ನಂದಿನಿ ಹಾಲಿಗೆ ₹10 ಏರಿಕೆ? – ಇಂದು ಸರ್ಕಾರದ ಮಹತ್ವದ ಸಭೆ!

ನಂದಿನಿ ಹಾಲಿಗೆ ₹10 ಏರಿಕೆ? –  ಇಂದು ಸರ್ಕಾರದ ಮಹತ್ವದ ಸಭೆ!

ಕರ್ನಾಟಕದ ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ಎದುರಾಗುವ ಸಾಧ್ಯತೆ ಇದೆ. ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ 10 ರೂಪಾಯಿವರೆಗೆ ಹೆಚ್ಚಳವಾಗುವ ಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ಸಂಬಂಧ ಇಂದು ಮಹತ್ವದ ಸಭೆ ನಡೆಯಲಿದೆ.

ರಾಜ್ಯದ ವಿವಿಧ ಹಾಲು ಒಕ್ಕೂಟಗಳ ಪ್ರತಿನಿಧಿಗಳು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಹಾಲಿನ ದರ ಪರಿಷ್ಕರಣೆ ಕುರಿತು ಚರ್ಚೆ ನಡೆಸಲಿದ್ದಾರೆ. ಹಾಲು ಉತ್ಪಾದಕರಿಗೆ ಹೆಚ್ಚಿನ ಬೆಲೆ ನೀಡುವುದು, ಹಾಲು ಉತ್ಪಾದನೆಗೆ ಆಗುತ್ತಿರುವ ವೆಚ್ಚ ಹೆಚ್ಚಳ ಸೇರಿದಂತೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ದರ ಪರಿಷ್ಕರಣೆಗೆ ಒಕ್ಕೂಟಗಳು ಮನವಿ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ:ಇನ್ನು ಡೇಟಾ ಬೇಡ! ಕರೆ + SMSಗೆ ಮಾತ್ರ ರೀಚಾರ್ಜ್! – ಏರ್‌ಟೈಲ್‌, ಜಿಯೋ ಮತ್ತು VI ಬಳಕೆದಾರರಿಗೆ ಹೊಸ ಪ್ಲಾನ್ 

ಒಂದು ವೇಳೆ ಸರ್ಕಾರ ದರ ಏರಿಕೆಗೆ ಸಮ್ಮತಿ ನೀಡಿದರೆ, ನಂದಿನಿ ಬ್ರ್ಯಾಂಡ್‌ನ ಹಾಲಿನ ದರದಲ್ಲಿ ಬದಲಾವಣೆಯಾಗಬಹುದು. ಹಾಲಿನ ಜೊತೆಗೆ ಮೊಸರು ಸೇರಿದಂತೆ ಹಾಲಿನಿಂದ ತಯಾರಾಗುವ ಕೆಲವು ಉತ್ಪನ್ನಗಳ ಬೆಲೆಯ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.

ಆದರೆ ಸದ್ಯಕ್ಕೆ ದರ ಏರಿಕೆ ಅಂತಿಮವಾಗಿಲ್ಲ. ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುವ ಸಭೆ ಮತ್ತು ಸರ್ಕಾರದ ನಿರ್ಧಾರದ ಬಳಿಕವಷ್ಟೇ ಗ್ರಾಹಕರು ಎಷ್ಟು ಹೆಚ್ಚುವರಿ ಹಣ ಪಾವತಿಸಬೇಕು ಎಂಬುದು ಸ್ಪಷ್ಟವಾಗಲಿದೆ.

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತೊಂದರೆ ಅನುಭವಿಸುತ್ತಿರುವ ಗ್ರಾಹಕರಿಗೆ ಹಾಲಿನ ದರ ಹೆಚ್ಚಳವಾದರೆ, ಮಾಸಿಕ ಖರ್ಚಿನ ಮೇಲೂ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ಇಂದಿನ ಸಭೆಯ ನಿರ್ಧಾರವೇ ಎಲ್ಲರ ಗಮನ ಸೆಳೆದಿದೆ.

Kishor KV

Leave a Reply

Your email address will not be published. Required fields are marked *