ಕಾರ್ತಿಕ್​ನೇ ಬೇಕು.. ಮದುವೆ ಆಗಿ ಅಂತ ಕೂತ್ಕೋತಿನಿ ಆಗ್ತೀರಾ? – ಕಾರ್ತಿಕ್‌ ಬಳಿ ನೇರವಾಗಿ ಕೇಳಿದ ನಮೃತಾ!

ಕಾರ್ತಿಕ್​ನೇ ಬೇಕು.. ಮದುವೆ ಆಗಿ ಅಂತ ಕೂತ್ಕೋತಿನಿ ಆಗ್ತೀರಾ? – ಕಾರ್ತಿಕ್‌ ಬಳಿ ನೇರವಾಗಿ ಕೇಳಿದ ನಮೃತಾ!

ಬಿಗ್‌ಬಾಸ್ ಕನ್ನಡ 10ನೇ ಆವೃತ್ತಿಯು ಇದೀಗ ಅಂತಿಮ ಘಟ್ಟ ತಲುಪಿದೆ. ಇನ್ನು ಮೂರು ವಾರಗಳು ಮಾತ್ರ ಬಾಕಿ ಉಳಿದಿದ್ದು, ಆಟ ರೋಚಕತೆ ಪಡೆದುಕೊಂಡಿದೆ. ಬಿಗ್​ಬಾಸ್​ ಮನೆ ಎಂದರೆ ಅದರಲ್ಲಿ ಕಾದಾಟ, ಹೊಡೆದಾಟ, ಬಡಿದಾಟದ ತಾಣವೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಏನು ಬೇಕಾದರೂ ನಡೆಯುತ್ತದೆ. ಯಾವಾಗ ಯಾರ ಮೇಲೆ ಅಭಿಪ್ರಾಯ ಬದಲಾಗುತ್ತೆ ಅಂತಾ ಹೇಳಲು ಸಾಧ್ಯ ಇಲ್ಲ. ತುಂಬಾ ಕ್ಲೋಸ್‌ ಆಗಿದ್ದವರು ಯಾವಾಗ ತಿರುಗಿ ಬೀಳುತ್ತಾರೆ, ಶತ್ರುಗಳಂತೆ ಇದ್ದವರು ಯಾವಾಗ ಒಂದಾಗ್ತಾರೆ ಅಂತಾ ಹೇಳುವುದು ಕಷ್ಟ. ಇದೇ ಕಾರಣಕ್ಕೆ ಟಿಆರ್​ಪಿ ಕೂಡ ಹೆಚ್ಚಾಗುತ್ತದೆ. ಕಾರ್ತಿಕ್‌ನನ್ನು ಕಂಡು ಆಗಾಗ ಕೆಂಡಕಾರುತ್ತಿದ್ದ ನಮೃತಾ ಈಗ ತುಂಬಾ ಕ್ಲೋಸ್‌ ಆಗಲು ಪ್ರಯತ್ನಿಸುತ್ತಿದ್ದಾರೆ. ಇದೀಗ ಕಾರ್ತಿಕ್‌ ಬಳಿ ನಮೃತಾ ಪ್ರಶ್ನೆಯೊಂದನ್ನು ಕೇಳಿದ್ದಾರೆ. ‘15 ದಿನದಲ್ಲಿ ಲವ್ ಆಗಿ, ಕಾರ್ತಿಕ್​ನೇ ಬೇಕು ಅಂತ ಅತ್ತು ಕರೆದರೆ ಏನು ಮಾಡ್ತೀರಿ? ಮದುವೆ ಆಗಿ ಅಂತ ಕೂತ್ಕೋತಿನಿ ಆಗ್ತೀರಾ’ ಎಂದು ನಮ್ರತಾ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: 3 ವರ್ಷಗಳ ನಂತರ ಅಪ್ಪ ಅಮ್ಮನ ಸಮಾಗಮ – ಹೆತ್ತವರ ನೋಡಿ ಗಳಗಳನೆ ಕಣ್ಣೀರು ಸುರಿಸಿದ ಡ್ರೋನ್ ಪ್ರತಾಪ್

ಹೌದು, ಸದಾ ಕಾಲ ಕೋಪ, ಕಾದಾಟ, ಹೊಡೆದಾಟ, ಬಡಿದಾಟದಿಂದ ಕೂಡಿರುತ್ತಿದ್ದ ಬಿಗ್‌ಬಾಸ್‌ ಮನೆ ಈ ವಾರ ಕೊಂಚ ಶಾಂತವಾಗಿತ್ತು. ಈ ವಾರ ಫ್ಯಾಮಿಲಿ ರೌಂಡ್‌ ಆಗಿದ್ದರಿಂದಾಗಿ ಸ್ಪರ್ಧಿಗಳ ಮನೆಯವರು ದೊಡ್ಮನೆಗೆ ಬಂದು ಹೋಗಿದ್ದಾರೆ. ​ಈ ವಾರ ಬಿಗ್‌ ಬಾಸ್‌ Paus, play ಟಾಸ್ಕ್‌ನೀಡಿ  ಸ್ಪರ್ಧಿಗಳನ್ನು ಗೋಳು ಹೊಯ್ದುಕೊಂಡಿತ್ತು. ಇನ್ನು ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಕಾರ್ತಿಕ್  ಅವರು ಹೆಚ್ಚು ಹೈಲೈಟ್ ಆಗುತ್ತಿದ್ದಾರೆ. ನಮ್ರತಾ ಕೂಡ ಇತ್ತೀಚೆಗೆ ಮೆಚ್ಚುಗೆ ಪಡೆಯುತ್ತಿದ್ದಾರೆ. ಕಾರ್ತಿಕ್ ಅವರು ಮೊದಲಿನಿಂದಲೂ ನಮ್ರತಾ ಜೊತೆ ಕ್ಲೋಸ್ ಆಗೋಕೆ ಪ್ರಯತ್ನಿಸಿದ್ದರು. ಸ್ನೇಹಿತ್ ಹೋದ ಮೇಲೆ ಇಬ್ಬರ ಮಧ್ಯೆ ಒಳ್ಳೆಯ ರ್ಯಾಪೋ ಬೆಳೆಯುತ್ತಿದೆ. ಕಾರ್ತಿಕ್ ಹಾಗೂ ನಮ್ರತಾ ಕ್ಲೋಸ್ ಆಗುತ್ತಿದ್ದಾರೆ. ಈಗ ಇಬ್ಬರೂ ಓಪನ್ ಆಗಿ ಫ್ಲರ್ಟ್ ಮಾಡಿದ್ದಾರೆ. ಇದು ಸಖತ್ ಫನ್ನಿ ಆಗಿತ್ತು.

ನಮ್ರತಾ ಜೊತೆ ಡೇಟ್​ಗೆ ಹೋಗಬೇಕು ಎಂಬುದು ಕಾರ್ತಿಕ್ ಕನಸು. ಮೊದಲಿನಿಂದಲೂ ಈ ಬಗ್ಗೆ ಮಾತನಾಡುತ್ತಲೇ ಬರುತ್ತಿದ್ದಾರೆ. ಇದನ್ನು ನಮ್ರತಾ ಹಾಗೂ ಕಾರ್ತಿಕ್ ಇಬ್ಬರೂ ಫನ್ ಆಗಿಯೇ ಸ್ವೀಕರಿಸಿದ್ದಾರೆ. ತಮ್ಮ ತಾಯಿ ಬಂದಾಗಲೂ ಕಾರ್ತಿಕ್ ಈ ವಿಚಾರ ತೆಗೆದಿದ್ದರು. ‘ನಾನು ನಮ್ರತಾ ಜೊತೆ ಡೇಟ್​ಗೆ ಹೋಗಲೇ’ ಎಂದು ಕೇಳಿದ್ದರು. ಈಗ ಕಾರ್ತಿಕ್ ಹಾಗೂ ನಮ್ರತಾ ಆಡಿದ ಮಾತು ಗಮನ ಸೆಳೆಯುತ್ತಿದೆ.

ಕಾರ್ತಿಕ್ ಅವರು ಅಡುಗೆ ಮನೆಗೆ ಹೊರಟಿದ್ದರು. ಈ ವೇಳೆ ಕಾರ್ತಿಕ್​ ಅವರನ್ನು ನಮ್ರತಾ ಕರೆದರು. ‘ಐದು ನಿಮಿಷ ಇಲ್ಲಿ ಬನ್ನಿ. ಕುಳಿತು ನನ್ನನ್ನು ನೋಡಿ’ ಎಂದಿದ್ದಾರೆ. ಕಾರ್ತಿಕ್ ಈ ಮಾತನ್ನು ಗಂಭೀರವಾಗಿ ಸ್ವೀಕರಿಸಿದ್ದಾರೆ. ಜೊತೆಗೆ ನಮ್ರತಾ ಇದ್ದಲ್ಲಿ ಹೋಗಿ ಕುಳಿತಿದ್ದಾರೆ. ‘ನಾನು ಜೋಕ್ ಮಾಡಿದ್ದು. ನೀವು ಗಂಭೀರವಾಗಿ ಸ್ವೀಕರಿಸಿದ್ರಲ್ಲ’ ಎಂದರು ನಮ್ರತಾ.

‘ರೋಗಿ ಬಯಸಿದ್ದು ಹಾಲು ಅನ್ನ.. ವೈದ್ಯ ಹೇಳಿದ್ದೂ ಅದೇ. ಸುಮ್ನೆ ಹೋಗ್ತಾ ಇದ್ದವನ್ನ ಕರೆದ್ರೆ ಏನು ಮಾಡೋದು’ ಎಂದು ಕಾರ್ತಿಕ್ ಕೇಳಿದರು. ‘15 ದಿನದಲ್ಲಿ ಲವ್ ಆಗಿ, ಕಾರ್ತಿಕ್​ನೇ ಬೇಕು ಅಂತ ಅತ್ತು ಕರೆದರೆ ಏನು ಮಾಡ್ತೀರಿ? ಮದುವೆ ಆಗಿ ಅಂತ ಕೂತ್ಕೋತಿನಿ ಆಗ್ತೀರಾ’ ಎಂದು ನಮ್ರತಾ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕಾರ್ತಿಕ್​ಗೆ ಏನು ಉತ್ತರ ಹೇಳಬೇಕು ಎಂಬುದೇ ತಿಳಿದಿಲ್ಲ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಿಸಬಹುದು.

Shwetha M