ʼಏನು ಹೇಳಲಿ ನಾನು ಹೊಸತರʼ.. – ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ ನಮ್ರತಾ, ಕಿಶನ್

ಬಿಗ್ ಬಾಸ್ ಸ್ಪರ್ಧಿ ನಮ್ರತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ಏನಾದರೊಂದು ಪೋಸ್ಟ್ ಹಾಕುತ್ತಲೇ ಇದ್ದಾರೆ. ಇದೀಗ ಬಿಗ್ ಬಾಸ್ ಮಾಜಿ ಸ್ಪರ್ಧಿ ಕಿಶನ್ ಬಿಳಗಲಿ ಜೊತೆ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದಾರೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: 10 ಟೀಮ್ಗಳ ಗಳ ಪೇಸ್ ಬೌಲಿಂಗ್ ಯುನಿಟ್ ಹೇಗಿದೆ? – ಎಷ್ಟು ಮಂದಿ ಫಾಸ್ಟ್ ಬೌಲರ್ಸ್ಗಳಿದ್ದಾರೆ?
ಕಿಶನ್ ಹಾಗೂ ನಮ್ರತಾ ಗೌಡ ಕಾಂಬಿನೇಷನ್ನಲ್ಲಿ ಹಲವು ಡ್ಯಾನ್ಸ್ಗಳು ಮೂಡಿ ಬಂದಿವೆ. ಇವರಿಬ್ಬರು ಆಗಾಗ ತಮ್ಮ ಡ್ಯಾನ್ಸ್ನ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಾ ಇರುತ್ತಾರೆ. ಇದೀಗ ಕಿಶನ್ ಹಾಗೂ ನಮ್ರತಾ ಗೌಡ ಯುವ ಸಿನಿಮಾದ ಕವಿತೆ ಕವಿತೆ ಹಾಡಿಗೆ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಏನು ಹೇಳಲಿ ನಾನು ಹೊಸತರ.. ಎಂದು ಕಿಶನ್ ಹಾಗೂ ನಮ್ರತಾ ಗೌಡ ಹಾಡುತ್ತಾ ಡ್ಯಾನ್ಸ್ ಮಾಡಿದ್ದಾರೆ. ಕ್ಯಾಂಡಲ್ ಹಿಡಿದು, ಡಿಮ್ ಲೈಟ್ನಲ್ಲಿ ರೊಮ್ಯಾಂಟಿಕ್ ಸ್ಟೆಪ್ ಹಾಕಿದ್ದಾರೆ.
ಕಿಶನ್ ಹಾಗೂ ನಮ್ರತಾ ಇಬ್ಬರಿಗೂ ಹಾಡಿನ ಬಗ್ಗೆ ವಿಶೇಷ ಪ್ರೀತಿ ಇದೆ. ಇವರು ಒಟ್ಟಾಗಿ ಹೆಜ್ಜೆ ಹಾಕಿದರೆ ಎಲ್ಲರ ಗಮನ ಅತ್ತ ಹೋಗೋದು ಪಕ್ಕಾ. ಈಗ ಅವರ ಹೊಸ ಡ್ಯಾನ್ಸ್ ಗಮನ ಸೆಳೆದಿದೆ. ಈ ಡ್ಯಾನ್ಸ್ಗೆ ಸಪ್ತಮಿ ಗೌಡ, ಹಿತಾ ಚಂದ್ರಶೇಖರ್ ಸೇರಿ ಅನೇಕ ಸೆಲೆಬ್ರಿಟಿಗಳು ಕಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.