ಡ್ರೈವರ್‌ ಇಲ್ಲದೇ ಓಡುತ್ತೆ ನಮ್ಮ ಮೆಟ್ರೋ! – ಹೊಸ ಸೇವೆ ಶೀಘ್ರದಲ್ಲೇ ಆರಂಭ!

ಡ್ರೈವರ್‌ ಇಲ್ಲದೇ ಓಡುತ್ತೆ ನಮ್ಮ ಮೆಟ್ರೋ! – ಹೊಸ ಸೇವೆ ಶೀಘ್ರದಲ್ಲೇ ಆರಂಭ!

ಸಿಲಿಕಾನ್‌ ಸಿಟಿ ಬೆಂಗಳೂರಿನ ಜನರಿಗೆ ಖುಷಿ ಸುದ್ದಿಯೊಂದಿದೆ. ನಮ್ಮ ಮೆಟ್ರೋ ಹೊಸ ಸೌಲಭ್ಯವನ್ನು ಪ್ರಯಾಣಿಕರಿಗೆ ಪರಿಚಯಿಸಲು ಮುಂದಾಗಿದೆ. ಇನ್ನುಮುಂದೆ ಚಾಲಕರಿಲ್ಲದೇ ನಮ್ಮ ಮೆಟ್ರೋ ಸಂಚರಿಸಲಿದೆ.

ಹೌದು, ಇನ್ನುಮುಂದೆ ನಮ್ಮ ಮೆಟ್ರೋ ಚಾಲಕರಿಲ್ಲದೇ ಸಂಚರಿಸಲಿದೆ. ಬೆಂಗಳೂರಿನ ನಮ್ಮ ಮೆಟ್ರೋದ ಮೊದಲ ಚಾಲಕರಹಿತ ರೈಲು ಅಕ್ಟೋಬರ್ ತಿಂಗಳಲ್ಲಿ ಸೇವೆ ನೀಡುವ ಸಾಧ್ಯತೆ ಇದೆ. ನಮ್ಮ ಮೆಟ್ರೋದ ಹಳದಿ ಮಾರ್ಗದ ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಮೊದಲ ಚಾಲಕರಹಿತ ರೈಲು ನಿಯೋಜಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಹಣವಿಲ್ಲದೆ ಪರದಾಡುತ್ತಿದ್ದಾರೆ ಭಾರತದ ನಂಬರ್ 1 ಟೆನ್ನಿಸ್ ತಾರೆ – ಟೆನ್ನಿಸ್ ಆಟಗಾರರಿಗೆ ಭಾರತದಲ್ಲಿ ಬೆಲೆಯೇ ಇಲ್ವಾ..?

ಚಾಲಕರಹಿತ ರೈಲು ಚೀನಾದಿಂದ ಭಾರತಕ್ಕೆ ಆಮದಾಗಲಿದೆ. ಆದರೆ ಚೀನಾದ ಸಿಆರ್‌ಆರ್‌ಸಿ ಎಂಜಿನಿಯರ್‌ಗಳು ರೈಲುಗಳ ಪರೀಕ್ಷೆ ಮತ್ತು ಕಾರ್ಯಾರಂಭಕ್ಕಾಗಿ ಬೆಂಗಳೂರಿಗೆ ಪ್ರಯಾಣಿಸಲು ವೀಸಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೆಟ್ರೋ ವಿಸ್ತರಣೆ ಕಾಮಗಾರಿಗಳು ನಡೆಯುತ್ತಲೇ ಇದ್ದು, ಇಡೀ ಸಿಲಿಕಾನ್ ಸಿಟಿಯನ್ನು ಆವರಿಸಿಕೊಳ್ಳಲಿದೆ. ವಿಶೇಷವಾಗಿ ವಿದ್ಯಾರ್ಥಿಗಳು, ನೌಕರರು, ಐಟಿ ಕಂಪನಿ ಉದ್ಯೋಗಿಗಳು ಇವರೆಲ್ಲರೂ ಮೆಟ್ರೋವನ್ನು ಅವಲಂಬಿಸಿದ್ದಾರೆ. ಇದೀಗ ನಮ್ಮ ಮೆಟ್ರೋ ಚಾಲಕರಹಿತ ಸೇವೆ ಒದಗಿಸಲು ರೆಡಿ ಆಗಿದ್ದು ಪ್ರಯಾಣಿಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ.

Shwetha M