ನಮ್ಮ ಮೆಟ್ರೋ ಪಿಂಕ್‌ ಲೈನ್‌ ಬಗ್ಗೆ ಬಿಗ್‌ ಅಪ್‌ಡೇಟ್!‌ – ಗುಲಾಬಿ ಮಾರ್ಗ 7.5 ಕಿ.ಮೀ ಮಾರ್ಗ ಉದ್ಘಾಟನೆಗೆ ಸಿದ್ಧ!

ನಮ್ಮ ಮೆಟ್ರೋ ಪಿಂಕ್‌ ಲೈನ್‌ ಬಗ್ಗೆ ಬಿಗ್‌ ಅಪ್‌ಡೇಟ್!‌ – ಗುಲಾಬಿ ಮಾರ್ಗ 7.5 ಕಿ.ಮೀ ಮಾರ್ಗ ಉದ್ಘಾಟನೆಗೆ ಸಿದ್ಧ!

ಸಿಲಿಕಾನ್‌ ಸಿಟಿ ಮಂದಿಗೆ ನಮ್ಮ ಮೆಟ್ರೋ ಸಾರಿಗೆ ಜೀವನಾಡಿದೆ. ನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಸುತ್ತಿದ್ದಾರೆ. ನಮ್ಮ ಮೆಟ್ರೋ ಪಿಂಕ್‌ ಲೈನ್‌ ಸಂಚಾರಕ್ಕೆ ಮುಕ್ತ ಯಾವಾಗ ಎಂದು ಪ್ರಯಾಣಿಕರು ಕೇಳುತ್ತಲೇ ಇದ್ದರು. ಇದೀಗ ಪಿಂಕ್‌ ಲೈನ್‌ ಸಂಚಾರದ ಬಗ್ಗೆ ಅಪ್‌ಡೇಟ್‌ ಸಿಕ್ಕಿದೆ.

ಇದನ್ನೂ ಓದಿ: ಈ ಸೈಡ್ ತಿರುಗಿ ಮಲಗಿದ್ರೆ ಆರೋಗ್ಯಕ್ಕೆ ಉತ್ತಮ? – ಮಲಗೋ ಮುನ್ನ ಈ ವಿಚಾರ ತಿಳ್ಕೊಳ್ಳಿ!

ದೇಶದ ಅತಿ ಎತ್ತರದ ಮೆಟ್ರೋ ಸ್ಟೇಷನ್‌ ಎಂಬ ಹೆಗ್ಗಳಿಕೆ ಹೊಂದಿರುವ ಜಯದೇವ ಜಂಕ್ಷನ್‌ ಹಾಗೂ ಐದು ಹಂತದ ಸಾರಿಗೆ ಸಂಪರ್ಕ ಇರುವ ಪಿಂಕ್‌ ಲೈನ್‌ ಶೀಘ್ರದಲ್ಲೇ ಲೋಕಾರ್ಪಣೆಯಾಗುವ ಸಾಧ್ಯತೆಯಿದೆ.  ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರವನ್ನು ತಾವರೆಕೆರೆಗೆ ಸಂಪರ್ಕಿಸುವ ಪಿಂಕ್ ಲೈನ್‌ನ 7 ಕಿಲೋಮೀಟರ್ ಎತ್ತರದ ವಿಭಾಗವನ್ನು ಸೆಪ್ಟೆಂಬರ್‌ನಲ್ಲಿ ಸಾರ್ವಜನಿಕ ಸೇವೆಗೆ ತೆರೆಯಲು ಬಿಎಂಆರ್‌ಸಿಎಲ್‌ ಸಿದ್ಧತೆ ಮಾಡಿಕೊಂಡಿದೆ. ಸೆಪ್ಟೆಂಬರ್‌ ಅಂತ್ಯದ ವೇಳೆಗೆ ಉದ್ಘಾಟನೆಗೆ ಸಂಬಂಧಿಸಿದಂತೆ ಭಾರತ ಸರ್ಕಾರದಿಂದ ದಿನಾಂಕ ನಿಗದಿಯಾಗುವ ನಿರೀಕ್ಷೆಯಿದೆ ಎಂದು ತಿಳಿಸಲಾಗಿದೆ.

ಪಿಂಕ್‌ ಮಾರ್ಗ ಉದ್ಘಾಟನೆಗೂ ಮುನ್ನ ಮಾರ್ಗದ ಸಿದ್ಧತೆ ಹಾಗೂ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಲು ಈಗಾಗಲೇ ಸಂಸದ ತೇಜಸ್ವಿ ಸೂರ್ಯ, ಶಾಸಕ ಎಂ. ಕೃಷ್ಣಪ್ಪ, ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಪಿ.ಸಿ. ಜಾಫರ್ ಹಾಗೂ ಅಧಿಕಾರಿಗಳೊಂದಿಗೆ ಟ್ರಯಲ್ ರನ್ ನಡೆಸಲಾಗಿದೆ. ಟ್ರಯಲ್ ರನ್ ವೇಳೆ ಮಾರ್ಗದ ವಿವಿಧ ಹಂತಗಳ ಸಿದ್ಧತೆ, ಸುರಕ್ಷತಾ ವ್ಯವಸ್ಥೆಗಳು ಹಾಗೂ ಸಾರ್ವಜನಿಕ ಸೇವೆ ಆರಂಭಿಸುವ ಮುನ್ನ ಪೂರ್ಣಗೊಳಿಸಬೇಕಿರುವ ಕಾರ್ಯಗಳ ಕುರಿತು ಪರಿಶೀಲನೆ ನಡೆಸಲಾಗಿದೆ.  7.5 ಕಿ.ಮೀ ಉದ್ದದ ಈ ಮಾರ್ಗ ಸಾರ್ವಜನಿಕರಿಗೆ ಮುಕ್ತವಾದ ಬಳಿಕ, ಈ ಭಾಗದ ಪ್ರಯಾಣಿಕರಿಗೆ ಮೆಟ್ರೋ ಸಂಪರ್ಕ ಮತ್ತಷ್ಟು ಸುಲಭವಾಗಲಿದೆ.

Shwetha M

Leave a Reply

Your email address will not be published. Required fields are marked *