ಚಾಲಕ ರಹಿತ ಮೆಟ್ರೋದ ಟೆಸ್ಟಿಂಗ್ ಪ್ರಕ್ರಿಯೆ ಶುರು – ಮೆಟ್ರೋ ಸಂಚಾರ ಆರಂಭ ಯಾವಾಗ?

ಚಾಲಕ ರಹಿತ ಮೆಟ್ರೋದ ಟೆಸ್ಟಿಂಗ್ ಪ್ರಕ್ರಿಯೆ ಶುರು – ಮೆಟ್ರೋ ಸಂಚಾರ ಆರಂಭ ಯಾವಾಗ?

ಬಹು ನಿರೀಕ್ಷಿತ ಚಾಲಕ ರಹಿತ ಮೆಟ್ರೋದ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಗುರುವಾರದಿಂದ ಮೊದಲ ಚಾಲಕ ರಹಿತ ಮೆಟ್ರೋದ ಟೆಸ್ಟಿಂಗ್ ಪ್ರಕ್ರಿಯೆ ನಡೆಯಲಿದೆ. ಆ ಮೂಲಕ ನಮ್ಮ ಮೆಟ್ರೋದ ಚಾಲಕ ರಹಿತ ಟ್ರೈನ್ ಶೀಘ್ರವೇ ಟ್ರ್ಯಾಕ್‌ಗೆ ಇಳಿಯಲಿವೆ.

ಇದನ್ನೂ ಓದಿ: ಪ್ರವಾಸಕ್ಕೆ ಹೋಗಿದ್ದ ಭಾರತೀಯರಿಗೆ ಕಾದಿತ್ತು ಶಾಕ್ – ಯುವಕರನ್ನು ಸೆರೆ ಹಿಡಿದು ಉಕ್ರೇನ್ ಯುದ್ಧಕ್ಕೆ ಕಳುಹಿಸಿದ ರಷ್ಯಾ.!

ಫೆ.14ರಂದು ಹೆಬ್ಬಗೋಡಿ ಡಿಪೋಗೆ ಚೀನಾದಿಂದ 6 ಬೋಗಿಗಳ ಡ್ರೈವರ್​ಲೆಸ್ ಮೆಟ್ರೋ ರೈಲು ಬಂದಿದ್ದವು. ಇದೀಗ ಬೋಗಿಗಳ ಜೋಡಣೆ ಕಾರ್ಯ ಮುಗಿದಿದೆ. ಗುರುವಾರದಿಂದ ಮೆಟ್ರೋದ ಮೊದಲ ಚಾಲಕ ರಹಿತ ಟೆಸ್ಟಿಂಗ್ ಪ್ರಕ್ರಿಯೆ ನಡೆಯಲಿದೆ.  R.V.ರಸ್ತೆಯಿಂದ ಬೊಮ್ಮಸಂದ್ರವರೆಗೆ 18.82 ಕಿ.ಮೀ. ರೈಲು ಚಲಿಸಲಿದೆ. ಹಳದಿ ಮಾರ್ಗದಲ್ಲಿ ಮೆಟ್ರೋದ ಚಾಲಕ ರಹಿತ ಟ್ರೈನ್ ಓಡಾಡಲಿದೆ. ಸದ್ಯ ಚಾಲಕ ರಹಿತ ಮೆಟ್ರೋ ರೈಲು ಹೆಬ್ಬಗೋಡಿ ಡಿಪೋದಲ್ಲಿದೆ.

ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ಸಂಚರಿಸಲಿದೆ. ಇದಕ್ಕಾಗಿ ನಾಲ್ಕು ತಿಂಗಳ ಕಾಲ 37 ಪರೀಕ್ಷೆಗಳು ನಡೆಯಲಿದೆ. ಬಳಿಕ ಸಂಶೋಧನಾ ವಿನ್ಯಾಸಗಳು ಮತ್ತು ಗುಣಮಟ್ಟ ಸಂಸ್ಥೆ, ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತರು, ಕಮಿಷನರ್ ಆಫ್ ಮೆಟ್ರೋ ರೈಲ್ವೆ ಸುರಕ್ಷತೆ ಮತ್ತು ರೈಲ್ವೆ ಮಂಡಳಿ ಅನುಮೋದನೆ ನೀಡಲಿದೆ.

ಹಳದಿ ಮಾರ್ಗ ಪ್ರಮುಖ ಮೆಟ್ರೋ ಕಾರಿಡಾರ್ ಆಗಿದ್ದು, ದಕ್ಷಿಣ ಬೆಂಗಳೂರನ್ನು ಎಲೆಕ್ಟ್ರಾನಿಕ್ ಸಿಟಿಯೊಂದಿಗೆ ಸಂಪರ್ಕಿಸುತ್ತೆ. ಚಾಲಕ ರಹಿತ ಮೆಟ್ರೋ ಅನುಭವಕ್ಕೆ ಸಿಟಿ ಮಂದಿ ಕಾತುರರಾಗಿದ್ದಾರೆ.

Shwetha M