300 ಸಂಚಿಕೆ ಪೂರೈಸಿದ ನಂದಗೋಕುಲ – ವಲ್ಲಭನಿಗೆ ಆರತಿ ಬೆಳಗಿ ಮನೆಗೆ ಬರಮಾಡಿಕೊಂಡ ಅಣ್ಣಂದಿರು

‘ನಂದಗೋಕುಲ ಧಾರಾವಾಹಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಈ ಸೀರಿಯಲ್ 300 ಸಂಚಿಕೆ ಪೂರೈಸಿದೆ. ಇನ್ನು ಸೀರಿಯಲ್ನಲ್ಲಿ ಪೊಲೀಸ್ ಸ್ಟೇಷನ್ನಿಂದ ಬಂದ ವಲ್ಲಭನಿಗೆ ಆರತಿ ಬೆಳಗಿ ಮನೆಗೆ ಬರಮಾಡಿಕೊಳ್ಳಲಾಗಿದೆ. ಒಂದು ರೀತಿಯಲ್ಲಿ ವಿಭಿನ್ನ ಕಥೆ. ಜೊತೆಗೆ ಕುಟುಂಬದ ಮೌಲ್ಯಗಳನ್ನು ತಿಳಿಸುವ ಈ ಸೀರಿಯಲ್ ವೀಕ್ಷಕರ ಮನಸಿಗೆ ಹತ್ತಿರವಾಗಿದೆ.
ಇದನ್ನೂ ಓದಿ:ಬಿಗ್ಬಾಸ್ ಶೋ ಆರಂಭಕ್ಕೆ ಡೇಟ್ ಫಿಕ್ಸ್ – ಕಿಚ್ಚನ ಅಬ್ಬರಕ್ಕೆ ಶುರುವಾಯ್ತು ಕೌಂಟ್ಡೌನ್
ನಂದಗೋಕುಲ ಸೀರಿಯಲ್ ನೋಡಿದವರಿಗೆ ಇದು ನಮ್ಮನೆಯ ಕಥೆ ಅಂತಾ ಅನಿಸುತ್ತದೆ. ಯಾಕೆಂದರೆ, ಮನರಂಜನೆ ಜೊತೆ ಬದುಕಿನ ಮೌಲ್ಯ ತಿಳಿಸಿಕೊಡುವಲ್ಲಿ ಸೀರಿಯಲ್ ತಂಡ ಯಶಸ್ವಿಯಾಗಿದೆ. ಇದೀಗ ನಂದಗೋಕುಲ ಧಾರಾವಾಹಿ 300 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ ಸಂಭ್ರಮದಲ್ಲಿದೆ. ಈ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ನಿರ್ದೇಶಕದ ಶ್ರವಂತ್ ಸಂಭ್ರಮ ಹಂಚಿಕೊಂಡಿದ್ದಾರೆ. ಜೊತೆಗೆ ತನಗೆ ಜೊತೆಯಾಗಿ ನಿಂತ ಪತ್ನಿಯ ಬಗ್ಗೆ ಮೆಚ್ಚುಗೆಯ ಮಾತಾಡಿದ್ದಾರೆ. ನಂದಗೋಕುಲ ನನ್ನ ಜೀವನದ ಬಹು ದೊಡ್ಡ ಪಾತ್ರ ವಹಿಸಿದ ಧಾರಾವಾಹಿ. ಇದರ ಕಥೆಯನ್ನು ಮೊದಲು ಆಲಿಸಿ ಇದು ಯಶಸ್ಸು ಖಂಡಿತಾ ಕಾಣುತ್ತದೆ ಅಂತ ಮೊದಲ ಭರವಸೆ ಕೊಟ್ಟವಳು ನನ್ನ ಪತ್ನಿ ರಾಧಿಕಾ ಶ್ರವಂತ್. ಅಂದಿನಿಂದ ಇಲ್ಲಿಯವರೆಗೂ ಪ್ರತಿ ಹೆಜ್ಜೆಯಲ್ಲೂ ನನ್ನ ಕಷ್ಟಗಳನ್ನು ತನ್ನ ಕಷ್ಟ ಅಂದುಕೊಂಡಳು. ನನ್ನ ಗೆಲುವು ನನ್ನದು ಮಾತ್ರ ಅಲ್ಲ. ಅದು ನಿನ್ನದು ಕೂಡ. ಇಂದು ಜನರೆಲ್ಲಾರೂ ನೋಡಿ ಮೆಚ್ಚುತ್ತಿರುವ ಪಾತ್ರಗಳನ್ನ ಆಯ್ಕೆ ಮಾಡಿ ನಂದಗೋಕುಲದ ಕಥೆಯನ್ನು ಮತ್ತಷ್ಟು ಯಶಸ್ವೀ ಮಾಡಿದ ನನ್ನ ಪತ್ನಿ, ಸ್ನೇಹಿತೆ, ಹಿತೈಷಿಯಾದ ರಾಧಿಕಾ ಶ್ರವಂತ್ I Love You ನಿನ್ನ ಋಣದ ಭಾರ ನನ್ನ ಮೇಲಿದೆ ದೇವರೇ’ ಎಂದು ಬರೆದುಕೊಂಡಿದ್ದಾರೆ.
ಇನ್ನು ನಂದಗೋಕುಲ ಸೀರಿಯಲ್ ಕಥೆ ವಿಚಾರಕ್ಕೆ ಬಂದರೆ, ವಲ್ಲಭ ತನ್ನದಲ್ಲದ ತಪ್ಪಿಗೆ ಖಾಕಿ ಬಲೆಗೆ ಬಿದ್ದಿದ್ದ. ಪೊಲೀಸರು ಕೂಡಾ ಸರಿಯಾಗಿ ಹೊಡೆದಿದ್ದರು. ಪೊಲೀಸ್ ಸ್ಟೇಷನ್ಗೆ ಬಂದ ಅಪ್ಪ ನಂದನಿಗೆ ತನ್ನ ಮಗನ ನೋವು ಕಂಡು ನೋವಾಗುತ್ತದೆ. ನನ್ನ ಮಗ ಒಳ್ಳೆಯವನು ಬಿಟ್ಟುಬಿಡಿ ಎಂದು ನಂದ ಪೊಲೀಸರೆದುರು ಬೇಡಿಕೊಳ್ಳುತ್ತಾನೆ. ಇತ್ತ ವಲ್ಲಭನ ಅಣ್ಣಂದಿರಾದ ಕೇಶವ ಮತ್ತು ಮಾಧವ ಕಿಡ್ನ್ಯಾಪ್ ಆಗಿದ್ದಾಳೆ ಎಂದು ಹೇಳಿರುವ ಯುವತಿಯನ್ನು ಕಾಪಾಡಿ ಸತ್ಯ ಬಾಯಿಬಿಡಿಸುತ್ತಾರೆ. ನಿರಪರಾಧಿಯಾದ ವಲ್ಲಭನನ್ನು ಮನೆಗೆ ಕರೆತರುವಲ್ಲಿ ಯಶಸ್ವಿಯಾಗುತ್ತಾರೆ. ಇದು ಅಪ್ಪ ನಂದಕುಮಾರ್ ಗೆ ಹೆಮ್ಮೆಯಾಗುತ್ತದೆ. ವಲ್ಲಭನಿಗೆ ಆರತಿ ಬೆಳಗೆ ಮನೆಗೆ ಬರಮಾಡಿಕೊಳ್ಳುವಂತೆ ಕೇಶವ, ಮಾಧವನಿಗೆ ನಂದ ಹೇಳುತ್ತಾನೆ. ತನ್ನ ಮೂವರು ಮಕ್ಕಳು ತನ್ನ ಹೆಮ್ಮೆ ಎಂದು ಹೇಳಿಕೊಳ್ಳುವ ಅಪ್ಪ ನಂದಕುಮಾರ್ ನಟನೆಯಂತೂ ಅದ್ಭುತ. ತಾಯಿ ಪಾತ್ರಧಾರಿಯಾಗಿ ಅಣ-ತಾ ನಾಯ್ಡು ನಟನೆಯೂ ಸೂಪರ್. ಈ ಧಾರಾವಾಹಿ ಸಂಸಾರದ ಮೌಲ್ಯ, ಸಹೋದರರ ಒಗ್ಗಟ್ಟು, ಕುಟುಂಬದ ಒಗ್ಗಟ್ಟನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ನಂದಗೋಕುಲ ಧಾರಾವಾಹಿ ವೀಕ್ಷಕರ ಅಚ್ಚುಮೆಚ್ಚಿನ ಸೀರಿಯಲ್ ಆಗಿದೆ.

ನೋಡಿರಿ

