ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಮುಕ್ತಿ! – ಈ ಮಾರ್ಗದಲ್ಲಿ ಹೊಸ ಮೆಟ್ರೋ ಆರಂಭ

ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಮುಕ್ತಿ! – ಈ ಮಾರ್ಗದಲ್ಲಿ ಹೊಸ ಮೆಟ್ರೋ ಆರಂಭ

ಸಿಲಿಕಾನ್ ಸಿಟಿಯ ಬಹುನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್ ಲೈನ್ ಸಂಚಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ಈ ಮಾರ್ಗದ ಮೊದಲ ಹಂತದ ಉದ್ಘಾಟನೆಗೆ ಸಿದ್ಧತೆಗಳು ವೇಗ ಪಡೆದುಕೊಂಡಿದ್ದು, ಜೂನ್ ತಿಂಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗುವುದು ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ : ಮಾಜಿ ಪತ್ನಿ ಮರೆತು ಹೊಸ ಗೆಳತಿ ಜೊತೆ ಬಾಳಲು ಹಾರ್ದಿಕ್‌ ರೆಡಿ! – ಮಹಿಕಾ – ಪಾಂಡ್ಯ ಮದುವೆಗೆ ಮುಹೂರ್ತ ಫಿಕ್ಸ್?‌

ಕಾಳೇನ ಅಗ್ರಹಾರದಿಂದ ತಾವರೆಕೆರೆ ಪಿಂಕ್‌ ಲೈನ್‌ ನಮ್ಮ ಮೆಟ್ರೋ ಯೋಜನೆಯ ಭಾಗವಾಗಿ ದಕ್ಷಿಣ ಭಾಗದಲ್ಲಿರುವ ಎಲಿವೇಟೆಡ್ ಸ್ಟ್ರೆಚ್​​ನಲ್ಲಿ ಟ್ರಯಲ್​ ರನ್ ಅನ್ನು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಯಶಸ್ವಿಯಾಗಿ ಪೂರ್ತಿಗೊಳಿಸಿದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆ ನಡುವಿನ ಈ ಮಾರ್ಗದಲ್ಲಿ ಶೀಘ್ರವೇ ಮೆಟ್ರೋ ರೈಲು ಓಡಾಟ ನಡೆಸಲಿದೆ. ಇದರೊಂದಿಗೆ ಈ ಮಾರ್ಗದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಅನುಕೂಲ ಆಗಲಿದೆ.

ರಿಸರ್ಚ್​ ಡಿಸೈನ್ ಅಂಡ್ ಸ್ಟಾಂಡರ್ಡ್ಸ್ ಆರ್ಗನೈಜೇಷನ್ (ಆರ್​ಡಿಎಸ್​ಒ) ಕಳೆದ ಕೆಲವು ದಿನಗಳಿಂದ ನಡೆಸಿದ ಪರಿಶೀಲನೆಗಳು ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಟ್ರಯಲ್ಸ್‌ನಲ್ಲಿ ಟ್ರ್ಯಾಕ್, ಸಿಗ್ನಲಿಂಗ್ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಲಾಗಿದ್ದು, ಪರೀಕ್ಷೆಗಳು ಯಶಸ್ವಿಯಾಗಿ ನಡೆದ ಕಾರಣ ಮೆಟ್ರೋ ಪ್ರಾರಂಭಕ್ಕೆ ಇದ್ದ ಬಹುದೊಡ್ಡ ಸವಾಲು ದೂರವಾಗಿದೆ. ಇದರೊಂದಿಗೆ ಬನ್ನೇರುಘಟ್ಟ ರಸ್ತೆ ಮಾರ್ಗದಲ್ಲಿ ಪ್ರಯಾಣಿಸುವವರಿಗೆ ಸುಲಭ ಹಾಗೂ ತ್ವರಿತ ಸಾರಿಗೆ ಸೌಲಭ್ಯ ಸಿಗಲಿದೆ. ಇದು ಟ್ರಾಫಿಕ್ ಸಮಸ್ಯೆಗೆ ಬಿಗ್ ಬ್ರೇಕ್ ಹಾಕುವ ನಿರೀಕ್ಷೆ ಇದೆ.

ಪಿಂಕ್‌ ಲೈನ್ ಹೊಸ ಮಾರ್ಗದಲ್ಲಿ ಭದ್ರತೆ ಪರಿಶೀಲನೆಯನ್ನು ಬಿಎಂಆರ್​ಸಿಎಲ್ ಕೈಗೊಳ್ಳುತ್ತಿದೆ. ಶೀಘ್ರವೇ ಮೆಟ್ರೋ ರೈಲ್ವೆ ಸೆಫ್ಟಿ ಕಮಿಷನರ್ ಪರಿಶೀಲನೆಗೆ ಆಹ್ವಾನವನ್ನು ನೀಡಲಿದೆ. ಸಿಎಂಆರ್​ಎಸ್‌ನಿಂದ ಗ್ರೀನ್ ಸಿಗ್ನಲ್ ಬರುತ್ತಿದ್ದಂತೆ ಅಧಿಕೃತ ಆರಂಭದ ದಿನಾಂಕವೂ ಫೈನಲ್ ಆಗಲಿದೆ. ಸದ್ಯ ಅಂಡರ್​​ಗ್ರೌಂಡ್ ಕೆಲಸಗಳು ನಡೆಯುತ್ತಿದ್ದು, ಐದು ಪ್ರಮುಖ ಸ್ಟೇಷನ್‌ಗಳನ್ನು ಒಳಗೊಂಡಿರುವ ಈ ಮಾರ್ಗವನ್ನು ಪ್ರಯಾಣಿಕರಿಗೆ ಲಭ್ಯವಾಗುವಂತೆ ಮಾಡಲಿದ್ದಾರೆ.

ಕಳೇನಾ ಅಗ್ರಹಾರ, ದಕ್ಷಿಣ ಟರ್ಮಿನಲ್ ಮತ್ತು ನೈಸ್ ರಸ್ತೆ ಸೇರಿದಂತೆ ಶಿಕ್ಷಣ ಸಂಸ್ಥೆಗಳು, ಕಚೇರಿಗಳು, ಪ್ರದೇಶಗಳು ಬರುವುದರಿಂದ ಜನದಟ್ಟಣೆಯನ್ನು ನಿಯಂತ್ರಣ ಮಾಡಲು ಈಗಾಗಲೇ ಮೆಟ್ರೋ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹೊಸ ಮೆಟ್ರೋ ನಿಲ್ದಾಣದಿಂದ ವಿವಿಧ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ಬಿಎಂಟಿಸಿ ಫೀಡರ್ ಬಸ್ ಗಳನ್ನು ಆರಂಭ ಮಾಡಲಿದೆ. ಇದರಿಂದ ಲಾಸ್ಟ್ ಮೈಲ್ ಕನೆಕ್ಟಿವಿಟಿ ಸುಲಭವಾಗುತ್ತದೆ. ಪ್ರಯಾಣಿಕರು ತಮ್ಮ ಹಳೆಯ ಸ್ಮಾರ್ಟ್ ಕಾರ್ಡ್‌ಗಳನ್ನು ಇಲ್ಲಿ ಬಳಕೆ ಮಾಡಬಹುದಾಗಿದೆ.

ಮೆಟ್ರೋ ಆರಂಭವಾದರೆ ಸ್ಥಳೀಯ ರಿಯಲ್ ಎಸ್ಟೇಟ್ ರಂಗ ಕೂಡ ಬಿಗ್ ಬೂಸ್ಟ್ ಪಡೆದುಕೊಳ್ಳಲಿದೆ. ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು (ಐಐಎಂಬಿ) ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಬಾಡಿಗೆಗಳು ಹೆಚ್ಚಾಗುವ ನಿರೀಕ್ಷೆ ಇದೆ.‌ ಮೆಟ್ರೋ ಲಭ್ಯವಾದರೆ ಉದ್ಯೋಗಿಗಳು ಕೂಡ ಈ ಪ್ರದೇಶದಲ್ಲಿ ವಾಸಿಸಲು ಇಷ್ಟ ಪಡುತ್ತಾರೆ. ಉತ್ತಮ ಸಾರಿಗೆ ವ್ಯವಸ್ಥೆ ಇದ್ದರೆ ಕ್ರಮವಾಗಿ ಇಲ್ಲಿನ ಭೂಮಿಯ ಬೆಲೆ ಕೂಡ ಡಬಲ್ ಆಗುತ್ತದೆ. ಬೆಂಗಳೂರು ದಕ್ಷಿಣ ವಾಸಿಗಳ ಟ್ರಾಫಿಕ್ ಸಮಸ್ಯೆಯನ್ನು ಪಿಂಕ್ ಲೈನ್ ಬಹುತೇಕ ದೂರ ಮಾಡಲಿದೆ. ಅದರಲ್ಲೂ ಪ್ರಮುಖ ರಸ್ತೆಗಳ ಮೇಲಿರುವ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗಲಿದೆ.

ಮೆಟ್ರೋ ಆರಂಭಕ್ಕೆ ಅಂತಿಮ ಹಂತದ ಅನುಮತಿಗಳನ್ನು ಪಡೆಯುವ ಪ್ರಕ್ರಿಯೆ ವೇಗವಾಗಿ ಸಾಗುತ್ತಿದೆ. ಮೆಟ್ರೋ ಯಾವಾಗ ಆರಂಭ ಆಗುತ್ತಿದೆ ಎಂದು ಜನರು ಆಸಕ್ತಿಯಿಂದ ಕಾಯುತ್ತಿದ್ದು, ನಗರ ಮೂಲಸೌಲಭ್ಯಗಳ ಅಭಿವೃದ್ಧಿಗೆ ಈ ಯೋಜನೆ ಪ್ರಮುಖ ಕೊಡುಗೆ ನೀಡಲಿದೆ.

Shwetha M

Leave a Reply

Your email address will not be published. Required fields are marked *