ನಮ್ಮ ಮೆಟ್ರೋ ಪಿಂಕ್‌ ಲೈನ್‌ ಅ. 6,7 ಹಾಗೂ 8ರಂದು ಸುರಕ್ಷತಾ ಪರೀಕ್ಷೆ! – ಸಂಚಾರ ಆರಂಭ ಯಾವಾಗ?

ನಮ್ಮ ಮೆಟ್ರೋ ಪಿಂಕ್‌ ಲೈನ್‌ ಅ. 6,7 ಹಾಗೂ 8ರಂದು ಸುರಕ್ಷತಾ ಪರೀಕ್ಷೆ! – ಸಂಚಾರ ಆರಂಭ ಯಾವಾಗ?

ನಮ್ಮ ಮೆಟ್ರೋ ಪಿಂಕ್‌ ಲೈನ್‌ ಯಾವಾಗ ಉದ್ಘಾಟನೆಯಾಗಲಿದೆ ಎಂಬ ಪ್ರಶ್ನೆ ಆ ಭಾಗದ ಜನರನ್ನ ಕಾಡುತ್ತಿದೆ. ಇದೀಗ ಕಡೆಗೂ ಬಿಎಂಆರ್‌ಸಿಎಲ್‌ ಅಪ್‌ಡೇಟ್‌ ನೀಡಿದೆ. ಮೆಟ್ರೋ ಪಿಂಕ್ ಲೈನ್‌ನ ಸುರಕ್ಷತಾ ಕ್ರಮಗಳ ಕುರಿತು ಕೇಂದ್ರ ರೈಲು ಸುರಕ್ಷತಾ ಆಯೋಗ ಅ. 6,7 ಹಾಗೂ 8ರಂದು ಪರಿಶೀಲನೆ ನಡೆಸಲಿದೆ.

ಇದನ್ನೂ ಓದಿ: ಪಿತೃಪಕ್ಷದಲ್ಲಿ ಮಗು ಜನಿಸಿದರೆ ಅದು ಶುಭವೋ ಅಥವಾ ಅಶುಭವೋ? – ಶಾಸ್ತ್ರ ಏನ್ ಹೇಳುತ್ತೆ?

ಇದೇ ತಿಂಗಳು ನಮ್ಮ ಮೆಟ್ರೋ ಪಿಂಕ್‌ ಲೈನ್‌ ಉದ್ಘಾಟನೆಗೊಳ್ಳಲಿದೆ. ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. ರೈಲು ಸುರಕ್ಷತಾ ಆಯೋಗದ ಅಧಿಕಾರಿಗಳು ನಮ್ಮ ಮೆಟ್ರೋ ಪಿಂಕ್ ಲೈನ್ ಮಾರ್ಗದ ಸುರಕ್ಷತಾ ವಿಧಾನಗಳನ್ನು ಮೂರು ದಿನಗಳು ಪರಿಶೀಲನೆ ನಡೆಸಿದ ನಂತರ ಅಂತಿಮ ಹಂತದ ಸಿದ್ಧತೆ ಪೂರ್ಣಗೊಳ್ಳಲಿದೆ. ಈ ಪ್ರಕ್ರಿಯೆ ಮುಗಿದ ನಂತರ ಉದ್ಘಾಟನೆಗೆ ರಾಜ್ಯ ಸರ್ಕಾರ ಕೇಂದ್ರ ರೈಲ್ವೆ ಇಲಾಖೆಗೆ ಪತ್ರ ಬರೆದು ದಿನಾಂಕ ನಿಗದಿ ಮಾಡುವಂತೆ ಕೋರಲಿದೆ. ಉದ್ಘಾಟನಾ ದಿನಾಂಕ ನಿಗದಿಯಾಗುವ ಮುನ್ನ ಎಂ.ಜಿ.ರಸ್ತೆಯಿಂದ ತಾವರೆಕೆರೆವರೆಗೆ 7.5 ಕಿಲೋ ಮೀಟರ್ ಅಂತರದಲ್ಲಿ ಬರುವ 6 ಮೆಟ್ರೋ ನಿಲ್ದಾಣಗಳಿಗೆ ವಿವಿಧ ಸಾಧಕರ ಹೆಸರುಗಳನ್ನು ನಾಮಕರಣ ಮಾಡಲು ಸಿದ್ಧತೆ ನಡೆದಿದೆ. ಈ ಭಾಗವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಲ್ಲಾ ಠಾಣೆಗಳಿಗೆ ವಿವಿಧ ಸಾಧಕರ ಹೆಸರನ್ನು ಅಂತಿಮಗೊಳಿಸಲು ವ್ಯವಸ್ಥಾಪಕ ನಿರ್ದೇಶಕರ ಜೊತೆ ಚರ್ಚಿಸಲಿರುವುದಾಗಿ ಮೂಲಗಳು ತಿಳಿಸಿವೆ.

ಈ ಮಾಹಿತಿ ನೀಡಿರುವ ಅಧಿಕಾರಿಗಳು, ಇನ್ನೂ ಯಾವ ಹೆಸರುಗಳು ಎಂಬುದು ಚರ್ಚೆಯಾಗಿಲ್ಲ. ಮೆಟ್ರೋ ನಿಲ್ದಾಣಗಳ ನಾಮಕರಣ ಮಾಡಲು ಹಾಗೂ ಬದಲಾಯಿಸಲು ಒಂದು ನಿರ್ದಿಷ್ಟ ವಿಧಾನವಿದೆ. ಇದು ರಾಜ್ಯ ಮಟ್ಟದ ಸಮಿತಿಯ ಪರಿಶೀಲನೆಗೆ ಒಳಪಟ್ಟು, ನಂತರ ಭಾರತ ಸರ್ಕಾರಕ್ಕೆ ರವಾನೆಯಾಗಲಿದೆ. ನಿಗಮದ ಬಳಿ ಅಂತಹ ಹಲವರ ಹೆಸರುಗಳನ್ನು ಸೂಚಿಸಿರುವ ಪ್ರಸ್ತಾವನೆಗಳಿವೆ ಎಂದು ತಿಳಿಸಿದರು.

Shwetha M

Leave a Reply

Your email address will not be published. Required fields are marked *