ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಇನ್ಮುಂದೆ ಈ ಮಾರ್ಗದಲ್ಲಿ 7 ನಿಮಿಷಕ್ಕೊಂದು ರೈಲು ಸಂಚಾರ!

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಇನ್ಮುಂದೆ ಈ ಮಾರ್ಗದಲ್ಲಿ 7 ನಿಮಿಷಕ್ಕೊಂದು ರೈಲು ಸಂಚಾರ!

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್.‌ ಇನ್ಮುಂದೆ ಹಳದಿ ಮಾರ್ಗದಲ್ಲಿ ರೈಲಿಗಾಗಿ 10 ನಿಮಿಷ ಕಾಯುವ ಅಗತ್ಯವಿಲ್ಲ. ಕೇವಲ 7 ನಿಮಿಷಗಳಿಗೊಮ್ಮೆ ರೈಲು ಸಂಚರಿಸಲಿದೆ.

ಇದನ್ನೂ ಓದಿ: ಮುಂಗಾರಿನ ಕೊರತೆಯಿಂದ ಕಂಗೆಟ್ಟ ರೈತರು – ಉಪಗ್ರಹ ಚಿತ್ರಗಳಲ್ಲಿ ಮೋಡಗಳು ಸುಳಿವೇ ಇಲ್ಲ!

ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರವನ್ನ ಸಂಪರ್ಕಿಸುವ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಸುತ್ತಾರೆ. ಇದೀಗ ಹಳದಿ ಮಾರ್ಗಕ್ಕೆ 13ನೇ ರೈಲು ಸೇರ್ಪಡೆಯಾಗಿದೆ. 6 ಕೋಚ್‌ಗಳಿರುವ ಈ ರೈಲು ಈಗಾಗಲೇ ಹೆಬ್ಬಗೋಡಿ ಡಿಪೋವನ್ನ ತಲುಪಿದೆ. 13ನೇ ರೈಲು ಓಡಾಟ ಶುರು ಮಾಡಿದರೆ ಫೀಕ್‌ ಅವರ್‌ನಲ್ಲಿ ಕಾಯುವಿಕೆಯ ಟೈಮ್‌ ಇನ್ನಷ್ಟು ಕಡಿಮೆಯಾಗಲಿದೆ.

ಇನ್ನು ಬೇರೆ ಮಾರ್ಗಗಳಲ್ಲಿ ಸಂಚರಿಸುವಷ್ಟು ರೈಲುಗಳು ಈ ಮಾರ್ಗದಲ್ಲಿ ಸಂಚಾರ ಮಾಡೋದಿಲ್ಲ. ಬೇರೆ ಮಾರ್ಗಗಳಲ್ಲಿ ಫೀಕ್‌ ಟೈಮ್‌ನಲ್ಲಿ 2 ನಿಮಷಕ್ಕೊಮ್ಮೆ ರೈಲು ಸಂಚಾರ ಮಾಡಿದರೆ, ಈ ಮಾರ್ಗದಲ್ಲಿ ಪೀಕ್‌ ಟೈಮ್‌ನಲ್ಲಿ ಪ್ರತಿ 9 ನಿಮಿಷಕ್ಕೆ ಒಂದು ಟ್ರೇನ್‌ ಸಂಚಾರ ಮಾಡುತ್ತಿತ್ತು. ಇದು ಪ್ರಯಾಣಿಕರಿಗೆ ಬಹುದೊಡ್ಡ ತಲೆನೋವಾಗಿತ್ತು. 13ನೇ ರೈಲು ಓಡಾಟ ಶುರು ಮಾಡಿದರೆ, ಪೀಕ್‌ ಅವರ್‌ನಲ್ಲಿ ಪ್ರತಿ 7 ನಿಮಿಷಕ್ಕೆ ಒಂದು ಬಾರಿ ರೈಲು ಸಂಚಾರ ಮಾಡುತ್ತದೆ. ಹಾಗೇ, ನಾನ್‌ ಪೀಕ್‌ ಅವರನ್‌ನಲ್ಲಿ 10 ನಿಮಿಷಕ್ಕೆ ಒಂದು ಬಾರಿ ರೈಲು ಬರುತ್ತದೆ. ಇನ್ನು ಆಗಸ್ಟ್‌ ಹೊತ್ತಿಗೆ ಒಟ್ಟು 15 ರೈಲುಗಳನ್ನ ಈ ಮಾರ್ಗದಲ್ಲಿ ಓಡಿಸಲು BMRCL ಪ್ಲ್ಯಾನ್‌ ಮಾಡಿದ್ದು, ಹಾಗೊಮ್ಮೆ ಆದರೆ ಹಳದಿ ಮಾರ್ಗದಲ್ಲಿ ಪೀಕ್‌ ಅವರ್‌ನಲ್ಲಿ ಪ್ರತಿ 5 ನಿಮಿಷಕ್ಕೆ ಒಂದು ರೈಲು ಸಂಚಾರ ಮಾಡುವಂತೆ ಆಗುತ್ತದೆ. 13ನೇ ರೈಲು ಇನ್ನೂ ಸಂಚಾರ ಆರಂಭಿಸಿಲ್ಲ. ಅದು ಸಂಚಾರ ಪ್ರಾರಂಭ ಮಾಡುವ ಮೊದಲು ಸ್ಥಿರ, ಕ್ರಿಯಾತ್ಮಕವಾಗಿ ವಿವಿಧ ಟೆಸ್ಟ್‌ಗೆ ಒಳಪಡಬೇಕು. ಸುರಕ್ಷತಾ ಮೌಲ್ಯಮಾಪನಗಳು ದೃಢಪಡಬೇಕು. ಅದಾದ ಬಳಿಕವೇ BMRCLಯಿಂದ ಅನುಮತಿ ಸಿಗಲಿದೆ. ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗವು 19.15 ಕಿಮೀ ಇದೆ. ಇದರಲ್ಲಿ 16 ನಿಲ್ದಾಣಗಳಿವೆ. ನೀವು ಯಾವುದೇ ಭಾಗದಿಂದ ಆರ್‌.ವಿ.ರೋಡ್‌ಗೆ ಹೋಗಿ, ಅಲ್ಲಿಂದ ಎಲೆಕ್ಟ್ರಾನಿಕ್‌ ಸಿಟಿಗೆ ಹೋಗಬಹುದು.

Shwetha M