ನಂದಿನಿ ದೇಸಿ ಹಾಲಿನ ಬೆಲೆ ದಿಢೀರ್ ಏರಿಕೆ – ಗ್ರಾಹಕರಿಗೆ ಕೆಎಂಎಫ್ ಶಾಕ್!

ಜಿಎಸ್‌ಟಿ ಇಳಿಕೆಯ ಸಂತಸದಲ್ಲಿದ್ದ ಗ್ರಾಹಕರಿಗೆ ಕೆಎಂಎಫ್ ಶಾಕ್ ಕೊಟ್ಟಿದೆ. ದೇಸಿ ಹಾಲಿನ ಪ್ಯಾಕೆಟ್ ಬೆಲೆಯನ್ನು ಹೆಚ್ಚಿಸಲಾಗಿದೆ. ಮಂಗಳವಾರ ಬೆಳಗ್ಗೆ ಹಾಲು ಖರೀದಿಗೆ ಹೋದ ಗ್ರಾಹಕರು ದೇಸಿ ಹಾಲಿನ ಬೆಲೆಯಲ್ಲಿ ಏರಿಕೆಯಾಗಿರುವುದಕ್ಕೆ ಕಂಗಾಲಾಗಿದ್ದಾರೆ.
ಇದನ್ನೂ ಓದಿ: ಜಾತಿ ಗಣತಿ ಸಮೀಕ್ಷೆಗೆ ಹಿನ್ನಡೆಯಾಯ್ತಾ? – ಟಾರ್ಗೆಟ್ 20 ಲಕ್ಷ.. ನಡೆದಿದ್ದು 10 ಸಾವಿರ ಮಂದಿ ಗಣತಿ
ನಂದಿನಿ ದೇಸಿ ಹಾಲು ಬಳಸುವವರಿಗೆ ದರ ಏರಿಕೆ ಬಿಸಿ ತಟ್ಟಿದೆ. ಏಕಾಏಕಿ ದೇಸಿ ಹಾಲಿನ ಬೆಲೆ ಏರಿಕೆ ಆಗಿದ್ದು, 1 ಲೀಟರ್ ಹಾಲಿಗೆ 40 ರೂಪಾಯಿ ಏರಿಕೆ ಮಾಡಲಾಗಿದೆ. ಮಂಗಳವಾರದಿಂದಲೇ ಹೊಸ ದರ ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ಮಾತ್ರವಲ್ಲ ಹೊರ ರಾಜ್ಯಗಳಲ್ಲೂ ನಂದಿನಿ ಹಾಲಿಗೆ ಗ್ರಾಹಕರು ಹೆಚ್ಚಿದ್ದಾರೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಸಂಸ್ಥೆ ಹಾಲಿನಲ್ಲೂ ವಿವಿಧ ವೆರೈಟಿಗಳನ್ನು ಪರಿಚರಿಸಿದ್ದು, ಅವುಗಳಲ್ಲಿ ದೇಸಿ ಹಾಲಿನ ಪ್ಯಾಕೆಟ್ ಬೆಲೆಯನ್ನು ಹೆಚ್ಚಿಸಲಾಗಿದೆ.
ಒಂದು ಲೀಟರ್ ದೇಸಿ ಹಾಲು 120 ರೂಪಾಯಿ ಇದೆ. ಅರ್ಧ ಲೀಟರ್ ದೇಸಿ ಹಾಲಿಗೆ 60 ರೂ ಇದೆ. ಈ ಮೊದಲು ಒಂದು ಲೀಟರ್ ದೇಸಿ ಹಾಲು 80 ರೂ. ಇತ್ತು. ಅರ್ಧ ಲೀಟರ್ 40 ರೂ. ಇತ್ತು. ಇದೀಗ ಏಕಾಏಕಿ ಕೆಎಂಎಫ್ 40 ರೂಪಾಯಿ ಹೆಚ್ಚಳ ಮಾಡಿದೆ. ದೇಸಿ ಹಸು ಸಾಕಾಣಿಕೆ ಉತ್ತೇಜಿಸಲು ಕೆಎಂಎಫ್ ಈ ಹಾಲಿನ ಮಾರಾಟಕ್ಕೆ ಮುಂದಾಗಿತ್ತು. ಬೆಂಗಳೂರು ಡೈರಿಗೆ ಪ್ರತಿದಿನ 3 ಸಾವಿರ ಲೀ. ದೇಸಿ ಹಾಲು ಪೂರೈಕೆ ಮಾಡಲಾಗ್ತಿದೆ ಎಂದು ವರದಿ ಆಗಿದೆ.
ದೇಸಿ ಹಸು ದಿನಕ್ಕೆ 1-2 ಲೀಟರ್ ಗರಿಷ್ಟ ಹಾಲು ಕೊಡುತ್ತೆ. ದೇಸಿ ಹಸು ಹಾಲಿಗೆ ಡಿಮ್ಯಾಂಡ್ ಹೆಚ್ಚಿದೆ. ಪೂರೈಕೆ ಕಡಿಮೆ ಆದ ಕಾರಣ ಅನಿವಾರ್ಯವಾಗಿ ದರ ಏರಿಕೆ ಮಾಡಲಾಗಿದೆ. ಶೇ. 90ರಷ್ಟು ಹಣವನ್ನ ದೇಸಿ ಹಸು ರೈತರಿಗೆ ಕೊಡಲಾಗುತ್ತಿತ್ತು ಎಂದು ಕೆಎಂಎಫ್ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ.

ನೋಡಿರಿ

