ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್! – ಇನ್ಮುಂದೆ 4 ನಿಮಿಷಗಳಿಗೊಮ್ಮೆ ರೈಲು ಸಂಚಾರ

ನಮ್ಮ ಮೆಟ್ರೋ ಬೆಂಗಳೂರಿಗರ ಜೀವನಾಡಿ. ಟ್ರಾಫಿಕ್ ಸಮಸ್ಯೆಯಿಂದ ಸುಸ್ತಾಗಿರುವವರು ಬಹುತೇಕ ಇತ್ತೀಚೆಗೆ ಮೆಟ್ರೋಗೆ ಅವಲಂಬಿತರಾಗಿದ್ದಾರೆ. ನಿತ್ಯ ಲಕ್ಷಾಂತರ ಮಂದಿ ನಮ್ಮ ಮೆಟ್ರೋದಲ್ಲೇ ಪ್ರಯಾಣಿಸುತ್ತಿದ್ದಾರೆ. ಇದೀಗ ಬೆಂಗಳೂರಿಗರಿಗೆ ಖುಷಿ ಸುದ್ದಿಯಿದೆ. ಇನ್ನುಮುಂದೆ 4 ನಿಮಿಷಗಳಿಗೊಮ್ಮೆ ನಮ್ಮ ಮೆಟ್ರೋ ಸಂಚರಿಸಲಿದೆ.
ಇದನ್ನೂ ಓದಿ: ಸ್ಪಂದನಾ ಕ್ಯಾಪ್ಟನ್ಸಿಯಿಂದ ಕಿಕ್ ಔಟ್? – ವಿಲನ್‌ಗಳಿಗೆ ಚೈತ್ರಾ ಹೊಸ ನಾಯಕಿ!
ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ನಮ್ಮ ಮೆಟ್ರೋ ಪ್ರಮುಖ ಪಾತ್ರ ವಹಿಸಿದೆ. ಇವುಗಳ ನಡುವಿನ ಸಂಚಾರ ಸಮಯ ಮತ್ತಷ್ಟು ಇಳಿಕೆಯಾದಲ್ಲಿ, ಪ್ರಯಾಣಿಕರ ಸಂಖ್ಯೆಯೂ ಹೆಚ್ಚಳವಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ರೈಲುಗಳ ಸಂಖ್ಯೆಯನ್ನ ಕೂಡ ಹೆಚ್ಚಳ ಮಾಡುತ್ತಿದೆ. ಇದೀಗ ಒಂದೆರಡಲ್ಲ ಬರೋಬ್ಬರಿ 96 ಹೊಸ ರೈಲುಗಳ ನಮ್ಮ ಮೆಟ್ರೋಗೆ ಬರುತ್ತಿದ್ದು, ಅವುಗಳು ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆ 4 ನಿಮಿಷಕ್ಕೊಂದರಂತೆ ರೈಲು ಸಂಚಾರಕ್ಕೆ ಸಿದ್ಧತೆ ನಡೆದಿದೆ.
ನಮ್ಮ ಮೆಟ್ರೋ ಬಳಿ ಸದ್ಯ ಗ್ರೀನ್, ಪರ್ಪಲ್, ಯೆಲ್ಲೋ ಲೈನ್ಗಳು ಸೇರಿ ಒಟ್ಟು 64 ರೈಲುಗಳಿವೆ. ಆ ಪೈಕಿ ಗ್ರೀನ್ ಲೈನ್, ಪರ್ಪಲ್ ಲೈನ್ನಲ್ಲಿ 58, ಯೆಲ್ಲೋ ಲೈನ್ನಲ್ಲಿ 6 ರೈಲುಗಳು ಹಾಲಿ ಕಾರ್ಯಾಚರಣೆ ನಡೆಸುತ್ತಿವೆ. ಈಗ ಇರುವ ಲೈನ್ಗಳಿಗೆ ಹೊಸ ರೈಲುಗಳು ಸೇರಿ, ಇನ್ನೂ ಆರಂಭವಾಗಬೇಕಿರುವ ಬ್ಲೂ ಮತ್ತು ಪಿಂಕ್ ಲೈನ್ಗಳಿಗೂ ರೈಲುಗಳನ್ನ ಆರ್ಡರ್ ನೀಡಲಾಗಿದೆ. ಇವುಗಳೆಲ್ಲ ಆಗಮಿಸಿದ ಬಳಿಕ ಹಾಲಿ ಇರುವ ನಮ್ಮ ಮೆಟ್ರೋ ರೈಲುಗಳ ಸಂಖ್ಯೆ 160ಕ್ಕೆ ಏರಿಕೆಯಾಗಲಿದೆ.
ಯಾವ ಲೈನ್ಗೆ ಎಷ್ಟು ಹೊಸ ರೈಲು?
- ಗ್ರೀನ್ ಮತ್ತು ಪರ್ಪಲ್ ಲೈನ್ಗೆ 21 ಹೊಸ ರೈಲು
- ಯೆಲ್ಲೋ ಲೈನ್ಗೆ 9 ಹೊಸ ರೈಲು, ಇವುಗಳ ಜೊತೆ ಹೆಚ್ಚುವರಿಯಾಗಿ 6 ರೈಲುಗಳ ಆರ್ಡರ್
- ಬ್ಲ್ಯೂ ಲೈನ್ಗೆ 37 ಹೊಸ ರೈಲು. ಆ ಪೈಕಿ ಸಿಲ್ಕ್ ಬೋರ್ಡ್ ಟು ಕೆಆರ್ ಪುರ 16 ರೈಲು ಮತ್ತು ಕೆ.ಆರ್. ಪುರ ಟು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 21 ರೈಲು
- ಪಿಂಕ್ ಲೈನ್ಗೆ 26 ಹೊಸರೈಲು, ಇವುಗಳ ಜೊತೆ ಹೆಚ್ಚುವರಿಯಾಗಿ 7 ರೈಲುಗಳ ಆರ್ಡರ್

ನೋಡಿರಿ

