಯ ಗ್ರಾಹಕರ ಕೈಸೇರದಂತೆ ವ್ಯವಸ್ಥಿತ ಪಿತೂರಿ ನಡೆಸಿವೆ. ಗುಜರಾತ್ ಹಾಗೂ ಅಕ್ಕಪಕ್ಕದ ರಾಜ್ಯಗಳ ಹಾಲು ಒಕ್ಕೂಟಗಳು ಹೊಸದಿಲ್ಲಿ ಮಾರುಕಟ್ಟೆಯಲ್ಲಿ ಈಗಾಗಲೇ ಹೆಚ್ಚಿನ ಪ್ರಾಬಲ್ಯ ಹೊಂದಿವೆ. ಈ ಮಧ್ಯೆ, ಕರ್ನಾಟಕ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ಅಂದ್ರೆ ಕೆಎಂಎಫ್ ನ.21ರಂದು ಹೊಸದಿಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಆರಂಭಿಸಿದೆ. ಹಲಿ ಮಾರುಕಟ್ಟೆಯಲ್ಲಿ ನಂದಿನಿ ದರ್ಬಾರ್ ನಿಲ್ಲಿಸಲು ಪಿತೂರಿ ಶುರುವಾಗಿದೆ
ನಂದಿನಿ ಹಾಲಿನ ಮಾರಾಟಕ್ಕೆ ತೆರೆಮರೆಯಲ್ಲೇ ತಡೆ..!
ಕೆಎಂಎಫ್ ವ್ಯಾಪ್ತಿಯಲ್ಲಿ 16 ಜಿಲ್ಲಾಸಹಕಾರ ಹಾಲು ಉತ್ಪಾದಕರ ಒಕ್ಕೂಟಗಳಿದ್ದು, ರಾಜ್ಯದಲ್ಲಿ ದೈನಂದಿನ ಹಾಲಿನ ಸಂಗ್ರಹಣೆ ಪ್ರಮಾಣವು ಕೋಟಿ ಲೀಟರ್ನ ಗಡಿ ದಾಟಿದೆ. ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಹಾಲು ಸಂಗ್ರಹಣೆ ಆಗುತ್ತಿದ್ದು, ಹೊಸದಿಲ್ಲಿಯಲ್ಲೂ ಹಾಲಿನ ವಹಿವಾಟು ಆರಂಭಿಸಿದೆ. ಕೆಎಂಎಫ್ನಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಉತ್ತರ ಭಾರತದ ಹಾಲು ಒಕ್ಕೂಟಗಳು ಕರುನಾಡಿನ ನಂದಿನಿ ಹಾಲಿನ ಮಾರಾಟಕ್ಕೆ ತೆರೆಮರೆಯಲ್ಲೇ ತಡೆಯೊಡ್ಡುತ್ತಿವೆ.
ಕೆಎಂಎಫ್‌ನಿಂದ ಹೊಸದಿಲ್ಲಿ, ಹರಿಯಾಣ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಆರಂಭಿಕ ಹಂತದಲ್ಲಿ ಟ್ಯಾಂಕರ್‌ಗಳ ಮೂಲಕ 2.50 ಲಕ್ಷ ಲೀ. ಹಾಲು ಕಳುಹಿಸುತ್ತಿದೆ. ಮುಂದಿನ ದಿನಗಳಲ್ಲಿ ದೆಹಲಿಗೆ ಒಟ್ಟು 5 ಲಕ್ಷ ಲೀಟರ್ ಹಾಲು ಪೂರೈಸುವ ಗುರಿಯನ್ನು ಹೊಂದಿದೆ. ಹೊಸದಿಲ್ಲಿ ಹೊರ ವಲಯದಲ್ಲಿ ನಂದಿನಿ ಹಾಲನ್ನು ಪ್ಯಾಕಿಂಗ್ ಮಾಡಿಸಿ, ಸ್ಥಳೀಯ ಡೀಲರ್‌ಗಳ ಮೂಲಕ ಮಾರಾಟ ಮಾಡಿಸಲಾಗುತ್ತಿದೆ. ಇದರಿಂದ ವಹಿವಾಟು ಕುಸಿಯುವ ಭೀತಿಯನ್ನ ಆ ಭಾಗದ ಹಾಲು ಒಕ್ಕೂಟಗಳು ಎದುರಿಸುತ್ತಿವೆ. ನಂದಿನಿ ಹಾಲು ಹೊಸದಿಲ್ಲಿಯ ಗ್ರಾಹಕರ ಕೈಸೇರದಂತೆ ಪ್ರತಿನಿತ್ಯ ತಾವೇ ಸ್ಥಳೀಯ ಡೀಲರ್ಗಳಿಂದ ನಂದಿನಿ ಹಾಲನ್ನು ಖರೀದಿಸುತ್ತಿವೆ. ಪ್ರತಿಷ್ಠಿತ ಹಾಲಿನ ಬ್ರ್ಯಾಂಡ್ನ ಒಕ್ಕೂಟವೊಂದು ನಂದಿನಿ ಹಾಲಿನ ಖರೀದಿ ಉದ್ದೇಶಕ್ಕಾಗಿಯೇ ಹೊಸದಿಲ್ಲಿ ಹಾಗೂ ಸುತ್ತಮುತ್ತ 300ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿದೆಯಂತೆ. ಆ ಸಿಬ್ಬಂದಿಯು ಪ್ರತಿನಿತ್ಯ ನಂದಿನಿ ಹಾಲಿನ ಪ್ಯಾಕೆಟ್ಗಳನ್ನು ಖರೀದಿಸಿ, ರಸ್ತೆಗೆ ಚೆಲ್ಲುತ್ತಿದ್ದಾರೆ. ಆ ಮೂಲಕ ದೆಹಲಿ ಜನರಿಗೆ ನಂದಿನಿ ಹಾಲು, ಮೊಸರು ಸಿಗದಂತೆ ಕುತಂತ್ರ ಮಾಡ್ತಿದ್ದಾರೆ ಎನ್ನಲಾಗ್ತಿದೆ.
ನಿಮಗೆ ಒಂದು ಡೌಟ್ ಬರಬಹುದು.. ಅಲ್ಲ ಅವರಿಗೆ ತಲೆ ಕೆಟ್ಟಿದ್ಯಾ, ಅವರ ಕೈಯಿಂದ ದುಡ್ಡು ಹಾಕಿ ಹಾಲನ್ನ ಖರೀದಿ ಮಾಡಿ ರಸ್ತೆಗೆ ಚೆಲ್ಲಿದ್ರೆ ಲಾಸ್ ಆಗಲ್ವಾ ಅಂತ..ಇದೇ ಅವರ ಲಾಜಿಕ್.. ಪ್ರಾರಂಭದಲ್ಲಿ ನಂದಿನ ಬ್ರ್ಯಾಂಡ್ನ ಹೆಸರನ್ನ ಹಾಳು ಮಾಡಿದ್ರೆ, ಮುಂದೆ ಅವರಿಗೆ ಲಾಭ ಆಗುತ್ತೆ.. ಒಂದು ವೇಳೆ ನಂದಿನ ಬ್ರ್ಯಾಂಡ್ ಹೊಸದಿಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ರೆ, ಈಗ ಇರೋ ಕಂಪನಿಗಳ ಮಾರ್ಕೆಟ್ ಬಿದ್ದು ಹೋಗುತ್ತೆ.. ಹೀಗಾಗಿ ಈಗಲೇ ಜನರ ಕೈಗೆ ನಂದಿನ ಸೇರದಂತೆ ಮಾಡಿ, ಹೊಸ ದೆಹಲಿ ಮಾರ್ಕೆಟ್ನಿಂದ KMF ನ ಹೋರ ಹಾಕುವ ಹುನ್ನಾರ ನಡೆಯುತ್ತಿದೆ. ಯಾರ್ ಏನೇ ಮಾಡಿದ್ರೂ ಕರುನಾಡಿನ ಹೆಮ್ಮೆಯ ಬ್ರ್ಯಾಂಡ್ ಆದ ನಂದಿನಿಯನ್ನ ಯಾರು ಅಲ್ಲಾಡಿಸೋಕೆ ಆಗಲ್ಲ ಅನ್ನೋದೆ ನಿಜ.