ನಮ್ಮ ಮೆಟ್ರೋ ಹಳದಿ ಮಾರ್ಗ – ದೀಪಾವಳಿ ಹಬ್ಬಕ್ಕೆ BMRCLನಿಂದ ಸಿಹಿ ಸುದ್ದಿ?

ನಮ್ಮ ಮೆಟ್ರೋ ಹಳದಿ ಮಾರ್ಗ – ದೀಪಾವಳಿ ಹಬ್ಬಕ್ಕೆ BMRCLನಿಂದ ಸಿಹಿ ಸುದ್ದಿ?

ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಯಾವಾಗ ರೈಲು ಸಂಚಾರ ಯಾವಾಗ ಆರಂಭವಾಗುತ್ತೆ ಅಂತ ಕಾಯುತ್ತಿದ್ದವರಿಗೆ ಸಿಹಿಸುದ್ದಿಯೊಂದು ಇದೆ.   ಹಳದಿ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಮುಂದಿನ ದೀಪಾವಳಿ ಹೊತ್ತಿಗೆ ಮೆಟ್ರೋ ಆರಂಭವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಭಗಾಯ‌ ಕೆಲಸ ಕಿತ್ತುಕೊಂಡ್ಲಾ‌ ಭಾಗ್ಯ? – ಕುಸುಮಾ ಓವರ್‌ ಆ ಆಯ್ತಾ?

ಹೌದು, ಮೆಟ್ರೋ ಹಳದಿ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದೀಗ ಸುಮಾರು 19 ಕಿಲೋ ಮೀಟರ್ ಉದ್ದದ ಈ ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ವಿದ್ಯುದ್ದೀಕರಣ ಕಾರ್ಯ ಆರಂಭವಾಗಿದೆ.  ಒಟ್ಟು ಸುಮಾರು ಹದಿನಾರು ನಿಲ್ದಾಣಗಳನ್ನು ಹೊಂದಿರುವ ಈ ಮೆಟ್ರೋ ಹಳದಿ ಮಾರ್ಗದಲ್ಲಿ ವಿದ್ಯುದ್ದೀಕರಣ ಕಾರ್ಯ ಬಿರುಸಿನಿಂದ ಸಾಗುತ್ತಿದೆ. ಈ ಮಾರ್ಗದ ವಯಾಡಕ್ಟ್ ಮೂಲಕ ವಿದ್ಯುತ್ ಅನ್ನು ಹರಿಸಲಾಗುತ್ತಿದೆ.

750 ವೋಲ್ಟ್ ವಿದ್ಯುತ್ ಪ್ರವಹಿಸುವ ಮೂಲಕ ಹಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಅದನ್ನು ಮೆಟ್ರೋ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಸಮರ್ಪಕವಾಗಿ ವಿದ್ಯುತ್ ಪೂರೈಕೆ ಆಗುತ್ತಿದೆಯೇ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ. ಏಕೆಂದರೆ ಈ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ರೈಲುಗಳು ಓಡಲಿವೆ. ಹೀಗಾಗಿ ವಿಶೇಷ ಎಚ್ಚರಿಕೆ ವಹಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ಮಾಹಿತಿ ನೀಡಿವೆ.

ವಿದ್ಯುದ್ದೀಕರಣ ಜೊತೆಗೆ ಹೊಸ ಮೆಟ್ರೋ ಬೋಗಿಗಳನ್ನು ಪರೀಕ್ಷಿಸಲಾಗುತ್ತಿದೆ. ವಯಾಡಕ್ಟ್ ಮೂಲಕ ವಿದ್ಯುತ್ ಪ್ರವಹಿಸಿ ಹಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ನಂತರ ಪ್ರೊಟೋ ಟೈಪ್ ಮೆಟ್ರೋ ಬೋಗಿಗಳ ನಡುವೆ ಸಂಪರ್ಕ ಸಾಧಿಸುವ ಕಾರ್ಯ ಪ್ರಗತಿಯಲ್ಲಿದೆ. ಇದೆಲ್ಲ ಕಾರ್ಯಗಳು ಅಂತಿಮಗೊಳ್ಳುತ್ತಿದ್ದಂತೆ ಚೀನಾ ಕಂಪನಿ ನಿರ್ಮಿತ ಹಳದಿ ಮಾರ್ಗದ ರೈಲುಗಳಿಗೆ ಅನೇಕ ಪರೀಕ್ಷೆಗಳು ನಡೆಯಲಿವೆ. ಮುಂದಿನ ದೀಪಾವಳಿ ಹಬ್ಬದ ಹೊತ್ತಿಗೆ ಅಕ್ಟೋಬರ್ ತಿಂಗಳಲ್ಲಿ ಪ್ರಾಯೋಗಿಕ ಸಂಚಾರ ನಡೆಸುವ ನಿರೀಕ್ಷೆ ಇವೆ. ಇದರೊಂದಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಗರದ ಜನರಿಗೆ ವಾಣಿಜ್ಯ ಕಾರ್ಯಾಚರಣೆಯ ಬಗ್ಗೆ ಸಿಹಿ ಸುದ್ದಿ ನೀಡುವ ಸಾಧ್ಯತೆಗಳು ಇವೆ.

Shwetha M